ಸಂಸದ ಅನಂತಕುಮಾರ್ ಹೆಗಡೆ ದೂರವಿಟ್ಟು ರಾಜ್ಯ ಬಿಜೆಪಿ ಟ್ವೀಟ್ ! ಕಾರಣ ಏನು?

AddText 03 10 10.17.27 AddText 03 10 10.17.27

ಕಾರವಾರ :-ಮಾರ್ಚ,9 ರ ಶನಿವಾರ ಉತ್ತರ ಕನ್ನಡ ಜಿಲ್ಲೆಯ (uttra kannda district )ಸಿದ್ದಾಪುರದಲ್ಲಿ ಸಂಸದ ಅನಂತಕುಮಾರ್ ಹೆಗಡೆ (MP Anant Kumar Hegde) ನೀಡಿದ್ದ ಸಂವಿಧಾನ ತಿದ್ದುಪಡಿ ( constitution )ಹೇಳಿಕೆ ಗೆ ಕುದ್ದು ರಾಜ್ಯ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ‌.

ಈ ಕುರಿತು ಎಕ್ಸ್ ಖಾತೆ (X ) ಯಲ್ಲಿ ಟ್ಟೀಟ್ (tweet) ಮಾಡಿದ ರಾಜ್ಯ ಬಿಜೆಪಿ (Karnataka Bjp) ಅವರ ಹೇಳಿಕೆ ವಯುಕ್ತಿಕ ಅಭಿಪ್ರಾಯ
ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ, ಪಕ್ಷದ ನಿಲುವಲ್ಲ ಎಂದು ಟ್ಟೀಟ್ ಮಾಡಿದೆ‌.

IMG 20240310 WA0079

ಏನಂದಿದ್ರು ಸಂಸದ ಅನಂತಕುಮಾರ್ ಹೆಗಡೆ?

Advertisement

ಸಂವಿಧಾನ ತಿದ್ದುಪಡಿ ಮಾಡೋದಾದ್ರೆ ಬಹುಮತ ಅವಶ್ಯ,ಕಾಂಗ್ರೆಸ್ ನವ್ರು ಸಂವಿಧಾನ ಮೂಲರೂಪವನ್ನ ತಿರುಚಿದ್ರು,ಅದರಲ್ಲಿ ಬೇಡದೇ ಇರೋದನ್ನೆಲ್ಲ ತುರುಕಿದ್ರು,ಇಡೀ ಹಿಂದೂ ಸಮಾಜವನ್ನ ದಮನಿಸೋ ರೀತಿ ಕಾನೂನು ತಂದಿಟ್ಟಿದ್ರು ಎಂದು ಸಂಸದ ಅನಂತಕುಮಾರ್ ಹೆಗಡೆ ಮತ್ತೊಮ್ಮೆ ಸಂವಿಧಾನದ ತಿದ್ದುಪಡಿ ಕುರಿತು ಮಾತನಾಡಿದ್ದರು.

ಇದನ್ನೂ ಓದಿ:-Bhatkal|ಸಂಸದ ಹೆಗಡೆ ಸೇರಿ 21 ಜನರ ಮೇಲೆ ಪ್ರಕರಣ ದಾಖಲು ಕಾರಣ ಏನು?

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಲಗೇರಿಯಲ್ಲಿ ಮಾತನಾಡಿದ ಅವರು ಇದೆಲ್ಲವೂ ಬದಲಾಗಬೇಕಿದ್ರೆ ಈ ಅಲ್ಪಮತದಲ್ಲಿ ಆಗುವುದಿಲ್ಲ, ಎರಡೂ ಕಡೆ 2/3 ಬಹುಮತ ಬೇಕಾಗುತ್ತೆ
ಕಾಂಗ್ರೆಸ್ ನವ್ರು ಜಾಸ್ತಿ ಆದಾಗ ಏನೇ ತಿದ್ದುಪಡಿ ತರೋದಿದ್ರೂ ರಾಜ್ಯಸಭೆಯಲ್ಲಿ ಪಾಸ್ ಆಗಲ್ಲ,

ಸಿಎಎ ಗೆ ರಾಜ್ಯಗಳಿಂದ ಒಪ್ಪಿಗೆ ಬಂದಿಲ್ಲ, ಸಿಎಎ ತರದಿದ್ರೆ ದೇಶದಲ್ಲಿ ಕಾನೂನು ಸುವ್ಯವಸ್ಥೆ ನಮ್ಮ ಕೈಲಿ ಇರಲ್ಲ, ಇದೊಂದು ದೇಶದ್ರೋಹಿಗಳ ಆಡಂಬರ ಆಗುತ್ತೆ,
ಎಲ್ಲಾ ಕಡೆ 2/3 ಮೆಜಾರಿಟಿ ಬರ್ಲಿ, ಆಮೇಲೆ ನೋಡಿ ಮಾರಿಜಾತ್ರೆ ಹೇಗಿರುತ್ತೆ ಅಂತ. ಜಾತ್ರೆಗೆ ಒಂದು ಕಳೆ ಬರೋದು ಅಷ್ಟರ ನಂತರ, ಗೆದ್ದ ನಂತರ ನಾವು ಮೇಲೆ ಹೋಗಿಬಿಡುತ್ತೇವೆ, ಗ್ರಾಮ ಪಂಚಾಯತ್, ಲೋಕಸಭೆ, ವಿಧಾನಸಭೆ ಯಾವದೇ ಇರಲಿ, ನಾನೇ ಅನ್ನೋದು ಬಂದುಬಿಡುತ್ತೆ, ನಾನೇ ದೇವ್ರು ಅನ್ನೋ ಭಾವನೆ ಬಂದುಬಿಡುತ್ತೆ, ಪತನ ಶುರುವಾಗೋದೇ ಅಲ್ಲಿಂದ
ಹಿಂದಿನ ಬಾರಿ 68 ಪರ್ಸೆಂಟ್ ಓಟು ನಮಗೆ ಬಂದಿತ್ತು
ಒಟ್ಟೂ ಹಿಂದೂಗಳ 85 % ಓಟು ಈ ಕ್ಷೇತ್ರದಲ್ಲಿ ಬಂದಿತ್ತು
ಒಂದು 15, 10% ಸೋಡಾಬಾಟ್ಲಿ ಇರ್ತಾವೆ, ಅದಕ್ಕೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಯಾರೂ ಇಲ್ಲ ಅಂದ್ರೆ ಕುಸ್ತಿ ಯಾರ್ ಹತ್ರ ಆಡೋದು?, ನಮ್ಮ ದೇಶ ಸರಿ ಆಗಬೇಕು ಅಂದ್ರೆ ನಮ್ಮವರಿಂದಲೇ ಹೊರತು ಬೇರೆ ಅವರಿಂದ ಸಾಧ್ಯವಿಲ್ಲ.

ಇದನ್ನೂ ಓದಿ:-Loksabha election 2024|ಮೊದಲ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್: ಕರ್ನಾಟಕದ ಮೊದಲ ಅಭ್ಯರ್ಥಿ ವಿವರ ನೋಡಿ

ಕಾಂಗ್ರೆಸ್ ನ ಈ ದೇಶದ್ರೋಹಿ ಸರ್ಕಾರ ಹೋಗಬೇಕು .ಜಾತ್ಯಾತೀತರು ಇದನ್ನ ತೀರ್ಮಾನ ಮಾಡಿಲ್ಲ, ತೀರ್ಮಾನ ಮಾಡಿದವರು ನಮ್ಮ ಹಿಂದೂಗಳು,ಈ ಬಾರಿ ಮೋದಿಯವರು 400ಕ್ಕೂ ಹೆಚ್ಚು ಸೀಟ್ ಗೆಲ್ಲಬೇಕು ಅಂದ್ರು, 400 ಯಾಕೆ? ನಮಗೆ ಲೋಕಸಭೆಯಲ್ಲಿ ಬಹುಮತ ಇದೆ, ರಾಜ್ಯಸಭೆಯಲ್ಲಿ ಇಲ್ಲ ,ಸಂವಿಧಾನ ತಿದ್ದುಪಡಿ ಆಗಬೇಕಾದ್ರೆ ಮೆಜಾರಿಟಿ ಬರಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದರು.

1709389442500

ಸಂವಿಧಾನ ಬದಲಾವಣೆಯ ಮಾತನಾಡಿರುವ ಅನಂತ ಕುಮಾರ ಹೆಗಡೆಯನ್ನು ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಬೇಕು.

ಹೆಗಡೆಯವರ ಹೇಳಿಕೆ ಸಂವಿಧಾನಕ್ಕಿಂತ ಮೊದಲು ಇದ್ದ ಮನು ಪ್ರಣೀತ ಸಂವಿಧಾನವನ್ನು ಜಾರಿಗೊಳಿಸುವ ದುಷ್ಠ ಆಲೋಚನೆ ಬಿಜೆಪಿ ಪಕ್ಷಕ್ಕೆ ಇದ್ದಂತಿದೆ.

*ಹೆಗಡೆಯವರ ಅಭಿಪ್ರಾಯಕ್ಕೆ ಪ್ರಧಾನಿಗಳ ಒಪ್ಪಿಗೆ ಇಲ್ಲದಿದ್ದರೆ ಅವರನ್ನು ಪಕ್ಷದಿಂದ ವಜಾ ಮಾಡಲಿ – ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಹಿಂದೂ ಧರ್ಮವನ್ನು ರಕ್ಷಿಸಬೇಕಾದರೆ ಸಂವಿಧಾನವನ್ನು ಬದಲಾಯಿಸಬೇಕು. ಅದಕ್ಕಾಗಿ ಲೋಕಸಭಾ ಚುನಾವಣೆಯಲ್ಲಿ
ಬಿಜೆಪಿಗೆ 400 ಸ್ಥಾನಗಳನ್ನು ಗೆಲ್ಲಿಸಿಕೊಡಬೇಕು” ಎಂದು ಸಂಸದ ಅನಂತ್‌ಕುಮಾರ್ ಹೆಗಡೆ ಕರೆ ನೀಡಿರುವುದು ಅವರ ವೈಯಕ್ತಿಕ ಹೇಳಿಕೆ ಅಲ್ಲ ಅದು ಭಾರತೀಯ ಜನತಾ ಪಕ್ಷದ ಗುಪ್ತ ಅಜೆಂಡಾದ ಭಾಗವೇ ಆಗಿದೆ.

ನಮ್ಮ ಸಂವಿಧಾನ ಸರ್ವಧರ್ಮಗಳನ್ನೂ ಸಮಭಾವದಿಂದ ನೋಡುತ್ತದೆ. ಪ್ರತಿಯೊಬ್ಬ ಪ್ರಜೆಗೂ ತನ್ನ ನಂಬಿಕೆಯ ಧರ್ಮವನ್ನು ಪಾಲಿಸಿಕೊಂಡು ಬರುವ ಸ್ವಾತಂತ್ರ್ಯವನ್ನು ನೀಡಿದೆ.

ಹೀಗಿರುವಾಗ ಸಂವಿಧಾನವನ್ನೇ ಬದಲಾಯಿಸಿ ಅನಂತ್ ಕುಮಾರ್ ಹೆಗಡೆ ಅವರು ಯಾವ ಹಿಂದೂಧರ್ಮವನ್ನು ರಕ್ಷಿಸಲು ಹೊರಟಿದ್ದಾರೆ? ಹೆಗಡೆಯವರ ಹೇಳಿಕೆಯನ್ನು ಗಮನಿಸಿದರೆ
ಬಾಬಾಸಾಹೇಬ್ ಅಂಬೇಡ್ಕರ್ ( Babasaheb Ambedkar) ರಚಿಸಿ ಕೊಟ್ಟ ಸಂವಿಧಾನಕ್ಕಿಂತ constitution ) ಮೊದಲು ಇದ್ದ ಮನು ಪ್ರಣೀತ ಸಂವಿಧಾನವನ್ನು ಜಾರಿಗೊಳಿಸುವ ದುಷ್ಠ ಆಲೋಚನೆ ಹೆಗಡೆ ಮತ್ತು ಅವರ ಪಕ್ಷಕ್ಕೆ ಇದೆ ಎನ್ನುವುದು ಸ್ಪಷ್ಟ.

ಸಂವಿಧಾನದ ವಿರುದ್ಧ ಅನಂತಕುಮಾರ ಹೆಗಡೆಯವರು ಮಾತನಾಡಿರುವುದು ಇದೇ ಮೊದಲ ಬಾರಿ ಅಲ್ಲ. “ಸಂವಿಧಾನವನ್ನು ಬದಲಾಯಿಸಬೇಕು, ಬದಲಾಯಿಸುವುದೇ ನಮ್ಮ ಉದ್ದೇಶ” ಎಂದೆಲ್ಲಾ ಆಗಾಗ ಅವರು ವಿಷಕಾರುತ್ತಲೇ ಇದ್ದಾರೆ. ಇಲ್ಲಿಯ ವರೆಗೆ ಬಿಜೆಪಿ ವರಿಷ್ಠರು ಅವರಿಗೆ ಕನಿಷ್ಠ ಎಚ್ಚರಿಕೆಯನ್ನೂ ನೀಡದೆ ಪರೋಕ್ಷವಾಗಿ ಅವರನ್ನು ಬೆಂಬಲಿಸುತ್ತಾ ಬಂದಿರುವುದನ್ನು ನೋಡಿದರೆ ಪಕ್ಷ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲ ಅವರಿಗೆ ಇದೆ ಎನ್ನುವುದು ಸ್ಪಷ್ಟ.

ಹೆಗಡೆ ಅಭಿಪ್ರಾಯವನ್ನು ಮೋದಿಯವರು ಒಪ್ಪದೆ ಇದ್ದರೆ ಅವರನ್ನು ಮೊದಲು ಪಕ್ಷದಿಂದ ಕಿತ್ತುಹಾಕಬೇಕು. ಅವರ ವಿರುದ್ಧ ಕ್ರಮಕೈಗೊಳ್ಳದೆ ಇದ್ದರೆ ಹೆಗಡೆ ಅಭಿಪ್ರಾಯಕ್ಕೆ ಪ್ರಧಾನಿಯವರ ಸಹಮತ ಇದೆ ಎಂದರ್ಥ. ಸಾರ್ವಜನಿಕ ಭಾಷಣಗಳಲ್ಲಿ ಸಂವಿಧಾನದ ಮೇಲೆ ಬದ್ಧತೆಯನ್ನು ಸಾರುವ ಮೋದಿ ಅವರ ಮಾತುಗಳು ಬರೀ ಓಳು ಎಂದು ತಿಳಿದುಕೊಳ್ಳಬೇಕಾಗುತ್ತದೆ.

ಪಕ್ಷದ ವರಿಷ್ಠರ ಬೆಂಬಲ ಇಲ್ಲದೆ ಅನಂತಕುಮಾರ ಹೆಗಡೆಯಂತಹ ಸಂಸದನೊಬ್ಬ ಈ ರೀತಿ ನಿರ್ಭೀತಿಯಿಂದ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡಲು ಸಾಧ್ಯ ಇಲ್ಲ. ಸಂವಿಧಾನಕ್ಕೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿರುವ ಅನಂತ್ ಕುಮಾರ್ ಹೆಗಡೆ, ಅದೇ ಸಂವಿಧಾನದ ವಿರುದ್ಧ ಹೇಳಿಕೆ ನೀಡಿರುವುದು ಖಂಡಿತ ಶಿಕ್ಷಾರ್ಹ ಅಪರಾಧ. ಇದನ್ನು ಲೋಕಸಭಾಧ್ಯಕ್ಷರು ಗಮನಕ್ಕೆ ತೆಗೆದುಕೊಂಡು ಹೆಗಡೆ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಅವರನ್ನು ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಬೇಕು ಎಂದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement