Ration card ಅರ್ಜಿ ಸಲ್ಲಿಸುವವರಿಗೆ ಡಿ. 3 ರಂದು ಅವಕಾಶ: ಏನೆಲ್ಲಾ ಮಾಹಿತಿ ಬೇಕು ವಿವರ ನೋಡಿ.

1000080208 1000080208

ಬೆಂಗಳೂರು: ಹೊಸ ರೇಷನ್ ಕಾರ್ಡ್ ಗೆ ( Ration Card ) ಅರ್ಜಿ ಸಲ್ಲಿಸೋ ನಿರೀಕ್ಷೆಯಲ್ಲಿದ್ದವರಿಗೆ ಡಿಸೆಂಬರ್ 3ರಂದು ಅರ್ಜಿ ಸಲ್ಲಿಕೆಗೆ ಆಹಾರ ಇಲಾಖೆ ಅವಕಾಶ ನೀಡಿದೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಆಹಾರ ಇಲಾಖೆಯು, ಹೊಸ ರೇಷನ್ ಕಾರ್ಡ್ ಗೆ ಡಿಸೆಂಬರ್.3ರಂದು ರಾಜ್ಯಾಧ್ಯಂತ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದೆ.

Advertisement

ರೇಷನ್ ಕಾರ್ಡ್ ತಿದ್ದುಪಡಿಗಾಗಿ ನವೆಂಬರ್.30ರ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಎರಡು ಗಂಟೆಗಳ ಕಾಲ ಅವಕಾಶ ನೀಡಲಾಗಿದೆ .

ಇನ್ನೂ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವವರಿಗೆ ಆಧಾರ್ ಕಾರ್ಡ್ ಗೆ ಮೊಬೈಲ್ ( Aadhar Card link )ಸಂಖ್ಯೆ ಲಿಂಕ್ ಆಗಿರಬೇಕು.

6 ವರ್ಷದ ಒಳಗಿನ ಮಕ್ಕಳಿದ್ದರೇ ಜನನ ಪ್ರಮಾಣಪತ್ರವನ್ನು ಹೆಸರು ಸೇರ್ಪಡೆಗೆ ಬೇಕು. 6 ವರ್ಷ ಮೇಲ್ಪಟ್ಟವರಿಗೆ ಪ್ರಸಕ್ತ ಸಾಲಿನ ಜಾತಿ ಪ್ರಮಾಣಪತ್ರ ಅದು ಐದು ವರ್ಷಕ್ಕಿಂತ ಒಳಗೆ ಇರುವಂತ ದಾಖಲೆಗಳನ್ನು ನೀಡಬೇಕಿದೆ.

ಹೊಸ BPL, APL ಕಾರ್ಡ್ ಗಳಿಗಾಗಿ ಡಿ.3ರಂದು ಅರ್ಜಿಯನ್ನು ಕರ್ನಾಟಕ ಒನ್,( Karnataka one) ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಸೇವಾ ಕೇಂದ್ರಗಳಿಗೆ ತೆರಳಿ ಸಲ್ಲಿಸಬಹುದಾಗಿದ್ದು ಹೊಸ ಕಾರ್ಡ ಮಾಡಿಸಿಕೊಳ್ಳುವವರು ನಿಗದಿ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement