ಸ್ವರ್ಣವಲ್ಲಿ ಶ್ರೀಗಳಿಗೆ ಪೂರ್ವಾಶ್ರಮದ ಪಿತ್ರುವಿಯೋಗ

200

Sirsi:- ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಯವರ ಪೂರ್ವಾಶ್ರಮದ ತಂದೆಯಾದ ವೇ. ಶಿವರಾಮ ಭಟ್ಟ ನಡಗೋಡು ಇವರು ಗುರುವಾರ ಸಂಜೆ ಇಹಲೋಕ ತ್ಯಜಿಸಿ ದೈವಾದೀನರಾದರು.

ಪೂಜ್ಯ ಗುರುಗಳ ಪೂರ್ವಾಶ್ರಮದ ತಂದೆಯಾದ ಶಿವರಾಮ ಭಟ್ಟರು ನಿತ್ಯಾನುಷ್ಠಾನಿಕರಾಗಿ, ನಿಷ್ಠಾವಂತ ವೈದಿಕರಾಗಿ ಧರ್ಮವನ್ನು ಉಳಿಸಿದಂಥವರು. ಮೂರು ಪುತ್ರರು ಹಾಗೂ ಒಬ್ಬಳು ಪುತ್ರಿಯರ ತಂದೆಯಾಗಿ ತಮ್ಮ ಜೀವನದ ಕರ್ತವ್ಯವನ್ನು ನಿರ್ವಹಿಸಿ ಸದ್ಗತಿಯನ್ನು ಹೊಂದಿದರು.

ಪತ್ನಿ, ಅಗ್ನಿಹೋತ್ರಿಗಳಾದ ಹಿರಿಯ ಮಗ, ಹಾಗೂ ಪುತ್ರಿಯನ್ನು ಅಗಲಿದ್ದು ಹವ್ಯಕ ವಿಧಿ ವಿಧಾನದ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಇದನ್ನೂ ಓದಿ:- ಸಾಗರ ಸಿಗಂದೂರು ಚೌಡೇಶ್ವರಿ ಜಾತ್ರಿ ದಿನಾಂಕ ನಿಗದಿ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!