BREAKING NEWS
Search

ಬಿಸಿಎಮ್ ಹಾಸ್ಟಲ್ ಗಳಿಗೆ ಡಿಸಿ ದಿಡೀರ್ ಭೇಟಿ- ವಿದ್ಯಾರ್ಥಿಗಳ ಬಸ್ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ

1786

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರವರು ಕಾರವಾರ ನಗರದ ನಾಲ್ಕು ಬಿಸಿಎಮ್ ಹಾಸ್ಟಲ್ ಗೆ ದಿಡೀರ್ ಭೇಟಿ ನೀಡಿ ಸಿಬ್ಬಂದಿಗಳಿಗೆ ಶಾಕ್ ನೀಡಿದರು.

ಕಾರವಾರ ನಗರದ ಕುರ್ಸವಾಡದ ವೃತ್ತಿಪರ ಮೆಟ್ರಿಕ್ ನಂತರರ ಬಾಲಕರ ವಿದ್ಯಾರ್ಥಿ ನಿಲಯ, ಮೆಟ್ರಿಕ್ ನಂತರದ ಸಾಮಾನ್ಯ ಮತ್ತು ಮಾದರಿ ಬಾಲಕರ ವಿದ್ಯಾರ್ಥಿ ನಿಲಯ, ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲನೆ ನಡೆಸಿದರು.

ಈ ವೇಳೆ ಹಾಸ್ಟಲ್ಚನ ಶೌಚಾಲಯ , ಕೊಠಡಿ ಸ್ವಚ್ಛತೆ ಇಲ್ಲದೆ ಇರುವುದಕ್ಕೆ ಅಸಮಧಾನ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಜೊತೆ ಕುಳಿತು ಊಟ ಮಾಡಿದ ಜಿಲ್ಲಾಧಿಕಾರಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು.ಈ ವೇಳೆ ಪ್ರತಿ ದಿನ ಗಡಿಯಲ್ಲಿರುವ ಮಾಜಾಳಿಯ ಇಂಜಿನಿಯರಿಂಗ್ ಕಾಲೇಜಿಗೆ ತೆರಳಲು ಬಸ್ ಸಮಸ್ಯೆ ಕುರಿತು ವಿದ್ಯಾರ್ಥಿಗಳು ತಿಳಿಸಿದಾಗ ಸಂಬಂಧಪಟ್ಟ ಅಧಿಕಾರಿಗೆ ಸ್ಥಳದಲ್ಲೇ ಸಂಪರ್ಕಿಸಿ ಪರ್ಯಾಯ ವ್ಯವಸ್ಥೆಗೆ ಸೂಚನೆ ನೀಡಿದರು.

ಹಳೆಯ ದಿನ ಮೆಲುಕುಹಾಕಿದ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್.

ತಾವು ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತಿದ್ದಾಗ ವಿದ್ಯಾರ್ಥಿ ಜೀವನ ಹೇಗಿತ್ತು ಎಂಬುದನ್ನು ಬಿಸಿಎಮ್ ಹಾಸ್ಟಲ್ ನ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಜಿಲ್ಲಾಧಿಕಾರಿ ತಮಿಳುನಾಡಿನಲ್ಲಿ ಸರ್ಕಾರಿ ಸೀಟ್ ,ಹಾಸ್ಟಲ್ ಸಿಗಲಿಲ್ಲ ಎಂದರೇ ಆತ ಏನಕ್ಕೂ ಬೇಡ ಎಂದರ್ಥ ಎಂದು ಭಾವಿಸುತ್ತಾರೆ. ನಾನೂ ಕೂಡ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದವನು, ಐ.ಎ.ಎಸ್ ಮಾಡುವ ತವಕದಿಂದ ತರಬೇತಿಗಾಗಿ ಸೇರಿದಾಗ ಐ.ಐ.ಟಿ ಯಂತಹ ಉನ್ನತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರು ತರಬೇತಿಗೆ ಬಂದಿದ್ದರು. ಓದುವ ಹಂಬಲ ಆಸಕ್ಕಿ ಇದ್ದರೇ ಯಾರು ಏನುಬೇಕಾದರೂ ಸಾಧಿಸಬಹುದು. ನಿಮ್ಮಲ್ಲೂ ಉತ್ತಮ ಪ್ರತಿಭೆಗಳು ಇರುತ್ತವೆ. ಹೀಗಾಗಿ ಅಧ್ಯಯ ಮಾಡಿದರೆ ಸಾಧನೆ ಮಾಡಬಹುದು ಎಂದ ಅವರು ವಿದ್ಯಾರ್ಥಿಗಳಿಗೆ ಸಾಮೂಹಿಕ ಅಧ್ಯಯನ ಹಾಗೂ ವಿಚಾರ ವಿನಿಮಯಕ್ಕೆ ಸಾಮೂಹಿಕ ಗುಂಪು ರಚಿಸುವಂತೆ ಸಲಹೆ ನೀಡಿದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!