BREAKING NEWS
Search

Uttrakannada| ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ|ವಿವರ ನೋಡಿ.

221

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ 201 ಪಂಚಾಯಿತಿಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗಿದ್ದು ಉಳಿದ 26 ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರಗಳನ್ನು ಆರಂಭಿಸಲು ಪ್ರಾಂಚೈಂಸಿಗಳಿಂದ ಜಿಲ್ಲಾಡಳಿತ ಅರ್ಜಿ ಆಹ್ವಾನಿಸಲಾಗಿದೆ.

ಎಲ್ಲಿದೆ ಅವಕಾಶ

ಶಿರಸಿ ತಾಲೂಕಿನ ಭಾಸಿ, ಬಿಸಲಕೊಪ್ಪ, ಶಿವಳ್ಳಿ, ಸಾಲ್ಕಣಿ, ಜಾನ್ಮನ, ಇಟಗುಳಿ, ಸುಗಾವಿ,ಮೇಲಿನ ಓಣಿಕೇರಿ, ಯಡಳ್ಳಿ, ಮಂಜುಗುಣಿ ಗ್ರಾಮಪಂಚಾಯಿತಿಗಳಲ್ಲಿ ಜೋಯಿಡಾ ತಾಲೂಕಿನ ಜೋಯಿಡಾ, ಗಾಂಗೋಡಾ, ಶಿಂಗರಗಾಂವ್, ಬಜಾರಕುಣಂಗ, ನಂದಿಗದ್ದೆ ಗ್ರಾಮಪಂಚಾಯಿತಿಗಳಲ್ಲಿ,
ಹೊನ್ನಾವರ ತಾಲೂಕಿನ ಕಾಸರಗೋಡ ಗ್ರಾಮಪಂಚಾಯಿತಿಗಳಲ್ಲಿ, ಕಾರವಾರ ತಾಲೂಕಿನ ಹಂಕೋನ್, ಕದ್ರಾ, ವೈಲವಾಡ ಗ್ರಾಮಪಂಚಾಯಿತಿ,
ಸಿದ್ದಾಪುರ ತಾಲೂಕಿನ ಕಾವಂಚೂರು, ಮನ್ಮನೆ, ತಾಂಡಗುಂಡಿ ಗ್ರಾಮಪಂಚಾಯಿತಿ,
ಅಂಕೋಲಾ ತಾಲೂಕಿನ ಬೊಬುವಾಡ, ವಂದಿಗೆ ಗ್ರಾಮಪಂಚಾಯಿತಿಗಳಲ್ಲಿ ಯಲ್ಲಾಪುರ ತಾಲೂಕಿನ ಹಾಸಂಗಿ, ದೇಹಳ್ಳಿ ಗ್ರಾಮ ಪಂಚಾಯತಗಳಿಗೆ ಸದರಿ ಪ್ರಾಂಚೈಂಸಿಗಳು ಜೂ 12 ರೋಳಗಾಗಿ ವೆಬ್ ಸೈಟ್ : https://www.karnatakaone gov.in/Public/gramOneFrachiseeTerms ಮೂಲಕ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕಿನ ತಹಶೀಲ್ದಾರ ಕಚೇರಿಗೆ ಸಂಪರ್ಕಿಸಿಬಹುದಾಗಿದೆ.

ತಾತ್ಕಾಲಿಕ ಶಿಕ್ಷಕರ ಹುದ್ದೆಗೆ ನೇರ ನೇಮಕಾತಿ-ಯಾವ ಸ್ಥಳ ವಿವರ ನೋಡಿ.

ಶಾಲಾ ಶಿಕ್ಷಣ ಇಲಾಖೆಯಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದಡಿಯಲ್ಲಿ 2023-24 ನೇ ಸಾಲಿನ ಸಮನ್ವಯ ಶಿಕ್ಷಣ ಚಟುವಟಿಕೆಗಳಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಕಾರವಾರ, ಅಂಕೋಲಾ, ಕುಮಟಾ,ಹೊನ್ನವಾರ ಹಾಗೂ ಭಟ್ಕಳ ತಾಲೂಕುಗಳಲ್ಲಿ ಖಾಲಿ ಇರುವ ಬಿ.ಆಯ್.ಇ.ಆರ್.ಟಿ ಪ್ರಾಥಮಿಕ-03 ಮತ್ತು ಬಿ.ಆಯ್.ಇ.ಆರ್.ಟಿ ಪ್ರೌಡ-10 ವಿಶೇಷ ಶಿಕ್ಷಕರ ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇರಗುತ್ತಿಗೆ ಮೂಲಕ ನೇಮಕಾತಿ ಮಾಡಿಕೊಳ್ಳಲುವುದಕ್ಕೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯಾರ್ಥಿಗಳು ವಿದ್ಯಾರ್ಹತೆ D.Ed,D.EI.Ed ಹಾಗೂ B.Ed in Special education ಮತ್ತು 6 month training teaining in cross disability area in inculcation ತೆರ್ಗಡೆಯನ್ನು ಹೊಂದಿರಬೇಕು.

ಆಸಕ್ತ ಅಭ್ಯರ್ಥಿಗಳು ಎಲ್ಲಾ ಅಂಕಪಟ್ಟಿಗಳು ಕಾನ್ವೋಕೇಷನ್ ಪ್ರಮಾಣ ಪತ್ರ, ಹಾಗೂ ಆರ್.ಸಿ.ಐ ಶಾಶ್ವತ ಪ್ರಮಾಣ ಪತ್ರದೊಂದಿಗೆ ಜೂ 06 ರಂದು ಸಂಜೆ 05:00 ಗಂಟೆಯೊಳಗೆ ಅಂಚೆ ಅಥವಾ ಮುದ್ದಾಂ ಉಪನಿರ್ದೇಶಕರು ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಾರ್ಯಾಲಕ್ಕೆ, ಸಮಗ್ರ ಶಿಕ್ಷಣ ಕರ್ನಾಟಕ,ಶಾಲಾ ಶಿಕ್ಷಣ ಇಲಾಖೆಯ ವಿಳಾಸಕ್ಕೆ ತಲುಪಿಸಲು ಸೂಚಿಸಿದೆ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 08382-295486 ಗೆ ಸಂಪರ್ಕಿಸಬಹುದಾಗಿದೆ.

ನಿರಂತರ ಸುದ್ದಿಗಳನ್ನು ವಾಟ್ಸ್ ಅಪ್ ಮೂಲಕ ಪಡೆಯಲು ಕೆಳಗೆ ಕ್ಲಿಕ್ ಮಾಡಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!