ದಾಂಡೇಲಿ ಯಲ್ಲಿ ನೀರು ಪಾಲಾದ ಒಂದೇ ಕುಟುಂಬದ ಆರು ಜನ!

kali rivee kali rivee

ಕಾರವಾರ :-ನೀರಿನಲ್ಲಿ ಮುಳುಗಿ ಆರು ಪ್ರವಾಸಿಗರ ( tourist) ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಅಕ್ವಾಡ ಗ್ರಾಮದ ಕಾಳಿ ನದಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ( Hubballi) (Hubli)ಈಶ್ವರ ನಗರದ ನಿವಾಸಿಗಳಾದ ನಜೀರ್ ಅಹ್ಮದ್ (40),ಅಲ್ಛೀಯಾ ಅಹ್ಮದ್ (10),ಮೋಹಿನ್ ಅಹ್ಮದ್ (6),ರೇಷಾ ಉನ್ನಿಸಾ (38),ಇಫ್ರಾ‌ಅಹ್ಮದ್ (15),ಅಬೀದ್ ಅಹ್ಮದ್ (12) ಮೃತಪಟ್ಟವರಾಗಿದ್ದು ದಡದಲ್ಲಿದ್ದ ಇಬ್ಬರು ಸುರಕ್ಷಿತರಾಗಿದ್ದಾರೆ.

Advertisement

ಮೃತರು ಒಂದೇ ಕಯಟುಂಬದವರಾಗಿದ್ದು ಎಂಟು ಜನರು ವಾಹನ ಮಾಡಿಕೊಂಡು ದಾಂಡೇಲಿ(Dandeli) ಭಾಗಕ್ಕೆ ಪ್ರವಾಸ ಬಂದಿದ್ದರು. ಈಜುವ ವೇಳೆ ಮುಳಿಗಿದ್ದು ಸಾವು ಕಂಡಿದ್ದಾರೆ.

ದಾಂಡೇಲಿ ಪೊಲೀಸರು ಆರು ಜನರ ದೇಹಗಳನ್ನ ಹೊರತೆಗೆದಿದ್ದಾರೆ.ದೇಹಗಳನ್ನ ದಾಂಡೇಲಿ ಆಸ್ಪತ್ರೆಗೆ ರವಾನಿಸಿದ್ದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ‌

ಘಟನೆ ಸಂಬಂಧ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement