ಕಾಗೇರಿಗೆ ಟೋಪಿ ಕುತ್ತು! ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದೇನು ಗೊತ್ತಾ?

267

ಕಾರವಾರ:- ಉತ್ತರ ಕನ್ನಡ (uttra Kannada ) ಜಿಲ್ಲೆಯ ಲೋಕಸಭಾ ಟಿಕೆಟ್ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ (vishveshvara hegde kageri) ರವರಿಗೆ ಘೋಷಣೆ ಆಗುತಿದ್ದಂತೆ ಬಿಜೆಪಿ (bjp) ಕಾರ್ಯಕರ್ತರಲ್ಲೇ ಆಂತರಿಕ ಅಸಮಧಾನ ಹೊರಹುಮ್ಮಿದ್ದು ಪರ ವಿರೋಧಗಳು ಕೇಳಿಬರುತ್ತಿದೆ.

ಇದೀಗ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು 2013 ರಲ್ಲಿ ಶಿರಸಿ ನಗರದ ಕಸ್ತೂರಬಾ ನಗರದ 14 ನೇ ವಾರ್ಡ ನಲ್ಲಿ ಮುಸ್ಲಿಂ ಜನಾಂಗದ ಇಪ್ತಿಯಾರ್ ಕೂಟದಲ್ಲಿ ಮುಸ್ಲಿಂ ಜನಾಂಗದವರೊಂದಿಗೆ ಟೋಪಿ ಹಾಕಿ ಕುಳಿತ ಫೋಟೋಗಳೀಗ ಅನಂತಕುಮಾರ್ ಹೆಗಡೆ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ (Social media )ಹಾಕುವ ಮೂಲಕ ಅಕ್ರೋಶ ಹೊರಹಾಕಿದ್ದಾರೆ.

ಸದ್ಯ ಅನಂತಕುಮಾರ್ ಹೆಗಡೆ ಶಿರಸಿಯಲ್ಲಿ ತಮ್ಮ ಮನೆಯಲ್ಲಿ ಮೌನ ಕ್ಕೆ ಜನರಿದ್ದಾರೆ. ಕಾಗೇರಿ ಸಹ ಅನಂತಕುಮಾರ್ ಹೆಗಡೆ ಸಂಪರ್ಕ ಮಾಡಿ ಬೆಂಬಲ ಕೋರುವ ಇಂಗಿತ ವ್ಯಕ್ತಪಡಿಸಿದ್ದರೂ, ಸದ್ಯಕ್ಕೆ ಸಾಧ್ಯವಾಗುತ್ತಿಲ್ಲ.ಆದರೇ ಕಾಗೇರಿ ಪೋಸ್ಟ್ ಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತಿದ್ದು ಪರ ವಿರೋಧಗಳ ಚರ್ಚೆ ನಡೆಯುತ್ತಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!