Yallapura|ಸಾತೋಡಿ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರೇ ಎಚ್ಚರ! ಕಾರಣ ಏನು ವಿವರ ನೋಡಿ.

sathoddi sathoddi

ಕಾರವಾರ:- ಯಲ್ಲಾಪುರ ತಾಲೂಕಿನ ಸಾತೊಡ್ಡಿ ಸುತ್ತ ಮುತ್ತ ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಸಾತೊಡ್ಡಿ ಜಲಪಾತ ತುಂಬಿ ಹರಿಯುತ್ತಿದೆ. ಇದಲ್ಲದೇ ಈ ಭಾಗದಲ್ಲಿ ನಡೆದು ಹೋಗುವ ಭಾಗದಲ್ಲಿ ಗುಡ್ಡ ಕುಸಿಯುವ ಆತಂಕವಿದ್ದು
ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು ಎಚ್ಚರಿಕೆ ವಹಿಸಬೇಕು ಎಂದು ಕುಂಬ್ರಾಳ ಕಂಚನಗದ್ದೆ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ನಾರಾಯಣ ಭಟ್ಟ ಕಂಚನಗದ್ದೆ ಪ್ರವಾಸಿಗರಲ್ಲಿ ವಿನಂತಿ ಮಾಡಿದ್ದಾರೆ. ಇದನ್ನೂ ಓದಿ:-(ಫೋಟೋದ ಮೇಲೆ ಕ್ಲಿಕ್ ಮಾಡಿ)

TextMaster 07 19 10.14.13

ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಲಪಾತದಲ್ಲಿ ನೀರು ರಭಸದಿಂದ ಹರಿಯುತ್ತಿದ್ದು, ಪ್ರವಾಸಿಗರು ನೀರಿಗಿಳಿಯುವ ಸಾಹಸ ಮಾಡಬಾರದು. ಜಲಪಾತಕ್ಕೆ ಹೋಗುವ ದಾರಿಯ ಪಕ್ಕದಲ್ಲಿರುವ ಗುಡ್ಡ ಕುಸಿಯುವ ಭೀತಿ ಇರುವ ಕಾರಣ ಪ್ರವಾಸಿಗರು ಎಚ್ಚರ ವಹಿಸುವುದು ಅಗತ್ಯ. ಜಲಪಾತ ವೀಕ್ಷಣೆಗೆ ಹೋದವರು, ಹೆಚ್ಚು ಸಮಯ ಅಲ್ಲಿ ಕಳೆಯದೆ, ನೋಡಿದ ತಕ್ಷಣ ವಾಪಸಾಗುವಂತೆ ಅವರು ಮನವಿ ಮಾಡಿದ್ದಾರೆ.

Advertisement

ಈ ಹಿಂದೆ ಜಲಪಾತ ವೀಕ್ಷಣೆಗೆ ತೆರಳಿದ ಪ್ರವಾಸಿಗರು ನೀರಿನಲ್ಲಿ ಸಿಲುಕಿ ಸಾವು ಕಂಡ ಘಟನೆಗಳು ಸಹ ಜರುಗಿದ್ದು ಇದೀಗ ಹೆಚ್ಚು ಮಳೆಯಾದ್ದರಿಂದ ಪ್ರವಾಸಿಗರು ಈ ಭಾಗಕ್ಕೆ ಜಲಪಾತ ವೀಕ್ಷಣೆಗೆ ಬರುವುದರಿಂದ ಎಚ್ಚರಿಕೆ ವಹಿಸದಿದ್ದರೇ ಪ್ರಾಣಕ್ಕೆ ಸಂಚುಕಾರ ಕಟ್ಟಿಟ್ಟ ಬುತ್ತಿಯಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement