Sirsi| ಮನೆಯಲ್ಲಿ ದಾಸ್ತಾನು ಮಾಡಿದ್ದ 64 kg ಶ್ರೀಗಂಧ ವಶ.

TextMaster 09 22 07.57.53 TextMaster 09 22 07.57.53

ಕಾರವಾರ : ಮನೆಯ ಹಿಂಭಾಗದಲ್ಲಿ ಅಕ್ರಮ‌ವಾಗಿ ದಾಸ್ತಾನು‌‌ ಮಾಡಿದ್ದ 64.950 ಕೆಜಿ ತೂಕದ 15 ಶ್ರೀಗಂಧದ ತುಂಡುಗಳನ್ನು ಅರಣ್ಯ ಸಂಚಾರಿದಳ ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ನರೂರು ಗ್ರಾಮದಲ್ಲಿ ನಡೆದಿದೆ.
ನರೂರು ಗ್ರಾಮದ ಸದಾನಂದ ಬಸಪ್ಪ‌ ಗೌಡ ಅವರ ಮನೆಯ ಹಿಂಭಾಗದಲ್ಲಿ ಕಾನೂನು ಬಾಹಿರವಾಗಿ‌ ಶ್ರೀಗಂಧದ ತುಂಡುಗಳನ್ನು ದಾಸ್ತಾನು ಇಟ್ಟಿರುವ ಖಚಿತ ಮಾಹಿತಿ ಆಧರಿಸಿ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.ದಾಳಿಯಲ್ಲಿ ಸುಮಾರು 2ಲಕ್ಷ 25 ಸಾವಿರ ಮೌಲ್ಯದ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿತನಾದ ಸದಾನಂದ ಬಸಪ್ಪ ಗೌಡ ತಲೆಮರೆಸಿಕೊಂಡಿದ್ದು ಶಿರಸಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement