ಕಾರವಾರ :- ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ (shivaram hebbar) ರಾಜೀನಾಮೆಗೆ ಹಲವು ನಾಯಕರು ಆಗ್ರಹಿಸಿದ ಬೆನ್ನಲ್ಲೇ ಇದೀಗ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ರವರು ಹೆಬ್ಬಾರ್ ಬಿಜೆಪಿಗೆ ರಾಜೀನಾಮೆ ಕೊಟ್ಟು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ:-ಎರಡು ವರ್ಷದ ನಂತರ ಬಾಗಿಲು ತೆರದೆ ಉತ್ತರ ಕನ್ನಡ ಸಂಸದರ ಕಚೇರಿ!
ಹೆಬ್ಬಾರ್ ವಿಚಾರವಾಗಿ ಕಾರವಾರದಲ್ಲಿ (Karwar) ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಬ್ಬಾರ್ ರಾಜ್ಯಸಭಾ ಚುನಾವಣೆಯಲ್ಲಿ ಮತ ಹಾಕಿಲ್ಲ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿಲ್ಲ,
ಬಿಜೆಪಿಯ ತತ್ವ ಸಿದ್ಧಾಂತಗಳು ಹೆಬ್ಬಾರ್ಗೆ ಒಪ್ಪಿಯಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಇದನ್ನೂ ಓದಿ:-ಉತ್ತರ ಕನ್ನಡ| ಕಾಗೇರಿ ಗೆಲುವು ? ಒಟ್ಟು ಮತ ಎಷ್ಟು?
ಅವರು ಪಕ್ಷಕ್ಕೆ ರಾಜೀನಾಮೆ ನೀಡಿ ಚುನಾವಣೆ ಎದುರಿಸಲಿ, ಬಿಜೆಪಿ ಸಿದ್ಧವಾಗಿದೆ. ಪ್ರಜಾಪ್ರಭುತ್ವದ ಸಂಸದೀಯ ವ್ಯವಸ್ಥೆಗೆ ಆಯ್ಕೆಯಾದ ಜನಪ್ರತಿನಿಧಿ ಪಕ್ಷಕ್ಕೆ ನಿಷ್ಠನಾಗಿರಬೇಕು.
ಆಯ್ಕೆಯಾದ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕಾದದ್ದು ಅವರ ಕರ್ತವ್ಯ,ಆ ಚೌಕಟ್ಟಿನಲ್ಲಿ ಇರಲು ಸಾಧ್ಯವಿಲ್ಲವಾದರೆ ರಾಜೀನಾಮೆಯೊಂದೇ ಪರಿಹಾರ.
ರಾಜೀನಾಮೆ ನೀಡಿ ಮತ್ತೊಮ್ಮೆ ಜನರ ತೀರ್ಪು ಕೇಳಲಿ, ಪ್ರಜಾಪ್ರಭುತ್ವದಲ್ಲಿ ಜನರ ತೀರ್ಮಾನವನ್ನ ಎಲ್ಲರೂ ಒಪ್ಪಿಕೊಳ್ಳಬೇಕು, ನಾವೂ ಸಿದ್ಧರಿದ್ದೇವೆ
ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.






