ಹೊನ್ನಾವರ |ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

TextMaster 08 09 07.55.46 TextMaster 08 09 07.55.46

ಕೃಷಿ ಇಲಾಖೆಯಿಂದ 2023-24ನೇ ಸಾಲಿನ ಆತ್ಮ ಯೋಜನೆಯಡಿ ಹೊನ್ನಾವರ ತಾಲೂಕಿನ ರೈತರಿಂದ ತಾಲೂಕು ಹಾಗೂ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಕೃಷಿಯಲ್ಲಿ ಈ ಕೆಳಗಿನ ಘಟಕಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿರುವ ರೈತರು ತಮ್ಮ ಅರ್ಜಿಗಳನ್ನು ಹೊನ್ನಾವರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಿಗೆ ಸಲ್ಲಿಸಲು ಕೋರಲಾಗಿದೆ.

1) ಕೃಷಿಯಲ್ಲಿ ಸಮಗ್ರ ಬೆಳೆ ಪದ್ಧತಿ
2) ಸಮಗ್ರ ನೀರು ನಿರ್ವಹಣೆ
3) ಸಾವಯವ ಕೃಷಿ
4) ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ
5) ತೋಟಗಾರಿಕೆ
6) ಹೈನುಗಾರಿಕೆ 7) ಕೋಳಿ ಸಾಕಾಣಿಕೆ
8) ಮೀನುಗಾರಿಕೆ
9) ಕೃಷಿ ಸಂಸ್ಕರಣೆ
10) ರೇಷ್ಮೆ ಬೇಸಾಯ
11) ಹೈಟೆಕ್ ಹಸಿರು ಮನೆ ಅಳವಡಿಕೆ
12) ಅರಣ್ಯ ಕೃಷಿ
13) ಆಡು, ಕುರಿ, ಮೊಲ ಇತ್ಯಾದಿ ಸಾಕಾಣಿಕೆ

Advertisement

ಆಸಕ್ತ ರೈತರು ತಮ್ಮ ಅರ್ಜಿಗಳನ್ನು ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಖಾತೆ ಪ್ರತಿ, ಪಾಸ್ ಪೋರ್ಟ ಸೈಜ್ ಭಾವಚಿತ್ರ ಹಾಗೂ ತಾವು ಅಳವಡಿಸಿಕೊಂಡಿರುವ ಕೃಷಿಗಳ ಭಾವಚಿತ್ರಗಳ ಜೊತೆ ಸಲ್ಲಿಸಬಹುದು. ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ: 30-08-2023 ಆಗಿದೆ.

ಇದನ್ನೂ ಓದಿ:-ಹವಾಮಾನ ವರದಿ|ರಾಜ್ಯದಲ್ಲಿ ಮುಂದುವರೆಯಲಿದೆ ಮಳೆ-ಎಲ್ಲಿ ಹೇಗೆ ವಿವರ ನೋಡಿ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement