ರಾಜ್ಯಕ್ಕೆ ಎರಡನೇ Rank ನೀಡಿದ ಶಿರಸಿ ಶೈಕ್ಷಣಿಕ ಜಿಲ್ಲೆ |ವಿವರ ನೋಡಿ.

SSLC result 2024 SSLC result 2024
Gilani Supermarket Karwar
1000635057

SSLC RESULT :- ಎಸ್.ಎಸ್.ಎಲ್.ಸಿ ಫಲಿತಾಂಶ (SSLC result )ಇಂದು ಪ್ರಕಟಗೊಂಡಿದ್ದು 625 ಕ್ಕೆ 624 ಅಂಕ ಗಳಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಮೂವರು ರಾಜ್ಯಕ್ಕೆ ಎರಡನೇ ರ್ಯಾಂಕ್ ಬಂದಿದ್ದಾರೆ.

ಶಿರಸಿಯ (sirsi) ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ದರ್ಶನ ಸುಬ್ರಾಯ ಭಟ್, ಗೋಳಿ ಪ್ರೌಢಶಾಲೆಯ ಚಿನ್ಮಯ ಹೆಗಡೆ ಹಾಗೂ ಭೈರುಂಬೆ ಫ್ರೌಡಶಾಲೆಯ ಶ್ರೀರಾಮ ಕೆ.ಎಂ ರಾಜ್ಯಕ್ಕೆ ದ್ವಿತೀಯ ಬಂದಿದ್ದು,ಗೋಳಿ ಪ್ರೌಢ ಶಾಲೆಯ ತೃಪ್ತಿ ಗೌಡ ರಾಜ್ಯಕ್ಕೆ ಮೂರನೇ ರ್ಯಾಂಕ್ ಬರುವ ಮೂಲಕ ಶಿರಸಿ ಶೈಕ್ಷಣಿಕ ಜಿಲ್ಲೆಗೆ ಹೆಸರು ತಂದಿದ್ದಾರೆ.ರ್ಯಾಂಕ್ ಪಡೆದ ವಿದ್ಯಾರ್ಥಿಗಳ ಮನೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.

GILANI Enterprises karwar

625ಕ್ಕೆ 625 ಅಂಕ ಗಳಿಸುವ ಮೂಲಕ ಬಾಗಲಕೋಟೆಯ (Bgalkote) ಅಂಕಿತಾ ಬಸಪ್ಪ ಕೊಣ್ಣುರ್ (Ankita Basappa Konnur) ರಾಜ್ಯಕ್ಕೆ ಟಾಪರ್ ಆಗಿದ್ದಾರೆ.

Advertisement

ಅಂಕಿತಾ ಬಸಪ್ಪ ಮುಧೋಳ ತಾಲೂಕಿನ ಮೆಳ್ಳಿಗೇರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಇದೀಗ 625ಕ್ಕೆ 625 ಅಂಕಗಳನ್ನು ಪಡೆದ ಏಕೈಕ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಅಂಕಿತಾ ಪಾತ್ರರಾಗಿದ್ದಾರೆ. ಈ ಬಾರಿ ಒಟ್ಟು 73.40% ಫಲಿತಾಂಶ ಬಂದಿದ್ದು, ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಪರೀಕ್ಷೆಯಲ್ಲಿ ಒಟ್ಟು 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉಡುಪಿ 94% ಫಲಿತಾಂಶ ಪಡೆಯುವ ಮೂಲಕ ಮೊದಲ ಸ್ಥಾನ ಪಡೆದಿದ್ದು, 92% ಫಲಿತಾಂಶ ಪಡೆದು ದಕ್ಷಿಣ ಕನ್ನಡ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಮೂರನೇ ಸ್ಥಾನವನ್ನು ಶಿವಮೊಗ್ಗ ದಕ್ಕಿಸಿಕೊಂಡಿದ್ದು, ಯಾದಗಿರಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

ಪರೀಕ್ಷೆಯಲ್ಲಿ ಒಟ್ಟು 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರ ಪೈಕಿ ಬಾಲಕರು – 2,87,416 (65.90%) ಹಾಗೂ ಬಾಲಕಿಯರು – 3,43,788 (81.11%) ಪಾಸ್‌ ಆಗಿದ್ದಾರೆ.

2022-23ನೇ ಸಾಲಿನಲ್ಲಿ 83.89% ರಷ್ಟು ಫಲಿತಾಂಶ ದಾಖಲಾಗಿತ್ತು. ಆದರೆ ಈ ಬಾರಿ 73.40% ಫಲಿತಾಂಶ ಬಂದಿದೆ.

100% ಫಲಿತಾಂಶ ವಿವರ:-

ಸರ್ಕಾರಿ – 785
ಅನುದಾನ – 206
ಖಾಸಗಿ ಶಾಲೆ – 1297
ಒಟ್ಟು – 2288

ಶೂನ್ಯ ಸಾಧನೆ ಶಾಲೆಗಳು
ಸರ್ಕಾರಿ – 3
ಅನುದಾನ – 13
ಖಾಸಗಿ – 62
ಒಟ್ಟು – 78

1000594993
1000594994
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement