Rain alert| ಹಲವು ಜಿಲ್ಲೆಗಳಲ್ಲಿ ಮೂರು ದಿ‌ನ ಮಳೆ ಎಚ್ಚರಿಕೆ-ಇಂದು ಎಲ್ಲೆಲ್ಲಿ ಮಳೆ ಬೀಳಲಿದೆ ವಿವರ ಇಲ್ಲಿದೆ.

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಭಾರೀ ಮಳೆಯ ಎಚ್ಚರಿಕೆ ನೀಡಿರುವ ಹವಾಮಾನ ಇಲಾಖೆ, ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ಉಡುಪಿ, ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಮಳೆ ಆರ್ಭಟ ಹೆಚ್ಚಾಗಲಿದೆ.
kannadavani. rain image kannadavani. rain image

Rain alert| ಹಲವು ಜಿಲ್ಲೆಗಳಲ್ಲಿ ಮೂರು ದಿ‌ನ ಮಳೆ ಎಚ್ಚರಿಕೆ-ಇಂದು ಎಲ್ಲೆಲ್ಲಿ ಮಳೆ ಬೀಳಲಿದೆ ವಿವರ ಇಲ್ಲಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 3 ದಿನ ಭಾರೀ ಮಳೆ(rain) ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಇನ್ನು ಮೇ 25 ರಂದು ಕೇರಳಕ್ಕೆ ನೈಋುತ್ಯ ಮಾನ್ಸೂನ್ ಪ್ರವೇಶವಾಗಲಿದೆ. ಕರ್ನಾಟಕಕ್ಕೆ ಜೂನ್ ಮೊದಲ ವಾರದಲ್ಲಿ ನೈಋತ್ಯ ಮಾನ್ಸೂನ್ ಪ್ರವೇಶಿಸುವ ಸಾಧ್ಯತೆ ಇದೆ.

ಸಾಮಾನ್ಯವಾಗಿ ಕೇರಳಕ್ಕೆ ನೈಋತ್ಯ ಮಾನ್ಸೂನ್‌ ಪ್ರವೇಶ ಮಾಡಿದ ನಂತರ ಒಂದು ವಾರ ಅಥವಾ 15 ದಿನಗಳ ಅವಧಿಯಲ್ಲಿ ನೈಋತ್ಯ ಮಾನ್ಸೂನ್ ಕರ್ನಾಟಕಕ್ಕೆ ಪ್ರವೇಶಿಸುತ್ತದೆ. ಹೀಗಾಗಿ, ಕರ್ನಾಟಕದಲ್ಲೂ ಈ ಬಾರಿ ಉತ್ತಮ ಮಳೆ ಆಗುವ ನಿರೀಕ್ಷೆ ಇದೆ.

Advertisement

ಮುಂದಿನ 3-4 ದಿನಗಳಲ್ಲಿ ಆಗ್ನೇಯ ಅರೇಬಿಯನ್ ಸಮುದ್ರದ ಕೆಲವು ಭಾಗಗಳು, ಕೊಮೊರಿನ್ ಪ್ರದೇಶ, ನೈಋತ್ಯ ಮತ್ತು ಆಗ್ನೇಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳು, ಅಂಡಮಾನ್ ಸಮುದ್ರದ ಉಳಿದ ಭಾಗಗಳು ಮತ್ತು ಪೂರ್ವ-ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳಿಗೆ ನೈಋುತ್ಯ ಮಾನ್ಸೂನ್ ಮತ್ತಷ್ಟು ಮುನ್ನಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿವೆ.

ಮೇ 25 ರಂದು ಕೇರಳದಲ್ಲಿ ನೈಋುತ್ಯ ಮಾನ್ಸೂನ್ ಪ್ರಾರಂಭವಾಗುವ ಸಾಧ್ಯತೆ ಇದೆ. ಈಶಾನ್ಯ ಮಾನ್ಸೂನ್ ಈಗ ಪಶ್ಚಿಮ ಮಧ್ಯಪ್ರದೇಶದಿಂದ ಮಧ್ಯ ಮಹಾರಾಷ್ಟ್ರ , ಮಾರಾಠವಾಡ ಮತ್ತು ಉತ್ತರ ಕರ್ನಾಟಕದ ಮೂಲಕ ದಕ್ಷಿಣ ಒಳನಾಡಿನ ಕರ್ನಾಟಕದ ವರೆಗೆ ಸಾಗುತ್ತದೆ. ಸರಾಸರಿ ಸಮುದ್ರ ಮಟ್ಟಕ್ಕಿಂತ 1.5 ಕಿ.ಮೀ ವರೆಗೆ ವಿಸ್ತರಿಸುತ್ತದೆ. ದಕ್ಷಿಣ ಕರಾವಳಿಯ ಆಂಧ್ರಪ್ರದೇಶ ಮತ್ತು ನೆರೆಹೊರೆಗಳಲ್ಲಿ ಸರಾಸರಿ ಸಮುದ್ರ ಮಟ್ಟಕ್ಕಿಂದ 3.1 ಮತ್ತು 5.8 ಕಿ.ಮೀ. ನಡುವೆ ಮೇಲ್ಭಾಗದ ವಾಯು ಚಂಡ ಮಾರುತದ ಪ್ರಸರಣ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಕರ್ನಾಟಕದ ದಲ್ಲಿ ಎಲ್ಲೆಲ್ಲಿ ಮಳೆ.

ಚಂಡಮಾರುತದ ಪ್ರಸರಣದ ಪ್ರಭಾವದಿಂದಾಗಿ ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಭಾಗಗಲ್ಲಿ ಮೇ 24ರ ವರೆಗೂ ಮಳೆ ಆರ್ಭಟ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿಯು ಉಲ್ಲೇಖಿಸಿದೆ.

Karnataka Budget| 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ | ಬಜೆಟ್ Updates.

ಕರಾವಳಿಯ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಮಳೆ(rain) ಆರ್ಭಟ ಜೋರಾಗಿ ಇರಲಿದೆ. ಈ ಭಾಗಗಳಲ್ಲಿ ಆಲಿಕಲ್ಲು, ಬಿರುಗಾಳಿ ಸಹಿತ ಭಾರೀ ಮಳೆ ಆಗಲಿದೆ. ಗಾಳಿಯ ವೇಗವು ಪ್ರತಿ ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಇರಲಿದೆ. ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಗಾಳಿಯೊಂದಿಗೆ ಭಾರೀ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

ಮಳೆ ಅಲರ್ಟ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ.19 ರಂದು ಕಾರವಾರ,ಯಲ್ಲಾಪುರ,ಜೋಯಿಡಾ,ಹೊನ್ನಾವರ,ಸಿದ್ದಾಪುರ,ಶಿರಸಿ ಭಾಗದಲ್ಲಿ ಅಲ್ಪ ಗಾಳಿ ಸಹಿತ ಮಳೆಯಾಗಲಿದ್ದು ,ಭಟ್ಕಳ,ಮುಂಡಗೋಡು,ಕುಮಟಾ ಭಾಗದಲ್ಲಿ ಸಾಧಾರಣಕ್ಕಿಂತ ಹೆಚ್ಚು ಮಳೆಯಾಗಲಿದೆ.

Rain news| ಅಬ್ಬರದ ಗಾಳಿ ಮಳೆ,ಮುಳುಗಿದ ರಸ್ತೆ ,ಕುಸಿದ ಗುಡ್ಡ ಎಲ್ಲಿ ಏನಾಯ್ತು ವಿವರ ಇಲ್ಲಿದೆ.

ಇನ್ನು ಶಿವಮೊಗ್ಗ  ಜಿಲ್ಲೆಯ ತೀರ್ಥಹಳ್ಳಿ,ಸೊರಬ,ಶಿಕಾರಿಪುರ,ಶಿವಮೊಗ್ಗ ದಲ್ಲಿ ಮೇ .19 ರಂದು ಸಾಧಾರಣಕ್ಕಿಂತ ಹೆಚ್ಚಿ ಮಳೆಯಾಗಲಿದೆ. ಸಾಗರ,ಹೊಸನಗರ ಭಾಗದಲ್ಲಿ ಅಲ್ಪ ಮಳೆಯಾಗಲಿದೆ.

ಉಡುಪಿ ಭಾಗದಲ್ಲಿ ಬ್ರಹ್ಮಾವರ, ಉಡುಪಿ ,ಕುಂದಾಪುರ,ಕಾಪು ಸೇರಿದಂತೆ ಬಹುತೇಕ ಭಾಗದಲ್ಲಿ ಮಳೆ ಬೀಳಲಿದೆ. ಈ ಭಾಗದಲ್ಲಿ ಗುಡುಗು ಸಹಿತ ಅಬ್ಬರದ ಮಳೆ ಬೀಳುವ ಸಾಧ್ಯತೆಗಳಿವೆ.

ಮಂಗಳೂರು,ದಕ್ಷಿಣ ಕನ್ನಡ,ಚಿಕ್ಕಮಗಳೂರು,ಬೆಳಗಾವಿ,ಹುಬ್ಬಳ್ಳಿ,ಧಾರವಾಡ,ಚಾಮರಾಜನಗರ,ಬೆಂಗಳೂರು,ತುಮಕೂರು,ಮಂಡ್ಯ,ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿ ಹೆಚ್ಚಿನ ಮಳೆ ಇರಲಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement