BREAKING NEWS
Search

ದಿನಭವಿಷ್ಯ |Astrology- September-17-2023

97

ಇಂದಿನ ಪಂಚಾಂಗ (panchanga)
ಶ್ರೀ ಶೋಭಕೃತುನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ.
ವಾರ:- ಭಾನುವಾರ
ತಿಥಿ: ಬಿದಿಗೆ ಬೆಳಿಗ್ಗೆ 8.58 ರವರೆಗೂ ಇರುತ್ತದೆ. ಆ ನಂತರ ತದಿಗೆ ಆರಂಭವಾಗುತ್ತದೆ.
ನಕ್ಷತ್ರ: ಹಸ್ತ ನಕ್ಷತ್ರವು ಬೆಳಿಗ್ಗೆ 9.14 ರವರೆಗೂ ಇರುತ್ತದೆ. ಆನಂತರ ಚಿತ್ತ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಿಗ್ಗೆ 6.08
ಸೂರ್ಯಾಸ್ತ: ಸಂಜೆ 6.19
ರಾಹುಕಾಲ: ಸಂಜೆ 4.30 ರಿಂದ ಸಂಜೆ 6.00

ರಾಶಿ ಫಲಗಳು(today Rashipala)

ಮೇಷ

ಸದಾಕಾಲ ಚಟುವಟಿಕೆಯಿಂದ ಕೆಲಸ ಕಾರ್ಯಗಳಲ್ಲಿ ನಿರತರಾಗಿರುವಿರಿ. ಮನಸ್ಸಿಗೆ ಒಗ್ಗುವಂತಹ ಕೆಲಸಗಳನ್ನು ಆಯ್ದುಕೊಳ್ಳುವಿರಿ. ದೂರದ ಊರಿಗೆ ಪ್ರಯಾಣ ಮಾಡುವಿರಿ. ಮನಸು ಮಾಡಿದಲ್ಲಿ ಅನಾವಶ್ಯಕ ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಬಹುದು. ದೇಹದ ತೂಕವನ್ನು ಕಡಿಮೆ ಮಾಡಿಕೊಂಡಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ. ಮಾರಾಟ ಪ್ರತಿನಿಧಿಗಳಿಗೆ ಹೆಚ್ಚಿನ ಆದಾಯ ಇರುತ್ತದೆ. ಅತಿಯಾದ ಕೆಲಸದಿಂದಾಗಿ ನಿಶ್ಯಕ್ತಿ ನಿಮ್ಮನ್ನು ಕಾಡುತ್ತದೆ. ವಿದ್ಯಾರ್ಥಿಗಳು ವಿಶೇಷವಾದ ಸಾಧನೆ ಮಾಡಲಿದ್ದಾರೆ. ಕೃಷಿ ಉತ್ಪನ್ನಗಳಿಂದ ಲಾಭವಿದೆ.

ಹೀಗೆ ಮಾಡಿ: ಕೆಂಪು ಹೂವಿನ ಸಸ್ಯಗಳಿಗೆ ನೀರನ್ನು ಹಾಕಿ ದಿನದ ಕೆಲಸ ಆರಂಭಿಸುವುದು.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಉತ್ತರ

ಅದೃಷ್ಠದ ಬಣ್ಣ: ಬಿಳಿ

ವೃಷಭ

ಯಾರನ್ನೂಸುಲಭವಾಗಿ ನಂಬುವುದಿಲ್ಲ. ಮಾತಿನಿಂದ ಮೋಡಿ ಮಾಡುವಿರಿ. ಸುಲಭವಾಗಿ ಸೋಲನ್ನು ಒಪ್ಪುವುದಿಲ್ಲ. ಕುಟುಂಬದವರ ಜೊತೆಯಲ್ಲಿ ಸಂತೋಷದಿಂದ ದಿನವಿಡೀ ಕಾಲ ಕಳೆಯಲು ನಿರ್ಧರಿಸುವಿರಿ. ನಿರೀಕ್ಷಿತ ಮೂಲಗಳಿಂದ ಹಣ ದೊರೆಯುತ್ತದೆ. ದುಬಾರಿ ಉಡುಗೊರೆಯೊಂದು ನಿಮ್ಮ ಪಾಲಾಗಲಿದೆ. ಧಾರ್ಮಿಕ ಕೆಲಸಗಳಿಗಾಗಿ ಧನವ್ಯಯವಾಗಲಿದೆ. ವೃತ್ತಿಜೀವನದಲ್ಲಿ ನಿಮಗೆ ಅತ್ಯುನ್ನತ ಗೌರವ ದೊರೆಯುತ್ತದೆ. ಉದ್ಯೋಗಸ್ಥರಿಗೆ ಶುಭದಿನ. ಆರೋಗ್ಯದ ಕಡೆ ಗಮನ ಇರಲಿ. ವಿದ್ಯಾರ್ಥಿಗಳು ವಿಶೇಷವಾದ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಪಾಲುಗಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ.

ಹೀಗೆ ಮಾಡಿ: ಮನೆಯ ಪೂಜಾಗೃಹವನ್ನು ಶುಚಿಗೊಳಿಸಿ ದಿನದ ಕೆಲಸ ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಠದ ಬಣ್ಣ: ಕೆಂಪು

ಮಿಥುನ

ಅನಾವಶ್ಯಕ ಖರ್ಚುವೆಚ್ಚಗಳನ್ನು ಕಡಿಮೆ ಮಾಡುವುದು ಒಳಿತು. ಕುಟುಂಬದಲ್ಲಿ ಪರಸ್ಪರ ಒಮ್ಮತದ ವಾತಾವರಣ ಇರುತ್ತದೆ. ಉದ್ಯೋಗದಲ್ಲಿ ಉನ್ನತಿ ಇರುತ್ತದೆ. ಗೃಹೋಪಯೋಗಿ ಕೆಲಸಗಳಿಗೆ ಹಣವನ್ನು ಖರ್ಚು ಮಾಡುವಿರಿ. ವೃತ್ತಿಗೆ ಸಂಬಂಧಿಸಿದ ವಿಶೇಷ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವಿರಿ. ಅನಿವಾರ್ಯವಾಗಿ ವಾಸಸ್ಥಳವನ್ನು ಬದಲಾಯಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಅನಿರೀಕ್ಷಿತ ಧನಲಾಭ ದೊರೆಯುತ್ತದೆ. ಪಾಲುಗಾರಿಕೆಯ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಗಳಿಸುವಿರಿ. ನೂತನ ವಾಹನ ಕೊಳ್ಳುವಿರಿ.

ಹೀಗೆ ಮಾಡಿ: ಮನೆಯಲ್ಲಿನ ಸಾಕು ಪ್ರಾಣಿಗಳಿಗೆ ಆಹಾರ ನೀಡಿ ದಿನದ ಕೆಲಸವನ್ನು ಆರಂಭಿಸಿ.

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಠದ ಬಣ್ಣ: ಹಸಿರು

ಕಟಕ
ದೇಹಾಯಾಸ ,ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ನೆಲೆಸಿರುತ್ತದೆ. ಉದ್ಯೋಗದಲ್ಲಿ ಎದುರಾಗುವ ಅಡಚಣೆಗಳು ಕಣ್ಮರೆಯಾಗುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಹಾಕಿದ ಬಂಡವಾಳಕ್ಕೆ ಮೋಸವಿರದು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಪರಿಶ್ರಮವನ್ನು ತೋರಬೇಕು. ಅನಿರೀಕ್ಷಿತವಾಗಿ ಬರುವ ಶುಭ ವರ್ತಮಾನದ ಕಾರಣ ಸಂಭ್ರಮದ ಆಚರಣೆ ಕಂಡುಬರುತ್ತದೆ. ಸಂಗಾತಿಯೊಂದಿಗೆ ಕಿರು ಪ್ರವಾಸ ಕೈಗೊಳ್ಳುವಿರಿ. ಏಕಾಂಗಿಯಾಗಿ ಉಳಿಯಲು ಬಯಸುವಿರಿ. ಅನಿರೀಕ್ಷಿತವಾದ ಖರ್ಚು ವೆಚ್ಚಗಳು ಎದುರಾಗಲಿವೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ.

ಹೀಗೆ ಮಾಡಿ: ಮನೆಯಲ್ಲಿರುವ ಪೂಜಾಗೃಹದಲ್ಲಿ ತುಪ್ಪದ ದೀಪವನ್ನು ಹಚ್ಚಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 4

ಅದೃಷ್ಟದ ದಿಕ್ಕು : ವಾಯುವ್ಯ

ಅದೃಷ್ಠದ ಬಣ್ಣ: ಗುಲಾಬಿ ಬಣ್ಣ

ಸಿಂಹ

ಯಾವುದೇ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಾಸ್ಯಪ್ರಜ್ಞೆ ಇರುವ ಕಾರಣ ಕುಟುಂಬದಲ್ಲಿ ಸಂತಸ ಮತ್ತು ನೆಮ್ಮದಿ ಕಂಡುಬರುವುದು. ಹಠದಿಂದ ಕೈಹಿಡಿದ ಕೆಲಸ ಕಾರ್ಯಗಳನ್ನು ಯಶಸ್ವಿಗೊಳಿಸುವಿರಿ. ಉದ್ಯೋಗದಲ್ಲಿ ಪ್ರತಿಷ್ಠಿತ ಸ್ಥಾನಮಾನ ದೊರೆಯಲಿದೆ. ವ್ಯಾಪಾರ ವ್ಯವಹಾರಗಳು ಪ್ರಯತ್ನಕ್ಕೆ ತಕ್ಕ ಫಲಿತಾಂಶವನ್ನು ನೀಡುತ್ತದೆ. ಅವಿವಾಹಿತರಿಗೆ ಪರಿಚಯ ಅಥವಾ ಸಂಬಂಧಿಕರ ಜೊತೆಯಲ್ಲಿ ವಿವಾಹವಾಗುತ್ತದೆ. ಧಾರ್ಮಿಕ ಕಾರ್ಯಗಳ ನೇತೃತ್ವವನ್ನು ವಹಿಸುವಿರಿ. ವಿದ್ಯಾರ್ಥಿಗಳು ನಿರೀಕ್ಷೆಗೂ ಮೀರಿದ ಯಶಸ್ಸನ್ನು ಗಳಿಸುತ್ತಾರೆ. ಅತಿ ಮುಖ್ಯ ಕೆಲಸದ ನಡುವೆ ವಿಶ್ರಾಂತಿಯನ್ನು ಪಡೆಯುವಿರಿ.

ಹೀಗೆ ಮಾಡಿ: ಬಲಗೈಯಲ್ಲಿ ಬೆಳ್ಳಿಯ ಉಂಗುರವನ್ನು ಧರಿಸಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 6

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಠದ ಬಣ್ಣ: ಕೆಂಪು

ಕನ್ಯಾ

ನಿರೀಕ್ಷೆಗೆ ತಕ್ಕಂತೆ ಕೆಲಸ ಕಾರ್ಯಗಳು ನಡೆವ ಕಾರಣ ಎಲ್ಲರೊಂದಿಗೆ ಸಂತಸದಿಂದ ಕಾಲ ಕಳೆಯುವಿರಿ. ಕುಟುಂಬದಲ್ಲಿ ಹಬ್ಬದ ವಾತಾವರಣ ವಿಶೇಷವಾಗಿರುತ್ತದೆ. ಆತ್ಮೀಯರ ಆಗಮನದಿಂದ ಖರ್ಚು ವೆಚ್ಚಗಳು ಹೆಚ್ಚುತ್ತವೆ. ಉದ್ಯೋಗದಿಂದ ದೂರವಾಗಿ ದಿನದ ಮಟ್ಟಿಗೆ ವಿಶ್ರಾಂತಿಯನ್ನು ಪಡೆಯುವಿರಿ. ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ. ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯಿಂದ ಉನ್ನತ ಸ್ಥಾನ ಗಳಿಸುತ್ತಾರೆ. ಕುಟುಂಬದ ಸದಸ್ಯರ ಜೊತೆಯಲ್ಲಿ ಹುಟ್ಟೂರಿಗೆ ಮನರಂಜನೆಗಾಗಿ ತೆರಳುವಿರಿ.

ಹೀಗೆ ಮಾಡಿ: ಕುಟುಂಬದ ಹಿರಿಯರ ಆಶೀರ್ವಾದವನ್ನು ಪಡೆದು ದಿನದ ಕೆಲಸ ಕಾರ್ಯಗಳನ್ನು ಆರಂಭಿಸುವುದು ಸೂಕ್ತ

ಅದೃಷ್ಟದ ಸಂಖ್ಯೆ : 9

ಅದೃಷ್ಟದ ದಿಕ್ಕು : ವಾಯುವ್ಯ

ಅದೃಷ್ಠದ ಬಣ್ಣ: ಕಂದು ಬಣ್ಣ

ಓದುಗರ ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಕನ್ನಡವಾಣಿ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!