office of Uttara Kannada district MP, which had been closed for two years, has reopened

ಎರಡು ವರ್ಷದ ನಂತರ ಬಾಗಿಲು ತೆರದೆ ಉತ್ತರ ಕನ್ನಡ ಸಂಸದರ ಕಚೇರಿ!

164

ಕಾರವಾರ:- ಸಿಬ್ಬಂದಿ ಇಲ್ಲದೇ, ಸಂಸದರೇ ಬಾರದೇ ಕಳೆದ ಎರಡು ವರ್ಷದಿಂದ ಬಾಗಿಲು ಹಾಕಿದ್ದ ಕಾರವಾರದ ಜಿಲ್ಲಾಧಿಕಾರಿ (DC office) ಕಚೇರಿಯಲ್ಲಿದ್ದ ಸಂಸದರ ಕಚೇರಿ (MP office) ಇದೀಗ ಕಚೇರಿಯಲ್ಲಿ ತುಂಬಿದ್ದ ದೂಳು ಶುದ್ಧವಾಗಿ ಬಾಗಿಲು ತೆರದಿದೆ.

ಈ ಹಿಂದೆ ಸಂಸದರಾಗಿದ್ದ ಅನಂತಕುಮಾರ್ ಹೆಗಡೆ ದಿಶಾ ಸಭೆಗೆ ಮಾತ್ರ ಆಗಮಿಸಿ ಅಲ್ಲಿಂದ ತೆರಳುತಿದ್ದರು. ಸರ್ಕಾರದಿಂದ ನೀಡಿದ್ದ ಕಚೇರಿಗೆ ಬಂದು ಕುಳಿತು ಸಮಸ್ಯೆ ಆಲಿಸುವುದು ಬಲು ಅಪರೂಪವೇ ಆಗಿತ್ತು. ಇದಲ್ಲದೇ ಸಿಬ್ಬಂದಿಗಳೇ ಇಲ್ಲದೇ ಕಚೇರಿ ಸಹ ಬಾಗಿಲು ಮುಚ್ಚಿತ್ತು. ಇದರಿಂದಾಗಿ ದೂರದಿಂದ ಸಮಸ್ಯೆ ಹೇಳಿ ಬರುವವರು ಮುಚ್ಚಿದ ಬಾಗಿಲು ನೋಡಿ ಹೋಗಬೇಕಿತ್ತು.

ಇದೀಗ ಮೊದಲಬಾರಿ ಸಂಸದರಾಗಿ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಇಂದು ತಮ್ಮ ಕಚೇರಿಗೆ ಔಪಚಾರಿಕ ಭೇಟಿ ನೀಡಿದ್ದು ಕಚೇರಿ ಬಾಗಿಲು ತೆಗೆಯುವಂತಾಗಿದೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಅವರು ಸಂಸದನಾಗಿ ಅಧಿಕೃತವಾಗಿ ಪ್ರಮಾಣವಚನ ಪಡೆದ ನಂತರ ಕಚೇರಿ ಸಾರ್ವಜನಿಕರಿಗೆ ತೆರೆಯುತ್ತದೆ. ಅಹವಾಲು ಸ್ವೀಕಾರಕ್ಕೆ ಆಪ್ತ ಕಾರ್ಯದರ್ಶಿಯನ್ನು ನೇಮಕ ಮಾಡಲಾಗುತ್ತದೆ. ಪ್ರತಿ ದಿನ ಎಂದಿನಂತೆ ಕಚೇರಿ ತೆರೆಯಲಿದೆ.ಹಾಗೂ ನಾನು ಕೂಡ ಕಚೇರಿಯಲ್ಲಿ ಸಿಗುತ್ತೇನೆ.

ಜಿಲ್ಲೆಯ ಸಮಸ್ಯೆ ಬಗ್ಗೆ ನನಗೆ ಅರಿವಿದೆ. ಸೀಬರ್ಡ ಸಮಸ್ಯೆ, ಹೆದ್ದಾರಿ ಅಗಲೀಕರಣ ಸಮಸ್ಯೆ, ಬಂದರು ಸಮಸ್ಯೆ ,ರೈಲ್ವೆ ಯೋಜನೆ ಅನುಷ್ಟಾನದಂತ ಸಮಸ್ಯೆಗಳು ಜಿಲ್ಲೆಯಲ್ಲಿದೆ. ಇವುಗಳ ಬಗ್ಗೆ ಮೊದಲ ಆಧ್ಯತೆ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಇದಲ್ಲದೇ ದೊಡ್ಡ ಜಿಲ್ಲೆಯಾದ್ದರಿಂದ ಜಿಲ್ಲೆಯ ಜನರಿಗಾಗಿ ಸಂಚಾರಿ ಕಚೇರಿಯನ್ನು ಸಹ ತೆರೆಯಲು ಬೇಕಾದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆಶ್ವಾಸನೆ ನೀಡಿದ್ದು,ಇನ್ನಾದರೂ ಜಿಲ್ಲಾ ಕೇಂದ್ರಕ್ಕೆ ಮನವಿ ಹಿಡಿದುಕೊಂಡು ಬರುವ ಜನರಿಗೆ ಸಂಸದರ ಕಚೇರಿ ಸ್ವಾಗತಿಸಲಿದೆಯಾ ಎಂದು ಕಾದು ನೋಡಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!