ಕರೋನಾ ಸಂಕಟ ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಲೆ ತೊರೆದ ಮಕ್ಕಳಲ್ಲಿ ಏರಿಕೆ?

828

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಸೈಡ್ ಎಫೆಕ್ಟ್ ಜನರ ಆರ್ಥಿಕತೆಮೇಲೆ ದೊಡ್ಡ ಹೊಡೆತ ಕೊಟ್ಟಿದೆ. ಪ್ರವಾಸೋಧ್ಯಮ ಕರೋನಾ ದಿಂದ ನೆಲ ಕಚ್ಚಿದರೆ ,ಕೃಷಿ ಅವಲಂಭಿತರಿಗೂ ಸಂಕಷ್ಟ ತಂದೊಡ್ಡಿತ್ತು.ಆದರೇ ಜಿಲ್ಲೆಯ ಜನರ ಆರ್ಥಿಕ ಮುಗ್ಗಟ್ಟು ಮಕ್ಕಳ ಶಿಕ್ಷಣದಮೇಲೂ ಪರಿಣಾಮ ಬೀರಿದೆ. ಹೌದು ಕರೋನಾ ದಿಂದಾಗಿ ಲಾಕ್ ಡೌನ್ ನಿಂದ ಶಾಲೆ ಮುಚ್ಚಿದ್ದರಿಂದ ರಾಜ್ಯದಲ್ಲಿ ಶೇ.70 ರಷ್ಟು ಮಕ್ಕಳು ಆನ್ ಲೈನ್ ಸೇರಿದಂತೆ ಯಾವುದೇ ರೀತಿಯಲ್ಲಿ ಕಲಿಕೆಯಲ್ಲಿ ಪಾಲ್ಗೊಂಡಿಲ್ಲ ಎಂದು ರಾಜ್ಯ ಮಕ್ಕಳ ನಿಗಾ ಕೇಂದ್ರ ರಾಜ್ಯದಲ್ಲಿ ಕೋವಿಡ್ ಹಿನ್ನಲೆಯಲ್ಲಿ ರಾಜ್ಯದ ಮಕ್ಕಳ ಪರಿಸ್ಥಿತಿ ಕುರಿತು ನಡೆಸಿದ ಅಧ್ಯಯನದಲ್ಲಿ ವರದಿ ಮಾಡಿದ್ದು ಬಹುತೇಕ ಮಕ್ಕಳು ಕೃಷಿ ಮತ್ತಿತರ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು,ಬಹಳಷ್ಟು ಮಕ್ಕಳು ಓದು ಬರಹದಲ್ಲಿ ಆಸಕ್ತಿ ಕಳೆದುಕೊಂಡಿದ್ದಾರೆ ಎಂದು ವರದಿ ನೀಡಿದೆ. ಇದರ ಬೆನ್ನಲ್ಲೇ ಕನ್ನಡವಾಣಿ ಪತ್ರಿಕೆಯು ಜಿಲ್ಲೆಯ ವಿವರ ತೆಗೆದಿದ್ದು ಬೆಚ್ಚಿಬೀಳಿಸುವಂತಿದೆ.

ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳೆಷ್ಟು? ಕಾರಣ ಏನು?

ಶಿರಸಿ ಶೈಕ್ಷಣಿಕ ಜಿಲ್ಲೆ ಯಲ್ಲಿ ಕಳೆದ ತಿಂಗಳ ಅಂಕಿ ಅಂಶದ ಪ್ರಕಾರ 359 ಮಕ್ಕಳು ಶಾಲೆ ಬಿಟ್ಟಿದ್ದರು.ಅವರಲ್ಲಿ 302 ಮಕ್ಕಳನ್ನು ಶಾಲೆಗೆ ಮರಳಿ ತರುವಲ್ಲಿ ಶಿಕ್ಷಣ ಇಲಾಖೆ ಪ್ರಯತ್ನ ಯಶಸ್ಸು ತಂದಿದೆ. ಆದರೇ 57 ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಶೇ.15% ಮಕ್ಕಳು ಶಾಲೆ ತೊರೆದಿದ್ದಾರೆ.
ಇನ್ನು ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ 86 ಮಕ್ಕಳು ಶಾಲೆ ಬಿಟ್ಟಿದ್ದರು. ಅವರನ್ನು ಮರಳಿ ಶಾಲೆಗೆ ಕರೆತರಲಾಗಿದೆ.

ಶಾಲೆ ಬಿಡಲು ಕಾರಣ ಏನು?

ಜಿಲ್ಲೆಯಲ್ಲಿ ವಲಸೆ ಬಂದ ಕಾರ್ಮಿಕರ ಮಕ್ಕಳು ಮರಳಿ ತಮ್ಮ ಊರಿಗೆ ತೆರಳಿರುವುದು,ಕರೋನಾ ನಂತರ ಆರ್ಥಿಕ ಮುಗ್ಗಟ್ಟಿನಿಂದ ಮಕ್ಕಳನ್ನು ಶಾಲೆಬಿಡಿಸಿ ಕೂಲಿ ಕೆಲಸಕ್ಕೆ ಪೊಷಕರು ಸೇರಿಸಿರುವುದು, ಗುಡ್ಡಗಾಡು ಪ್ರದೇಶಗಳಾದ್ದರಿಂದ ಮಕ್ಕಳಲ್ಲಿ ಶಾಲೆಗೆ ಬರಲು ನಿರಾಸಕ್ತಿ, 9ನೇ ತರಗತಿಯಲ್ಲಿ ಪೇಲಾದ ಮಕ್ಕಳು ದುಡಿಮೆಗೆ ತೆರಳಿರುವುದು ಹೀಗೆ ಹಲವು ಕಾರಣಗಳು ಮಕ್ಕಳು ಶಾಲೆ ಬಿಡಲು ಕಾರಣವಾಗಿದೆ.

ಮರಳಿ ತರುವ ಪ್ರಯತ್ನದಲ್ಲಿ ಶಿಕ್ಷಣ ಇಲಾಖೆ.

ಸದ್ಯ ಜಿಲ್ಲೆಯಲ್ಲಿ ಶಾಲೆ ತೊರೆದ ಮಕ್ಕಳನ್ನು ಕರೆತರುವ ಪ್ರಯತ್ನ ಸಾಗಿದೆ. ಜಿಲ್ಲೆಯಲ್ಲಿ ವಲಸೆ ಹೊದ ಕುಟುಂಬದ ಮಕ್ಕಳನ್ನು ಹುಡುಕುವುದು ಕಷ್ಟವಾಗಿದೆ. ಇನ್ನು ಒಂಬತ್ತನೇ ತರಗತಿ ಪೇಲಾದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ಶಿಕ್ಷಣ ಇಲಾಖೆಗೆ ದೊಡ್ಡ ಸವಾಲಾಗಿದೆ.ಇನ್ನು ಆರ್ಥಿಕ ತೊಂದರೆ ಇರುವ ಪೋಷಕರು ತಮ್ಮ ಮಕ್ಕಳು ಶಾಲೆ ಓದುವುದಕ್ಕಿಂತ ಕೆಲಸ ಮಾಡಲಿ ಎಂಬ ಇರಾದೆಯೇ ಹೆಚ್ಚಿದೆ. ಹೀಗಾಗಿ ಮಕ್ಕಳನ್ನು ಕರೆತರುವಿದೇ ಶಿಕ್ಷಕರಿಗೆ ಕಷ್ಟವಾಗುತ್ತಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!