BREAKING NEWS
Search

ಈ ಕಾರಣಕ್ಕೆ ಬಿಕೆ ಹರಿಪ್ರಸಾದ್ ಬಂಧಿಸಬೇಕು!ಮಾಜಿ ಶಾಸಕ ಸುನಿಲ್ ಹೆಗಡೆ ಕೊಟ್ಟ ಸಾಕ್ಷಿಗಳಿವು?

54

Haliyala/ಕಾರವಾರ :- ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ತೆರಳುವ ವೇಳೆ ಗೋಧ್ರಾ ಮಾದರಿಯ ದುರಂತ ಮರುಕಳಿಸುವ ಸಾಧ್ಯತೆ ಇದೆ ಎಂಬ ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರ ಹೇಳಿಕೆಗೆ ಹಳಿಯಾಳ ಮಾಜಿ ಶಾಸಕ ಸುನಿಲ್ ಹೆಗಡೆ ಕಿಡಿ ಕಾರಿದ್ದಾರೆ.

ಈ ಕುರಿತು ಮಾತನಾಡಿದ ಅವರು ರಾಮ ಭಕ್ತರು ರಾಮಮಂದಿರ ಉದ್ಘಾಟನೆಗೆ ತೆರಳದಂತೆ ತಡೆಯಲು ,ಹೋಗುವ ಭಕ್ತರಲ್ಲಿ ಭಯ ಹುಟ್ಟಿಸಲು ಹೀಗೆ ಹೇಳಿಕೆ ನೀಡಿದ್ದಾರೆ.

ಸರ್ಕಾರ ಬಿಕೆ ಹರಿಪ್ರಸಾದ್ ರವರನ್ನು ಕೂಡಲೇ ಬಂಧನ ಮಾಡಬೇಕು, ಗೋದ್ರಾ ಹತ್ಯಾ ಕಾಂಡ ಆದಂತೆ ಆಗುತ್ತದೆ ಎನ್ನುವ ಇವರು ಪಿತೂರಿಯಲ್ಲಿ ಭಾಗಿಯಾಗಿದ್ದಾರೆ.ಮುಂದಿನ ದಿನದಲ್ಲಿ ರಾಮನ ಭಕ್ತರಿಗೆ ತೊಂದರೆ ಕೊಡುವ ಯೋಜನೆಯನ್ನು ಬಿಕೆ ಹರಿಪ್ರಸಾದ್ ರವರು (BK Hariprasad) ಗುಪ್ತವಾಗಿ ಹಾಕಿಕೊಂಡಿದ್ದಾರೆ‌ ಎಂಬುದು ಇವರ ಮಾತಿನಿಂದ ತಿಳಿದುಬರುತ್ತದೆ.
ಹೀಗಾಗಿ ಕಾಂಗ್ರೆಸ್ ಸರ್ಕಾರ ಶ್ರೀಕಾಂತ್ ಪೂಜಾರಿಯನ್ನು ಬಂಧನ ಮಾಡಿ ದೊಡ್ಡ ಹೆಮ್ಮೆ ಮೆರೆಯುತ್ತಿದೆ . ನಿಜವಾದ ಅರ್ಥದಲ್ಲಿ ಬಿಕೆ ಹರಿಪ್ರಸಾದ್ ಬಂಧನ ಮಾಡಿ ಅವರಿಂದ ಮಾಹಿತಿ ತೆಗೆದುಕೊಳ್ಳಬೇಕು. ಒಂದುವೇಳೆ ಅಹಿತಕರ ಘಟನೆ ನಡೆದರೇ ಇದರ ಸಂಪೂರ್ಣ ಹೊಣೆಗಾರರ ,ಕೊಲೆಗಾರನ ಪಟ್ಟ ಅವರಿಗೆ ಹೋಗುತ್ತದೆ.

ಇದನ್ನೂ ಓದಿ:- ರಾಮ ಮಂದಿರ ರಾಮನ ಶಿಲ್ಪ ಬಗ್ಗೆ ನಿಮಗೇನು ಗೊತ್ತು?

ಮುಂದಿನ ದಿನದಲ್ಲಿ ಹಿಂದೂಗಳು ಬದುಕುವುದೇ ಕಷ್ಟವಾಗುತ್ತದೆ‌ಇದಕ್ಕೆ ಕಾಂಗ್ರೆಸ್ ನ ಬಿಕೆ ಹರಿಪ್ರಸಾದ್ ,ಕಾಂಗ್ರೆಸ್ ರಾಹುಲ್ ಗಾಂಧಿ,ಸೋನಿಯಾ ಗಾಂಧಿ ಕಾಲು ಒತ್ತುವವರೇ ಕಾರಣ ಆಗುತ್ತಾರೆ. ಹೀಗಾಗಿ ರಾಜ್ಯ ಸರ್ಕಾರ ಕ್ಕೆ ಒತ್ತಾಯ ಮಾಡುತ್ತೇನೆ ಬಿಕೆ ಹರಿಪ್ರಸಾದ್ ರವರನ್ನು ಅಟೆಂಟು ಮರ್ಡರ್ ಕೇಸ್ ವಿಚಾರ ಧಾರೆಯಲ್ಲಿ ಬಂಧಿಸಿ ಅವರಿಂದ ಮಾಹಿತಿ ಪಡೆದುಕೊಳ್ಳಬೇಕು. ರಾಜ್ಯದಿಂದ ಅಯೋಧ್ಯ ( Ayodhya) ಗೆ ಹೋಗುವವರಿಗೆ ಹೆಚ್ಚಿನ ಭದ್ರತೆ ನೀಡಬೇಕು,ರಾಮಭಕ್ತರು ಹೆದರುವ ಅವಷ್ಯಕತೆ ಇಲ್ಲಾ ಎಂದು ಹೇಳಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!