ಹೊನ್ನಾವರ ಬಸ್ ಪಲ್ಟಿ- ಇಬ್ಬರು ಸಾವು 49 ಜನರಿಗೆ ಗಾಯ ವಿವರ ನೋಡಿ

honnavar honnavar
1000594993
1000594994

ಕಾರವಾರ:- ಚಾಲಕನ (draiver) ನಿರ್ಲಕ್ಷದಿಂದ ಅತೀ ವೇಗದಲ್ಲಿ ತಿರುವಿನಲ್ಲಿ ನಿಯಂತ್ರಣ ತಪ್ಪಿ ಖಾಸಗಿ ಬಸ್ (bus) ಪಲ್ಟಿಯಾಗಿ ಇಬ್ಬರು ಸಾವುಕಂಡು 49 ಜನರಿಗೆ ಗಾಯವಾದ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ (Honnavara) ಸುಳೆಮುರ್ಕಿ ತಿರುವಿನಲ್ಲಿ ನಡೆದಿದೆ.

ತುಮಕೂರಿನ ಲೋಕೇಶ್ (26), ಚಿಕ್ಕಬಳ್ಳಾಪುರದ ರುದ್ರೇಶ್ (38) ಅಫಘಾತದಲ್ಲಿ ಸಾವಿಗೀಡಾದವರಾಗಿದ್ದು ,ಗೌರಿಬಿದನೂರಿನ ರಜನಿ (30) ಇವರು ಒಂದು ಕೈ ಕಳೆದುಕೊಂಡು ಗಂಭೀರ ಗಾಯಗೊಂಡಿದ್ದಾರೆ.

ಉಳಿದ ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದು,
ಗೌರಿ ಬಿದನೂರಿನಿಂದ ಧರ್ಮಸ್ಥಳಕ್ಕೆ ಬಸ್ ಮೂಲಕ 53 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ಅತೀ ವೇಗದ ಕಾರಣ ಸುಳೆಮುರ್ಕಿ ತಿರುವಿನಲ್ಲಿ ಬಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಅವಘಡ ಸಂಭವಿಸಿದೆ.

Advertisement

ಇದನ್ನೂ ಓದಿ:-ಬಿಜೆಪಿಯವರಿಗೆ ನಾವು ಬೇಡ ಅಂದ್ರೆ ನಾವೇಕೆ ಪ್ರಚಾರಕ್ಕೆ ಹೋಗಬೇಕು-MLA ಶಿವರಾಮ್ ಹೆಬ್ಬಾರ್

ಗಾಯಾಳುಗಳನ್ನು ಉಡುಪಿ, ಶಿವಮೊಗ್ಗದ ಮೆಗ್ಗಾನ್ ಹಾಗೂ ಹೊನ್ನಾವರ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದ್ದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement