Uttara kannada| ಕೈಕೊಟ್ಟ ಹವಾಮಾನ ಮಾಪನ ಕೇಂದ್ರಗಳು-46 ಸಾವಿರ ರೈತರಿಗೆ ಈಭಾರಿಯೂ ವಿಮಾ ಹಣಕ್ಕೆ ಕೊಕ್ಕೆ!
ರಾಜ್ಯದಲ್ಲಿ ಅತಿವೃಷ್ಟಿ,ಅನಾವೃಷ್ಟಿಯಿಂದ ಆದ ಹಾನಿಯ ಅಧ್ಯಯನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರನ್ನು ಕ್ಷೇತ್ರಕ್ಕೆ ಕಳುಹಿಸಿ ಮುಖ್ಯಮಂತ್ರಿಗಳು ವರದಿ ಪಡೆದಿದ್ದಾರೆ.ಆದರೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಬೆಳೆಹಾನಿಗೆ ರೈತರು ವಿಮೆ ಮಾಡಿಸಿದರೂ ಹವಾಮಾನ ಮಾಪನ ಕೇಂದ್ರಗಳು ಕೈಕೊಟ್ಟಿರುವ ಕಾರಣ ಆದ ನಷ್ಟಕ್ಕೆ ಈಬಾರಿಯೂ ಹಣ ಮಂಜೂರಾಗದ ಸಮಸ್ಯೆ ಎದುರಾಗಿದೆ.
ಒಂದೆಡೆ ಮಳೆ ಕೈಕೊಟ್ಟು, ಬಾಡಿನಿಂತ ಅಡಿಕೆ ತೋಟ ,ಮತ್ತೊಂದೆಡೆ ಭಾರೀ ಮಳೆಯಿಂದ ಕೊಳೆರೋಗಕ್ಕೆ ತುತ್ತಾದ ಅಡಿಕೆ ಮರಗಳು,ಮತ್ತೊಂದೆಡೆ ಒಣಗಿನಿಂತ ಜೋಳದ ತೆನೆಗಳು ಹೌದು ಈ ದೃಶ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ವೇ ಸಾಮಾನ್ಯ ಎನ್ನುವಂತಾಗಿದೆ.
ಇದನ್ನೂ ಓದಿ:-Uttara kannada| ಬಿಡಾಡಿ ದನ,ಶ್ವಾನಗಳ ಕಾಟ -ನಿಯಂತ್ರಣಕ್ಕೆ ಆಡಳಿತದ ಬಳಿ ಇಲ್ಲ ಹಣ
ಉತ್ತರ ಕನ್ನಡ (uttara Kannada) ಜಿಲ್ಲೆಯ ಮಟ್ಟಿಗೆ ಈವರ್ಷ ಅತಿವೃಷ್ಟಿ ಜೊತೆ ಅನಾವೃಷ್ಟಿಯೂ ರೈತರನ್ನ ಹೈರಾಣಾಗಿಸಿದೆ. ಕರಾವಳಿ ಸೇರಿದಂತೆ ಮಲೆನಾಡಿನ ಕೆಲವು ಭಾಗದಲ್ಲಿ ಆಧಿಕ ಮಳೆ ಬೆಳೆಹಾನಿ ,ರೋಗಬಾಧೆಗೆ ಒಳಗಾದರೇ, ಜಿಲ್ಲೆಯ ಯಲ್ಲಾಪುರ,ಮುಂಡಗೋಡು ,ಹಳಿಯಾಳ ಭಾಗದಲ್ಲಿ ಮಳೆ ವಾಡಿಕೆಗಿಂತ 60% ಕಡಿಮೆಯಾಗಿದ್ದು ,ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಒಟ್ಟು 25 ರಿಂದ 30% ಮಳೆ ಕೊರತೆಯಾಗಿದೆ. ಇನ್ನು ಜಿಲ್ಲೆಯಲ್ಲಿ 138 ಗ್ರಾಮಗಳಲ್ಲಿ ನೀರಿನ ಕೊರತೆ ಎದುರಾಗುವ ಸಾಧ್ಯತೆ ಹಿನ್ನಲೆಯಲ್ಲಿ ಪ್ರತಿ ತಾಲೂಕಿಗೆ ಒಂದು ಕೋಟಿ ಹಣ ಮಂಜೂರು ಮಾಡಲಾಗಿದೆ. ಆದರೇ ಬೆಳೆಹಾನಿಯಾದರೇ ತಮ್ಮ ಶ್ರಮಕ್ಕೆ ಅಸಲಾದರು ಹುಟ್ಟಲಿ ಎಂದು ಈಬಾರಿ ರೈತರು ತಮ್ಮ ಬೆಳೆಗೆ ವಿಮೆ ಮಾಡಿಸಿದ್ದಾರೆ. ಆದರೇ ವಿಮಾ ಹಣ ಮಾತ್ರ ಹವಾಮಾನ ಯಂತ್ರಗಳು ಕೈಕೊಟ್ಟಿದ್ದರಿಂದ ಬೆಳೆಹಾನಿ ಮಾಪನ ಮಾಡಲು ತೊಡಕಾಗಿದ್ದು ಹಣ ಬಿಡುಗಡೆಗೆ ಅಡ್ಡಿಯಾಗಿದೆ. ಹೀಗಾಗಿ ಕಳೆದ ಮೂರು ವರ್ಷದ ನಂತರ ಇದೀಗ ಮಳೆಮಾಪನ ಕೇಂದ್ರಗಳನ್ನು ಆಡಳಿತ ಸರಿಪಡಿಸುವ ಕೆಲಸಕ್ಕೆ ಕೈಹಾಕಿದ್ದು ಈವರೆಗೂ ಸಮರ್ಪಕ ನಿರ್ವಹಣೆಯಾಗದೇ ಮಳೆ ವರದಿ ನೀಡುವುದು ವಿಳಂಬವಾಗಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ:-Kumta|ಕುಮಟಾ ಗಾಂಜಾ ಸೇವನೆ: 16 ಜನ ಪೊಲೀಸರ ವಶಕ್ಕೆ
ಜಿಲ್ಲೆಯಲ್ಲಿ 253 ಮಳೆ ಮಾಪನಾ ಕೇಂದ್ರ ಗಳಿದ್ದು ಇದರಲ್ಲಿ 95 ಕೇಂದ್ರಗಳು ಕಾರ್ಯನಿರ್ವಹಿಸದೇ ಕೆಟ್ಟುಹೋಗಿದೆ. ಉಳಿದ ಕೇಂದ್ರದಲ್ಲಿ ತಾಂತ್ರಿಕ ಸಮಸ್ಯೆಗಳಿದ್ದು ಕಂದಾಯ ಇಲಾಖೆಯಿಂದ ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ.ಆದರೇ ಈವರೆಗೂ 100 ಕ್ಕೂ ಹೆಚ್ಚು ಕೇಂದ್ರಗಳು ಸರಿಯಾಗದೇ ಹಾಗೆಯೇ ಇದ್ದು ,ವಿಮಾ ಕಂಪನಿಗಳಿಗೆ ಬೇಕಾಗುವ ಮಳೆ ವರದಿ ನೀಡುವಲ್ಲಿ ವಿಫಲವಾಗಿದೆ. ಇದರಿಂದಾಗಿ ಕಳೆದ ಎರಡು ವರ್ಷದ ವಿಮಾ ಹಣ ರೈತರ ಖಾತೆಗೆ ಜಮವಾಗದೇ ತೊಂದರೆ ಅನುಭವಿಸುವಂತಾಗಿದೆ. 2024-25 ರಲ್ಲಿ 43 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದು ,ಹವಾಮಾನ ಯಂತ್ರದ ಸಮಸ್ಯೆಯಿಂದ ಮೂರು ವರ್ಷದ ನಂತರ 30ಕೋಟಿ ಹಣ ಕಳೆದ ಮೂರು ತಿಂಗಳ ಹಿಂದಷ್ಟೇ ಜಮವಾಗಿದೆ.ಇನ್ನೂ ಹಲವು ರೈತರ ಖಾತೆಗೆ ಹಣ ಜಮವಾಗಬೇಕಿದೆ. ಮುಂದೆ ಓದಿ-
ಇದನ್ನೂ ಓದಿ:-Sirsi KSRTC | ಶೌಚಾಲಯಕ್ಕೆ ನಿಗದಿಗಿಂತ ದುಪ್ಪಟ್ಟು ದರ! ಪ್ರಶ್ನಿಸಿದ ವಿದ್ಯಾರ್ಥಿಗೆ ಹಲ್ಲೆ | ಮೊಬೈಲ್ ಒಡೆದು ಗೂಂಡಾಗಿರಿ
ಇನ್ನು 2025-26 ನೇ ಸಾಲಿನಲ್ಲಿ 42 ಸಾವಿರ ಜನ ಮಾತ್ರ ಬೆಳೆ ವಿಮೆ ಮಾಡಿಸಿದ್ದರು.ಆದರೇ 2026-27 ನೇ ಸಾಲಿನಲ್ಲಿ 46 ಸಾವಿರ ರೈತರು ಬೆಳೆ ವಿಮೆ ಮಾಡಿಸಿದ್ದು ,ಈಭಾರಿ ಅತೀ ಹೆಚ್ಚು ರೈತರು ಬೆಳೆ ವಿಮೆ ಮಾಡಿಸಿದ್ದಾರೆ. ಆದರೇ ಹವಾಮಾನ ಯಂತ್ರಗಳು ಕೈಕೊಟ್ಟ ಹಿನ್ನಲೆಯಲ್ಲಿ ಕಳೆದಬಾರಿಯ ಬೆಳೆವಿಮೆ ಜೊತೆ ಈಬಾರಿಯ ಬೆಳೆ ವಿಮೆ ಸಹ ಮಂಜೂರಾಗುವುದು ಸಂಶಯ ಎನ್ನಲಾಗಿದೆ.
ಸಧ್ಯ ಹವಮಾನ ಆಧಾರಿತವಲ್ಲದ ,ಕಟಾವು ಆಧಾರಿತ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಮುಂಗಾರು ಹಂಗಾಮಿನಲ್ಲಿ ಭತ್ತದ ಬೆಳೆಗೆ ಇಪ್ಕೋ ಟೋಕಿಯೋ ಜನರಲ್ ಇನ್ಸೂರನ್ಸ ಕಂಪನಿಯಿಂದ ವಿಮಾ ಸೌಲಭ್ಯ ನೀಡಲಾಗಿದ್ದು ಆಗಷ್ಟ್ 31 ರ ವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.ಆದರೇ ತೋಟಗಾರಿಕಾ ಬೆಳೆಗಳಾದ ಅಡಿಕೆ,ಮಾವು,ಸುಂಟಿ ಸೇರಿದಂತೆ ಕೆಲವು ಬೆಳೆಗಳಿಗೆ ವಿಮೆ ಮಾಡಿಸಿದ ರೈತರಿಗೆ ಹವಾಮಾನ ಮಾಪನ ಯಂತ್ರಗಳು ಹಾಳಾಗಿದ್ದರಿಂದ ಬೆಳೆ ವಿಮೆ ಮಾಡಿಸಲು ಹಿಂದೇಟು ಹಾಕುವಂತಾಗಿದ್ದು ಈವರ್ಷದಲ್ಲಿ ರೈತರು ಮಾಡಿದ ವಿಮಾ ಹಣವೂ ಹವಾಮಾನ ಮಾಪನ ಕೇಂದ್ರಗಳ ವೈಫಲ್ಯದಿಂದ ಬಾರದಂತಹ ಸ್ಥಿತಿ ನಿರ್ಮಾಣ ಆಗಿದ್ದು ಸಧ್ಯ ಈ ಹಿಂದೆನ ಸಮಸ್ಯೆಯಂತೆ ಈಬಾರಿ ಸಹ ರೈತರಿಗೆ ವಿಮಾ ಹಣದ ಕೊಕ್ಕೆ ಬೀಳುವ ಸಾಧ್ಯತೆಗಳಿವೆ.

