BREAKING NEWS
Search

ಜಿಲ್ಲಾಧಿಕಾರಿ ಆದೇಶ ಪ್ರತಿ ನಕಲು ಮಾಡಿ ಜಮೀನು ಲಪಟಾಯಿಸಲು ಯತ್ನ-ಇಬ್ಬರ ವಿರುದ್ಧ ಪ್ರಕರಣ ದಾಖಲು.

217

ಕಾರವಾರ:ಉತ್ತರ ಕನ್ನಡ ಜಿಲ್ಲಾಧಿಕಾರಿ ಆದೇಶ ಪತ್ರವನ್ನು ನಕಲು ಮಾಡಿ ಭೂಮಿ ಮಂಜೂರಿ ಮಾಡಿಸಲು ಪ್ರಯತ್ನಿಸಿದ ಪ್ರಕರಣದಲ್ಲಿ ಶಿರಸಿ ತಾಲೂಕಿನ ಇಬ್ಬರ ವಿರುದ್ಧ ಬನವಾಸಿ ಪೊಲೀಸ್‌ ಠಾಣೆಯಲ್ಲಿ( Banavasi police) ಪ್ರಕರಣ ದಾಖಲಾಗಿದೆ.

ದಾಸನಕೊಪ್ಪದ ಬಸವರಾಜ ವೀರಭದ್ರಪ್ಪ ಇಟಗಿ ಹಾಗೂ ಬಿಬಿಜಾನ್ ಸಯ್ಯದ್ ಹುಸೇನ್‌ಸಾಬ್ ಹೆಬ್ಬತ್ತಿ ಜಿಲ್ಲಾಧಿಕಾರಿ ಆದೇಶ ಪ್ರತಿ ನಕಲು ಮಾಡಿದ ಆರೋಪಿಗಳಾಗಿದ್ದು ಇವರ ವಿರುದ್ಧ ಬನವಾಸಿ ಹೋಬಳಿ ಕಂದಾಯ ನಿರೀಕ್ಷಕಿ( revenue officer)
ಮಂಜುಳಾ ಟಿ.ನಾಯ್ಕ ದೂರು ದಾಖಲಿಸಿದ್ದಾರೆ.

ಈ ಇಬ್ಬರು ಕಾರವಾರ ಜಿಲ್ಲಾಧಿಕಾರಿ ಕಚೇರಿಗೆ( Uttara Kannada District Commissioner Office) ಮನವಿ ಸಲ್ಲಿಸಿ ತಮ್ಮ ಅತಿಕ್ರಮಣ ಜಮೀನು ಸಕ್ರಮಗೊಳಿಸಲಾಗಿದ್ದು, ಹೆಸರನ್ನು ಪಹಣಿಯಲ್ಲಿ ನಮೂದಿಸಬೇಕು ಎಂದು ಮನವಿ ಮಾಡಿದ್ದರು.

ಅರ್ಜಿಯ ಜತೆ ಸರ್ಕಾರ ಮಾಡಿದ ಆದೇಶ ಹಾಗೂ (government order )ಜಿಲ್ಲಾಧಿಕಾರಿ ಅವರು ಮಾಡಿದ ಆದೇಶ ಪ್ರತಿಯನ್ನೂ ಇಟ್ಟಿದ್ದರು. ಈ ಸಂಬಂಧ ಕಚೇರಿಯ ಸಿಬ್ಬಂದಿ ಪರಿಶೀಲಿಸಿದ್ದು ಡಿಸಿ ಅವರ ಆದೇಶದ ಬಗ್ಗೆ ಅನುಮಾನ ಮೂಡಿತ್ತು.

ಹೀಗಾಗಿ ತನಿಖೆ ನಡೆಸುವಂತೆ ಶಿರಸಿ ತಹಸೀಲ್ದಾರ್‌ಗೆ ಸೂಚಿಸಲಾಗಿತ್ತು. ಶಿರಸಿ ತಹಸೀಲ್ದಾರ್‌ ಇಬ್ಬರಿಗೂ ನೋಟಿಸ್ ನೀಡಿ, ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚನೆ ನೀಡಿದ್ದರು. ಆದರೆ, ಇಬ್ಬರೂ ಹಾಜರಾಗದ ಕಾರಣ ಶಿರಸಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಇಬ್ಬರ ವಿರುದ್ಧ ಫೋರ್ಜರಿ, ವಂಚನೆ ಪ್ರಕರಣ ವನ್ನು ಕಂದಾಯ ನಿರೀಕ್ಷಕಿ ಮಂಜುಳಾ ನಾಯ್ಕ ದಾಖಲಿಸಿದ್ದು ತನಿಖೆ ನಡೆಯುತ್ತಿದೆ‌




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!