Siganduru| ಸಿಗಂಧೂರು ಚೌಡೇಶ್ವರಿ ಜಾತ್ರೆ ದಿನಾಂಕ ನಿಗದಿ ಯಾವೆಲ್ಲಾ ಕಾರ್ಯಕ್ರಮ ವಿವರ ನೋಡಿ.

TextMaster 01 04 11.22.55 TextMaster 01 04 11.22.55

SAGARA : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ಜಾತ್ರೆ ಜ.14 ಮತ್ತು 15ರಂದು ನಡೆಯಲಿದೆ. ದೇವಸ್ಥಾನದಲ್ಲಿ ಎರಡು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಜ.14 ರಂದು ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ದೇವಿಗೆ ಮಹಾಭಿಷೇಕ, ಹೂವು ಮತ್ತು ಆಭರಣದ ಅಲಂಕಾರ ನೆರವೇರಿಸಲಾಗುತ್ತದೆ. ಗೋಪೂಜೆ, ಗುರು ಪೂಜೆ ನೆರವೇರಲಿದೆ. ಈ ಸಂದರ್ಭದಲ್ಲಿ ತೇರು ಮತ್ತು ಪಲ್ಲಕ್ಕಿಯನ್ನು ಮೂಲಸ್ಥಾನಕ್ಕೆ ಕೊಂಡೊಯ್ಯಲಾಗುತ್ತದೆ. ದೇವಿಯ ಮೂಲ ಸ್ಥಳ ಸೀಗೆ ಕಣಿವೆಯಲ್ಲಿ ಪೂಜೆ ಸಲ್ಲಿಸಿ ಪೂರ್ಣಕುಂಭದೊಂದಿಗೆ ಧರ್ಮಜ್ಯೋತಿಯ ಮೆರವಣಿಗೆ ನಡೆಸಲಾಗುತ್ತದೆ. ಸಂಜೆ 5 ಗಂಟೆಗೆ ಗುರು ಪೂಜೆ, ಸಂಜೆ 6ಕ್ಕೆ ಶರಾವತಿ ನದಿಗೆ ಗಂಗಾರತಿ ನಡೆಯಲಿದೆ.

Advertisement

ಜ.15 ರಂದು ಬೆಳಗ್ಗೆ ನವಚಂಡಿಕಾ ಹೋಮ, ದುರ್ಗಾ ಪೂಜೆ, ರಂಗ ಪೂಜೆ ನೆಡೆಯಲಿದೆ.

ಜಾತ್ರೆಗೆ ಯಾರ ಸಾನಿಧ್ಯ?

ಈ ಬಾರಿ ಮಳಲಿ ಮಠದ ಡಾ. ನಾಗಭೂಷಣ್ ಶಿವಾಚಾರ್ಯ ಸ್ವಾಮೀಜಿ ಜಾತ್ರೆಯ ದಿವ್ಯ ಸಾನಿಧ್ಯ ವಹಿಸುವರು.

ಕೇರಳದ ಶಿವಗಿರಿ ಬ್ರಹ್ಮ ಶ್ರೀ ನಾರಾಯಣಗುರು ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರು ಧರ್ಮಜ್ಯೋತಿಗೆ ಚಾಲನೆ ನೀಡಲಿದ್ದಾರೆ. ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ. ಎಂ ತಿಮ್ಮೇಗೌಡ ಅವರು ಜಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದ ಅನುವಂಶೀಯ ಧರ್ಮದರ್ಶಿ ಡಾ. ರಾಮಪ್ಪನವರು ಮಾಹಿತಿ ತಿಳಿಸಿದ್ದಾರೆ.ಇನ್ನು ಜಾತ್ರೆಗೆ ಬರುವ ಭಕ್ತರಿಗೆ ವಿಶೇಷ ಲಾಂಚ್ ನ ವ್ಯವಸ್ಥೆ ಸಹ ಕಲ್ಪಿಸಲಾಗಿದ್ದು ಭಕ್ತರು ಆಗಮಿಸುವಂತೆ ಕಮಿಟಿ ಕೋರಿದೆ.

ಇದನ್ನೂ ಓದಿ:- ಅಯೋಧ್ಯೆಯ ರಾಮಮಂದಿರ ಶಿಲ್ಪಿ ಬಗ್ಗೆ ನಿಮಗೇನು ಗೊತ್ತು ವಿವರ ನೋಡಿ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement