ಬಿಜೆಪಿಯವರಿಗೆ ನಾವು ಬೇಡ ಅಂದ್ರೆ ನಾವೇಕೆ ಪ್ರಚಾರಕ್ಕೆ ಹೋಗಬೇಕು-MLA ಶಿವರಾಮ್ ಹೆಬ್ಬಾರ್

hebbar mla hebbar mla

ಕಾರವಾರ:- ಲೋಕಸಭಾ ಚುನಾವಣೆಯಲ್ಲಿ ಪ್ರಚಾರಕ್ಕೆ ಭಾಗವಹಿಸೋ ವಾತಾವರಣ ಬಿಜೆಪಿಯವರೇ ಇಟ್ಟಿಲ್ಲ.ಅವರಿಗೇ ನಾವು ಬೇಡ ಅಂದ್ರೆ ನಾವ್ಯಾಕೆ ಅವರು ಬೇಕು ಅಂತಾ ಹೋಗಬೇಕು ಎಂದು ಬಿಜೆಪಿ ವಿರುದ್ಧ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮತ್ತೆ ಅಸಮಧಾನ ಹೊರ ಹಾಕಿದ್ದಾರೆ.

ಶಿರಸಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಪ್ರಚಾರದ ಪೋಸ್ಟರ್‌ಗಳಲ್ಲಿ ನನ್ನ ಹಾಗೂ ದಿನಕರ ಶೆಟ್ಟಿಯವರ ಫೋಟೋ (photo) ಕೂಡ ತೆಗೆಯಲಾಗಿದೆ,ಅವರಿಗೇ ನಾವು ಬೇಡ ಅಂದ್ರೆ ನಾವ್ಯಾಕೆ ಅವರು ಬೇಕು ಅಂತಾ ಹೋಗಬೇಕು..? ನೀರು ಹರಿದು ಹೋದ ಮೇಲೆ ಕಟ್ಟೆ ಹಾಕಿ ಏನೂ ಪ್ರಯೋಜನವಿಲ್ಲ,ನೀರು ನಿಲ್ಲಬೇಕು ಅಂದ್ರೆ ಹರಿದು ಹೋಗುವ‌‌ ಮೊದಲೇ ಕಟ್ಟೆ ಹಾಕಬೇಕು.

Advertisement

ಹರಿದುಹೋದ ಮೇಲೆ ಕಟ್ಟೆ ಒಂದೇ ಉಳಿಯುತ್ತೆ, ನೀರು ಉಳಿಯಲ್ಲ ಎಂದು ಪಕ್ಷಕ್ಕೆ ಟಾಂಗ್ ನೀಡಿದರು. ಇನ್ನು ಪುತ್ರ ವಿವೇಕ್ ಹೆಬ್ಬಾರ್ ಕಾಂಗ್ರೆಸ್ ಸೇರಿರೋ ವಿಚಾರ ಕುರಿತು ಮಾತನಾಡಿದ ಅವರು ಆಂಧ್ರಪ್ರದೇಶದಲ್ಲಿ ಪತಿ ಒಂದು ಪಕ್ಷ, ಪತ್ನಿ‌ ಒಂದು‌ ಪಕ್ಷದಲ್ಲಿ ಸ್ಪರ್ಧಿಸಿದ್ದಾರೆ, ಬಿಜೆಪಿಯ ಮುಖಂಡರು ಒಂದು ಪಕ್ಷ, ಅವರ ಪುತ್ರ ಒಂದು ಪಕ್ಷದಲ್ಲಿ ಇದ್ದದ್ದೂ ಇದೆ.ರಾಜಕಾರಣದಲ್ಲಿ ಅವರೊಂದು ಕಡೆ, ನಾವೊಂದು ಕಡೆ ಇರಬಾರದೂಂತ ಏನಿಲ್ಲ, ಇರಬಹುದು.

ಯಾರು ಯಾವ ಪಕ್ಷದಲ್ಲಿ (party) ಬೇಕಾದ್ರೂ ಇರಬಹುದು.ಮನೆಯಲ್ಲಿ ಕೂತರೆ ಯಾರೂ ಏನೂ ತಂದುಕೊಡಲ್ಲ ರಾಜಕಾರಣದಲ್ಲಿ,ಶ್ರಮಪಟ್ಟು ದುಡಿಬೇಕು, ಶ್ರಮಪಟ್ಟು ಮೇಲೆ ಹೋಗ್ಬೇಕು ಎಂದರು.ಇನ್ನು ಬಿಜೆಪಿಯಲ್ಲಿ ರಾಜ್ಯ, ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬಂದ್ರೆ ಭಾಗವಹಿಸೋಕೆ ವಿಚಾರ ಮಾಡ್ತೀನಿ ಎಂದು ಪ್ರಚಾರ ಸಭೆಯಲ್ಲಿ ಭಾಗವಹಿಸುವ ಕುರಿತು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement