ಶಿರಸಿ ಮಾರಿಕಾಂಬಾ ದೇವಸ್ಥಾನ ಪ್ರವೇಶಿಸಲು ವಸ್ತ್ರ ಸಂಹಿತೆ ಜಾರಿಗೊಳಿಸಿ-ಹಿಂದೂ ಜನಜಾಗೃತಿ ವೇದಿಕೆ.

20

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಆವರಣದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡಿ ವಿವಾದವಾದ ಹಿನ್ನಲೆಯಲ್ಲಿ ಇದೀಗ ಶಿರಸಿ ಮಾರಿಕಾಂಬಾ ದೇಶವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಹಿಂದೂ ಜನ ಜಾಗೃತಿ ಸಮಿತಿಯಿಂದು ಆಡಳಿತ ಸಮಿತಿಗೆ ಮನವಿ ಮಾಡಿದ್ದಾರೆ.

ಹಿಂದೂ ಸಂಸ್ಕೃತಿ ಪ್ರಕಾರ ಉಡುಪು ಧರಿಸಿ ದೇವಸ್ಥಾನಕ್ಕೆ ಬರುವುದಕ್ಕೆ ಮಾತ್ರ ಅವಕಾಶ ನೀಡಬೇಕು ,ಅರೆಬರೆ ಬಟ್ಟೆ ಧರಿಸಿ ದೇವಸ್ಥಾನದ ಒಳಗೆ ಬರುವುದಕ್ಕೆ ಅವಕಾಶ ನೀಡಬಾರದು,ಅರೆಬರೆ ಬಟ್ಟೆ ಧರಿಸಿ ಬರುವುದರಿಂದ ದೇವಸ್ಥಾನ ಪಾವಿತ್ರತೆಗೆದಕ್ಕೆ ಬರುತ್ತದೆ ಈ ಕಾರಣದಿಂದ ವಸ್ತ್ರ ಸಂಹಿತೆ ಜಾರಿ ಮಾಡುವಂತೆ ಆಡಳಿತ ಮಂಡಳಿಗೆ ಹಿಂದೂ ಜನಜಾಗೃತಿ ಸಮಿತಿ ಒತ್ತಾಯ ಮಾಡಿದೆ.

ವಸ್ತ್ರ ಸಂಹಿತೆ ಜಾರಿ ಏಕೆ?

ಗೋಕರ್ಣ ದಲ್ಲಿ ದೇಶ ವಿದೇಶದ ಪ್ರವಾಸಿಗರು (Gokarna Mahabaleshwar Temple )ಹೆಚ್ಚು. ಹೀಗಾಗಿ ಪ್ರವಾಸದ ನೆಪದಲ್ಲಿ ಮೋಜು ಮಸ್ತಿಗೆ ಬಂದವರು ತುಂಡುಡುಗೆ ತೊಟ್ಟು
ಮಹಾಬಲೇಶ್ವರ ದೇವಸ್ಥಾನಕ್ಕೆ ಬರುತ್ತಾರೆ. ಇದರಿಂದ ಧಾರ್ಮಿಕ ನೆಲೆಗಟ್ಟಿನಲ್ಲಿ ಪೂಜೆಗೆ ಬರುವ ಭಕ್ತರಿಗೆ ತೊಂದರೆಯಾಗುತ್ತದೆ. ಹಾಗೆಯೇ ಶಿರಸಿಯ ಮಾರಿಕಾಂಬ ದೇವಸ್ಥಾನದಲ್ಲೂ ಇದೇ ಸಮಸ್ಯೆ ಎದುರಾಗುತಿದ್ದು ಈ ಹಿನ್ನಲೆಯಲ್ಲಿ ವಸ್ತ್ರ ಸಂಹಿತೆ ಜಾರಿಗೆ ಒತ್ತಾಯ ಕೇಳಿಬಂದಿದೆ.

ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಈಗ ಹೇಗಿದೆ? (ಶಿರಸಿ ಮಾರಿಕಾಂಬಾ ದೇವಸ್ಥಾನ)

ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿ ಜಾತಿ ,ಕುಲ ಎನ್ನದೆ ದೇವಸ್ಥಾನಕ್ಕೆ ಪ್ರವೇಶವನ್ನು ಆಡಳಿತ ಮಂಡಳಿ ಕಲ್ಪಿಸಿಕೊಟ್ಟಿದೆ. ಹೆಚ್ಚಾಗಿ ಭಕ್ತರು ಬಂದಾಗ ಪಂಚೆ,ಲುಂಗಿ,ಪ್ಯಾಂಟ್ ಧರಿಸಿ ಹೋಗುವ ಪುರುಷರಿಗೆ ಹಾಗೂ ಸೀರೆ,ಚೂಡಿದಾರ,ಪ್ಯಾಂಟ್ ಮಹಿಳೆಯರಿಗೆ ಜಾತಿ ಕೇಳಲು ದೇವರಿಗೆ ಅವಕಾಶ ಮಾಡಿಕೊಡಲಾಗುತಿತ್ತು.ಆದರೆ ದೇವಸ್ಥಾನದ ಗರ್ಭಗುಡಿಯೊಳಗೆ ಅರ್ಚಕರಿಗೆ ಯಾರಿಗೂ ಪ್ರವೇಶ ಇರುವುದಿಲ್ಲ.

ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಹೇಗಿದೆ.?

ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ದೇವಸ್ಥಾನದ ಒಳಗೆ ಪ್ರವೇಶಿಸಲು ಪುರುಷರು ಕಡ್ಡಾಯವಾಗಿ ಪಂಜೆ ,ಷಲ್ಯ ಧಾರಣೆಮಾಡಿರಬೇಕು. ಮಹಿಳೆಯರು ಸೀರೆ ಉಟ್ಟಿರಬೇಕು.ಹೀಗಿದ್ದರೆ ಮಾತ್ರ ದೇವಸ್ಥಾನದ ಒಳಗೆ ಪ್ರವೇಶವನ್ನು ನೀಡಲಾಗುತ್ತದೆ. ಜೊತೆಗೆ ದೇವರ ಆತ್ಮಲಿಂಗ ಸ್ಪರ್ಷಕ್ಕೆ ಭಕ್ತರಿಗೆ ಅವಕಾಶನೀಡಲಾಗಿದೆ.

ಆದರೇ ಈ ಹಿಂದೆ ಕುಮಟಾ ತಾಲೂಕಿನ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಒಳಗೆ ವಸ್ತ್ರ ಸಂಹಿತೆ ರಥ ಬೀದಿಗೂ ಆವರಿಸಿತ್ತು. ರಥ ಬೀದಿಯಲ್ಲಿ ಸಂಚರಿಸುವ ಜನರು ಅರೆಬರೆ ಬಟ್ಟೆ ಹಾಕಿ ಸಂಚರಿಸದಂತೆ ಆಡಳಿತ ಕಮಿಟಿ ನಿಷೇಧ ಹೇರಿತ್ತು. ಈ ಕುರಿತು ಜನರ ವಿರೋಧ ಬೆನ್ನಲ್ಲೇ ಜಿಲ್ಲಾಧಿಕಾರಿ ಸೂಚನೆ ಮೇಲೆ ರಸ್ತೆಗೆ ಹಾಕಿದ್ದ ನಾಮಫಲಕವನ್ನು ತೆಗೆದುಹಾಕಲಾಗಿದೆ.ನಂತರ ವಿವಾದ ತಣ್ಣಗಾಗುವ ಹೊತ್ತಲ್ಲೇ ಇದೀಗ ಹಿಂದೂ ಜನಜಾಗೃತಿ ವೇದಿಕೆ ಐತಿಹಾಸಿಕ ಹಿನ್ನಲೆಯಲ್ಲಿ ಇರುವ ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ವಸ್ತ್ರ ಸಂಹಿತೆ ಜಾರಿ ಮಾಡಲು ಮನವಿ ಸಲ್ಲಿಸಿದ್ದು ಆಡಳಿತ ಮಂಡಳಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಗಮನಿಸಬೇಕಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ.

error: Content is protected !!