Sirsi|ಸೂಕ್ತ ದಾಖಲೆ ಕೊರತೆ 1 ಲಕ್ಷ ಹಣ ವಶಕ್ಕೆ

ಕಾರವಾರ :- ಸೂಕ್ತ ದಾಖಲೆ ನೀಡದ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಚಿಪಗಿಯಲ್ಲಿ ಶಿರಸಿಯಿಂದ ದಾವಣಗೆರೆ ಗೆ ತೆರಳುತಿದ್ದ ಹುಂಡೈ ಕ್ರಿಟಾ ವಾಹನವನ್ನು ತಡೆದು ₹1,01,500 ನಗದನ್ನು ಎಸ್.ಎಸ್.ಟಿ ತಂಡ ವಶಕ್ಕೆ ಪಡೆದಿದೆ.
ಹಣವನ್ನು ಶಿರಸಿ ತಾಲೂಕಿನ ಉಪ ಖಜಾನೆಯಲ್ಲಿ ಇಡಲಾಗಿದೆ ಎಂದು ಸಹಾಯಕ ಚುನಾವಣಾ ಧಿಕಾರಿ ಅಪರ್ಣಾ ರಮೇಶ್ ತಿಳಿಸಿದ್ದಾರೆ.
Honnavara|ಚಾಲಕನ ನಿರ್ಲಕ್ಷ ಪಲ್ಟಿಯಾದ ಟ್ಯಾಂಕರ್.

ಚಾಲಕನ ನಿರ್ಲಕ್ಷದಿಂದ ಹೊನ್ನಾವರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಮಂಗಳೂರಿನಿಂದ ಕುಮಟಾ ಮಾರ್ಗವಾಗಿ ತೆರಳುತ್ತಿದ್ದ ಅನಿಲ ತುಂಬಿದ ಟ್ಯಾಂಕರ್ ,ಕಾಮತ್ ಎಕ್ಸಿಕ್ಯೂಟಿವ್ ಸಮೀಪದ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿದ್ದು ನ್ಯೂಟ್ರಲ್ ಗೆ ಹಾಕಿ ಹ್ಯಾಂಡ್ ಬ್ರೇಕ್ ಹಾಕದೇ ಚಾಲಕ ಊಟಕ್ಕೆ ತೆರಳಿದ್ದು ಈ ವೇಳೆ ಪಕ್ಕದಲ್ಲಿದ್ದ ವಿದ್ಯುತ್ ಕಂಬ ( electric line)ಗೆ ಡಿಕ್ಕಿಯಾಗಿ ಹೊಂಡಕ್ಕೆ ಉರುಳಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟ್ಯಾಂಕರ್ ಸೋರಿಕೆ ಆಗದ ಹಿನ್ನಲೆಯಲ್ಲಿ ಅಗ್ನಿಶಾಮಕ ದಳ ಸಿಬ್ಬಂದಿ ಟ್ಯಾಂಕರ್ ನನ್ನು ಸ್ಥಳಾಂತರಿಸಿದರು.
ಇದನ್ನೂ ಓದಿ:-30 ವರ್ಷ ಸಂಸದರಾದ ಅನಂತಕುಮಾರ್ ಹೆಗಡೆ ರಣಾಂಗಣ ಹೇಗಿತ್ತು? ಅಂದಿನಿಂದ ಇಂದಿನ ವರೆಗೆ ಗಳಿಸಿದ ಮತವೆಷ್ಟು ಗೊತ್ತಾ?
ಕುಮಟಾದಲ್ಲಿ ಭೀಕರ ಅಪಘಾತ ! ಚಾಲಕ ಪಾರು

ಕುಮಟಾದ ರಾಷ್ಟ್ರೀಯ ಹೆದ್ದಾರಿ 66 ರ ಮಾರ್ಗದಲ್ಲಿ ಅಂಕೋಲದಿಂದ ಕುಮಟಾಗೆ ತೆರಳುತಿದ್ದ ಕಾರು ಅತೀ ವೇಗದಲ್ಲಿ ಬಂದು ಡಿವೇಡರ್ ಗೆ ಡಿಕ್ಕಿ ಹೊಡೆದು ಅಪಘಾತವಾಗಿದೆ. ಕಾರು ಕುಮಟಾ ಮೂಲದ್ದೆಂದು ತಿಳಿದುಬಂದಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Bhatkal|ಬಸ್ಸಿನಲ್ಲಿ ಲೈಂಗಿಕ ಕಿರುಕುಳ ಆರೋಪಿ ನ್ಯಾಯಾಂಗ ವಶಕ್ಕೆ

ಭಟ್ಕಳ: ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರಯಾಣಿಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಆರೋಪಿಯನ್ನು ಹೊನ್ನಾವರ ಮೂಲದ ಸುಬ್ರಹ್ಮಣ್ಯ ಈರಾ ಗೌಡ (35) ಎಂದು ಗುರುತಿಸಲಾಗಿದೆ. ಈತ ಮಲ್ಪೆಯಲ್ಲಿ ಬೋಟ್ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:-ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಕಾಗೇರಿಗೆ ಬೆಂಬಲ!
ಉಡುಪಿ ಆಸ್ಪತ್ರೆಗೆ ಹೋಗಿದ್ದ ಮಹಿಳೆಯೋರ್ವಳು ಗುರುವಾರದಂದು ತಡರಾತ್ರಿ ಖಾಸಗಿ ಬಸ್‌ನಲ್ಲಿ ತನ್ನ 14 ವರ್ಷದ ಮಗಳೊಂದಿಗೆ ಭಟ್ಕಳಕ್ಕೆ ಹಿಂತಿರುಗುತ್ತಿದ್ದರು. ಪ್ರಯಾಣದ ವೇಳೆ ಆರೋಪಿ ಬಸ್ಸಿನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ.
ಇದನ್ನೂ ಓದಿ:-ಕುಮಟಾ| ಪಕ್ಷೇತರ ಸ್ಪರ್ಧೆ ಇಲ್ಲ, ನನ್ನ ಬೆಂಬಲ “ಅವರಿಗೆ” ಎಂದ JDS ನಾಯಕ ಸೂರಜ್ ಸೋನಿ
ಮಹಿಳೆ ಮಧ್ಯಪ್ರವೇಶಿಸಿದಾಗ ಆಕೆಯ ಬಳಿಯೂ ಆತ ಅನುಚಿತವಾಗಿ ವರ್ತಿಸಿದ್ದಾನೆ. ಬಸ್ಸಿನಲ್ಲಿದ್ದಾಗಲೇ ಮಹಿಳೆ ಭಟ್ಕಳದಲ್ಲಿರುವ ತನ್ನ ಸಂಬಂಧಿಕರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾಳೆ. ಭಟ್ಕಳ ತಲುಪಿದಾಗ ಸ್ಥಳೀಯರು ಬಸ್ಸಿನ ಸುತ್ತ ಜಮಾಯಿಸಿ ಆರೋಪಿಯನ್ನು ಹಿಡಿದು ಭಟ್ಕಳ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಭಟ್ಕಳ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಅನಂತಕುಮಾರ್ ಹೆಗಡೆ ಸಲಹೆ ಸೂಚನೆ ತೆಗೆದುಕೊಳ್ಳಲು ನಾನು ಸಿದ್ದನಿದ್ದೇನೆ- ವಿಶ್ವೇಶ್ವರ ಹೆಗಡೆ ಕಾಗೇರಿ.

ಕಾರವಾರ : ಅಸಮಾಧಾನದ ಬೇಗುದಿಯಲ್ಲಿ ಬೇಯುತ್ತಿರುವ ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಸಿದ್ದಾಪುರದ ಶಂಕರಮಠ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಿತು.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹೊಸೂರು ಸಮೀಪ ಸಮಾವೇಶ ನಡೆಯಿತು. ಸಮಾವೇಶಕ್ಕೆ ಅನಂತಕುಮಾರ ಹೆಗಡೆ ಬಣದ ಯಾವೊಬ್ಬರೂ ಪಾಲ್ಗೊಳ್ಳದೇ ಇರೋದು ಟಿಕೆಟ್ ಘೋಷಣೆ ನಂತರದ ಅಸಮಾಧಾನಕ್ಕೆ ಪುಷ್ಟಿ ನೀಡುವಂತಿತ್ತು.
ಸಮಾವೇಶದ ನಂತರ ಮಾಧ್ಯಮದವರೊಡನೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ, ನಾವು ಭಾರತೀಯ ಜನತಾ ಪಕ್ಷದವರು ಒಟ್ಟಾಗಿ ಚುನಾವಣೆಯನ್ನು ಎದುರಿಸುತ್ತೇವೆ.
ಸಹಜವಾಗಿ ಅಭಿಪ್ರಾಯ ಬೇಧಗಳು ಇರಬಹುದು ಆದರೆ ಆ ಎಲ್ಲಾ ಅಭಿಪ್ರಾಯ ಭೇದಗಳನ್ನು ಮರೆತು ಮೋದಿ ಪ್ರಧಾನಿಯಾಗುವುದಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಈ ಕ್ಷೇತ್ರದಲ್ಲಿ ನಾನು ಗೆಲ್ಲುವುದಕ್ಕೆ ನಾವು ಹಿಂದಿನದೆಲ್ಲವನ್ನು ಮರೆತು ಒಗ್ಗಟ್ಟಾಗಿ ಈ ಕ್ಷೇತ್ರದ ಗೆಲುವಿಗಾಗಿ ಎಲ್ಲರೂ ಪ್ರಯತ್ನಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದರು.
ಸಂಸದರು ನಿಮ್ಮನ್ನು ಭೇಟಿ ಮಾಡಿಕೊಳ್ಳದೆ ವಾಪಸ್ ಕಳಿಸಿದ್ದಾರೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಕಾಗೇರಿ, ನಾನು ಸಂಸದರ ಭೇಟಿಗೆ ಸಮಯವನ್ನು ಕೇಳಿದ್ದೇನೆ. ಅವರು ಸಮಯ ಕೊಟ್ಟ ತಕ್ಷಣ ನಾನು ಅವರನ್ನು ಭೇಟಿ ಮಾಡುತ್ತೇನೆ. ಸಲಹೆ ಸೂಚನೆಗಳನ್ನು ತೆಗೆದುಕೊಳ್ಳಲು ನಾನು ಸಿದ್ಧನಿದ್ದೇನೆ. ಈಗಾಗಲೇ ನಮ್ಮ ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ಹಿರಿಯರು ಅವರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದಾರೆ. ನಾನು ಕೂಡ ಅದೇ ವಿನಂತಿಯನ್ನು ಮಾಡಿಕೊಳ್ಳುತ್ತೇನೆ. ಈ ಚುನಾವಣೆಯಲ್ಲಿ ನಾನು ಜಯಗಳಿಸುತ್ತೇನೆ ಎಂದರು.






