
ಕಾರವಾರ :- ಸಾಮೂಹಿಕವಾಗಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ 14 ವಿಧ್ಯಾರ್ಥಿನಿಯರು ಯತ್ನಿಸಿದ ಘಟನೆ
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ (Dandeli) ಜನತಾ ಶಾಲೆಯಲ್ಲಿ ನಡೆದಿದೆ.
9 ಮತ್ತು 10 ನೇ ತರಗತಿಯ ಒಟ್ಟು 14 ವಿಧ್ಯಾರ್ಥಿನಿಯರು(student) ಎಡಗೈನ ತೋಳಿನ ಕೆಳಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದವರಾಗಿದ್ದು ಕೆಲವು ವಿದ್ಯಾರ್ಥಿನಿಯರು ಕೈ ಮೇಲೆ ಸ್ಟೆಪ್ಲರ್ ಪಿನ್ ನಿಂದ ಗೀರಿಕೊಂಡು ಕೈ ನ ನರ ಕತ್ತರಿಸಿಕೊಳ್ಳಲು ಯತ್ನ ನಡೆಸಿದ್ದಾರೆ.
ಇದನ್ನೂ ಓದಿ:-ಜಿಲ್ಲಾಧಿಕಾರಿ ಆದೇಶ ಪ್ರತಿ ನಕಲು ಮಾಡಿ ಜಮೀನು ಲಪಟಾಯಿಸಲು ಯತ್ನ-ಇಬ್ಬರ ವಿರುದ್ಧ ಪ್ರಕರಣ ದಾಖಲು
ಶಾಲೆಯಲ್ಲಿ ತಪಾಸಣೆ ವೇಳೆ ಘಟನೆ ಬೆಳಕಿಗೆ ಬಂದಿದ್ದು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದರೋ ಅಥವಾ ಶಾಲೆಯಲ್ಲಿ ಯತ್ನಿಸಿದರೋ ಮಾಹಿತಿ ಹೊರಬರಬೇಕುದ್ದು ,ಆತ್ಮ ಹತ್ಯೆ ಯತ್ನಕ್ಕೆ ಕಾರಣ ನಿಗೂಢವಾಗಿದೆ . ಕೆಲವು ವಿದ್ಯಾರ್ಥಿನಿಯರು ಗೇಮ್ (game)ಆಟದ ಟಾಸ್ಕ ಎಂದರೇ ಕೆಲವರು ಬೇರೆಯೇ ಸಬೂಬು ಹೇಳುತಿದ್ದಾರೆ.
ಇದನ್ನೂ ಓದಿ:- ಇಂದಿನ ದಿನ ಭವಿಷ್ಯ ತಿಳಿಯಲು ಅಕ್ಷರದ ಮೇಲೆ ಕ್ಲಿಕ್ ಮಾಡಿ.
ಈ ಹಿನ್ನಲೆಯಲ್ಲಿ ಶಾಲಾ ಆಡಳಿತ ಪೊಲೀಸರೊಂದಿಗೆ (police) ಪೋಷಕರ ಸಭೆ ನಡೆಸಿ ಮಾಹಿತಿ ಕಲೆಹಾಕುವ ಪ್ರಯತ್ನ ನಡೆಸುತಿದ್ದು ತನಿಖೆ ನಡೆಯುತ್ತಿದೆ. ಘಟನೆ ಸಂಬಂಧ ದಾಂಡೇಲಿ ನಗರ ಠಾಣೆಯಲ್ಲಿ ದೂರು ನೀಡಲಾಗಿದ್ದು ಈವರೆಗೂ ಪ್ರಕರಣ ದಾಖಲಾಗಿಲ್ಲ.






