Joida|ಸಿನಿಮಾ ಚಿತ್ರೀಕರಣಕ್ಕೆ ಬಂದ 20 ಕೋಟಿ ಬೆಲೆಬಾಳುವ ಶ್ವಾನ- ಕಾಡುಪ್ರಾಣಿ ಎಂದು ಅರಣ್ಯ ಸಿಬ್ಬಂದಿಯಿಂದ ತಪಾಸಣೆ

TextMaster 02 02 02.23.04 TextMaster 02 02 02.23.04
IMG 20230201 WA0000

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಗೆ 20 ಕೋಟಿ ಬೆಲೆಬಾಳುವ ಟಿಬೆಟಿಯನ್ ಮಸ್ತಿಫ್ ಜಾತಿಯ ಶ್ವಾನವನ್ನು ಖ್ಯಾತ ನಟ ರವಿಚಂದ್ರನ್ ನಾಯಕ ನಟನಾಗಿ ನಟಿಸುತ್ತಿರುವ ಗೌರಿಶಂಕರ ಸಿನಿಮಾ ಚಿತ್ರೀಕರಣಕ್ಕೆ ತರಲಾಗಿದ್ದು ಈ ವೇಳೆ ದಾಂಡೇಲಿಯಲ್ಲಿ ಶ್ವಾನವನ್ನು ನೋಡಿದ ಅರಣ್ಯ ಸಿಬ್ಬಂದಿ ವಾಹನವನ್ನು ತಡೆದು ತಪಾಸಣೆ ನಡೆಸಿದ್ದಲ್ಲದೇ ಇದೊಂದು ಕಾಡುಪ್ರಾಣಿ ಎಂದು ತಿಳಿದು ವಶಕ್ಕೆ ಪಡೆಯಲು ಮುಂದಾಗಿದ್ದರು.

ಕೊನೆಗೆ ನಾಯಿ ಮಾಲೀಕ ಸತೀಶ್ ಕ್ಯಾಡಬಮ್ಸ್ ರವರು ಇದು ಶ್ವಾನ ತೋಳ ಅಥವಾ ಇನ್ಯಾವುದೇ ಕಾಡುಪ್ರಾಣಿಯಲ್ಲಾ ಎಂದು ಅರಣ್ಯಸಿಬ್ಬಂದಿಗಳಿಗೆ ಫೋಟೋವನ್ನು ತೋರಿಸುವ ಮೂಲಕ ಅರಣ್ಯ ಸಿಬ್ಬಂದಿಗೆ ಮನವರಿಕೆ ಮಾಡಿಕೊಟ್ಟರು.

TextMaster 02 02 02.26.49
IMG 20230201 WA0000

ಇದೇ ಮೊದಲಬಾರಿಗೆ ಸತೀಶ್ ರವರು ಸಾಕಿರುವ 20 ಕೋಟಿ ಬೆಲೆಬಾಳುವ ಹೈದರ್ ಹೆಸರಿನ ಈ ಶ್ವಾನವನ್ನು ಕನ್ನಡದ ಸಿನಿಮಾದಲ್ಲಿ ಬಳಸಲಾಗುತಿದ್ದು ದಾಂಡೇಲಿ,ಜೋಯಿಡಾ ,ಯಲ್ಲಾಪುರದಲ್ಲಿ ಚಿತ್ರೀಕರಣ ನಡೆಯಲಿದೆ.
ಇನ್ನು ಶ್ವಾನಕ್ಕೆ ತಂಗಲು ಹವ ನಿಯಂತ್ರಿತ ಕೊಠಡಿ ವ್ಯವಸ್ಥೆ ಸಹ ಮಾಡಲಾಗಿದ್ದು 15 ದಿನಗಳ ಕಾಲ ಚಿತ್ರಿಕರಣ ನಡೆಯಲಿದೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement