UttaraKannada| ಶಿರೂರು ರಸ್ತೆ ಸಂಚಾರಕ್ಕೆ ಮುಕ್ತ ಆದರೇ..!

Landslide News:- ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರಿನಲ್ಲಿ ದೊಡ್ಡ ಪ್ರಮಾಣದ ಭೂ ಕುಸಿತವಾಗಿ (Landslide) ಏಳು ಜನರನ್ನು ಬಲಿಪಡೆದಿದ್ದು ಮತ್ತಷ್ಟು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಗಳಿವೆ. ಕಳೆದ ನಾಲ್ಕು ದಿನದಿಂದ ನಿರಂತರವಾಗಿ ಕುಸಿದ ಮಣ್ಣನ್ನು ತೆರವು ಮಾಡಲಾಗುತಿದ್ದು ,ಇಂದು ಒಂದುಭಾಗದ ರಸ್ತೆಯ ಸಂಪೂರ್ಣ ಮಣ್ಣನ್ನು ತೆರವು ಮಾಡಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾರವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು ಎರಡು ಭಾಗದ ಹೆದ್ದಾರಿಯಲ್ಲಿ ಒಂದು ಭಾಗದ ಹೆದ್ದಾರಿಯ ಮಣ್ಣನ್ನು ಸಂಪೂರ್ಣ ತೆಗೆಯಲಾಗಿದೆ,ವಾಹನ ಸಂಚಾರ ಮಾಡಬಹುದಾಗಿದೆ. ಆದರೇ ಮತ್ತಷ್ಟು ಗುಡ್ಡ ಕುಸಿಯುವ ಆತಂಕವಿದ್ದು ,ಇನ್ನೊಂದುಭಾಗದ ಹೆದ್ದಾರಿಯ ಮಣ್ಣನ್ನು ತೆಗೆಯಬೇಕಿದೆ. ಈ ಕಾರಣ ತಾತ್ಕಾಲಿಕವಾಗಿ ಹೆದ್ದಾರಿಯಲ್ಲಿ ಸಂಚಾರಕ್ಕೆ ನಿಷೇಧ ಹೇರಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement