ಕಾರವಾರ :- ಪ್ರವಾಸಿಗರಿಗೆ ಗಾಂಜಾ ಮಾರಾಟ ಮಾಡುತಿದ್ದ ವ್ಯಕ್ತಿಯನ್ನು ಗೋಕರ್ಣ ಠಾಣೆ ಪಿ.ಎಸ್.ಐ ನವೀನ್ ನೇತ್ರತ್ವದ ತಂಡ ಗಾಂಜಾ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ ಮೂಲದ ನಾಗರಾಜ ಮೋತಿಲಾಲ್ ಬುದ್ದಿ ಬಂಧಿತ ಆರೋಪಿಯಾಗಿದ್ದು ಈತ ಮೋಜು ಮಸ್ತಿಗಾಗಿ ಬರುವ ಪ್ರವಾಸಿಗರನ್ನು ಗುರಿಯಾಗಿಟ್ಟುಕೊಂಡು ಗೋಕರ್ಣದ ಸಾಣಿಕಟ್ಟಾ ಗ್ರಾಮದಲ್ಲಿ ಮಾರಾಟ ಮಾಡಲು ತಂದಿದ್ದ ಎರಡು ಕೆ.ಜಿ ನಲವತ್ತು ಗ್ರಾಂ ತೂಕದ ₹40 ಸಾವಿರ ಮೌಲ್ಯದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.