Bhatkal| ಚಿನ್ನದ ವ್ಯಾಪಾರಿ ಖಾತೆಗೆ ಪೊಲೀಸರ ದಂಡದ ಹಣ SP ಸ್ಪಷ್ಟಣೆ ಹಿಂದೆ ಮತ್ತೆ ಎದ್ದ ಪ್ರಶ್ನೆ!

Uttara Kannada superinte of police Uttara Kannada superinte of police

Bhatkal News:- ಕನ್ನಡವಾಣಿ.ನ್ಯೂಸ್ ನಲ್ಲಿ ಶನಿವಾರ ಭಟ್ಕಳ PSI ಯಲ್ಲಪ್ಪ ರವರು ದಂಡದ ಮೊತ್ತವನ್ನ QR code ಬಳಸಿ ಅಥವಾ ನಗದು ರೂಪದಲ್ಲಿ ಹಣ ಪಡೆಯಬೇಕಿತ್ತು.ಆದರೇ ದಂಡದ ಹಣವನ್ನು ಚಿನ್ನದ ವ್ಯಾಪಾರಿಯ ಖಾತೆಗೆ ಹಣ ಹಾಕುವಂತೆ ಹೇಳಿ ಹಾಕಿಸಿಕೊಂಡಿದ್ದರು. ಈ ಕುರಿತು ಕನ್ನಡವಾಣಿ ಯಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ್ ರವರು ಸ್ಪಷ್ಟೀಕರಣ ನೀಡಿದ್ದಾರೆ.
ಈ ಸ್ಪಷ್ಟೀಕರಣದಲ್ಲಿ ದಂಡ ವಿಧಿಸಿದ ಉದಯ್ ನಾಯ್ಕ ರವರ ಬಳಿ ನಗದು ಇರದೇ ಇರುವ ಕಾರಣ ಅಲ್ಲಿಗೆ ಆಗಮಿಸಿದ ಚಿನ್ನದ ವ್ಯಾಪಾರಿ ವಿನಾಯಕ್ ಮಾರುತಿ ಶೇಟ್ ಇಬ್ಬರು ಪರಿಚಿತರಿದ್ದರಿಂದ ಅವರ ಖಾತೆಗೆ ಹಣ ವರ್ಗಾಯಿಸಿ ವಿನಾಯಕ ಮಾರುತಿ ಶೇಟ್ ರವರು PSI ಗೆ ಹಣ ನೀಡಿದರು ಎಂದು ಉಲ್ಲೇಖಿಸಲಾಗಿದೆ.

Advertisement

1001239191

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರೇ ಸ್ಪಷ್ಟಣೆ ನೀಡಿದಾಗ ಸತ್ಯ ಹೊರಹಾಕಬೇಕಾದ್ದು ನಮ್ಮ ಕರ್ತವ್ಯ . ಹೀಗಾಗಿ ಈ ಕುರಿತು ಕನ್ನಡವಾಣಿ ಆದ ಘಟನೆ ಬಗ್ಗೆ ಇಲ್ಲಿ ಸ್ಪಷ್ಟೀಕರಣ ನೀಡುತ್ತಿದೆ.

PSI ಯಲ್ಲಪ್ಪನವರು ಶಹರ ಠಾಣೆ ಬಳಿಯೇ ಸಂಚಾರ ಉಲ್ಲಂಘನೆ ಮಾಡುತಿದ್ದ ವಾಹನಗಳನ್ನು ತಡೆದು ದಂಡ ವಿಧಿಸುತಿದ್ದರು. ನಮ್ಮ ವರದಿಯಲ್ಲಿ ಉಲ್ಲೇಖಿಸಿದಂತೆ ಚಿನ್ನದ ವ್ಯಾಪಾರಿ ವಿನಾಯಕ್ ಮಾರುತಿ ಶೇಟ್ ಸ್ಥಳಕ್ಕೆ ಬರಲೇ ಇಲ್ಲ .PSI ರವರೇ ವ್ಯಾಪಾರಿಯ ನಂಬರ್ ಗೆ ಹಣ ಹಾಕಲು ಸೂಚಿಸಿದ್ದರು. PSI ರವರಿಗೆ ಕೊಟ್ಟ ಬಾಡಿ ಕ್ಯಾಮರಾ ಪಕ್ಕದಲ್ಲಿದ್ದ ವಾಹನದ ಮೇಲೆ ಇಡಲಾಗಿತ್ತು. ಠಾಣೆಯ ಬಳಿಯೇ ಘಟನೆ ಆದ್ದರಿಂದ ಸಿ.ಸಿ ಕ್ಯಾಮರಾವನ್ನು ಇಲಾಖೆ ಪರಿಶೀಲಿಸಿದರೇ ಘಟನೆ ಏನು ಎಂಬುದು ತಿಳಿಯುತ್ತದೆ.

ಇನ್ನು ಈರೀತಿಯ ಘಟನೆಗಳಲ್ಲಿ ಬಾಡಿ ಕ್ಯಾಮರಾ ಹಾಕಿಕೊಳ್ಳುವುದು ಕರ್ತವ್ಯ. ಯಾಕೆಂದರೇ ಯಾರು ಏನುಬೇಕಾದ್ರು ಆಸಂದರ್ಭದಲ್ಲಿ ಹೇಳಬಹುದು ಅಥವಾ ಕೋರ್ಟ್ ಗೆ ಹೋಗಬಹುದು.ಪರಾವೆಗಾಗಿ ಇದು ಕಡ್ಡಾಯ. ಆದರೇ ಬಾಡಿ ಕ್ಯಾಮರಾ ಯಾಕೆ ಹಾಕಿಕೊಳ್ಳಲಿಲ್ಲ ಎಂಬ ಪ್ರಶ್ನೆ ಏಳುತ್ತದೆ.

ಇನ್ನು ಕೇವಲ ಒಬ್ಬರ ವಿಷಯದಲ್ಲಾದರೇ ಹೌದು ಎನ್ನಬಹುದು ಇತರ ವಾಹನ ಸವಾರರಿಗೂ ಆತನ ನಂಬರ್ ನೀಡಿ ಹಣ ಹಾಕಿಸಲಾಗಿದೆ.ಕೆಲವರಿಗೆ ದಂಡದ ರಶೀದಿ ನೀಡಿದ್ರೆ ,ಕೆಲವರಿಗೆ ನೀಡಿಲ್ಲ.
ಇನ್ನು ಚಿನ್ನದ ವ್ಯಾಪಾರಿ ಸ್ಥಳದಲ್ಲೇ ಇದ್ದ ಎಂದು ಎಸ್.ಪಿ ರವರು ಹೇಳುತ್ತಾರೆ. ಆತನ ಮೊಬೈಲ್ ಸಿಗ್ನಲ್ ಟ್ರಾಕ್ ಮಾಡಿದರೇ ಆತ ಮನೆಯಲ್ಲಿದ್ದನೋ? ದೇವಸ್ಥಾನದಲ್ಲಿ ಇದ್ದನೋ ಎಂಬುದು ಗೊತ್ತಾಗುತ್ತದೆ. ಇನ್ನು ಆತನ ಖಾತೆಯ ವಿವರ ಪಡೆದರೇ ಎಷ್ಟು ಜನ ಆತನ ನಂಬರ್ ಗೆ ಹಣ ಹಾಕಿದ್ದಾರೆ ಎನ್ನುವುದು ತಿಳಿಯುತ್ತದೆ.

ಇನ್ನು ಇಲಾಖೆ ನೀಡಿದ QR Code ಹಾಳಾಗಿದ್ದರೇ ನಗದು ಪಡೆಯಬಹುದು ಅದು ಸಹ ಆಗಿಲ್ಲ. ದಂಡ ವಿಧಿಸಿರುವ ಬಗ್ಗೆ ನಾವು ಪ್ರಶ್ನೆ ಮಾಡುವುದಿಲ್ಲ. ಆದರೇ ದಂಡದ ಹಣ ಸರ್ಕಾರದ ಖಜಾನೆ ಸೇರಬೇಕು ಎಂಬುದರ ಜೊತೆಗೆ ಇಲಾಖೆ ಸ್ಪಚ್ಛವಾಗಿರಲಿ ಎಂದು ಎಚ್ಚರಿಸುವುದಷ್ಟೇ ನಮ್ಮ ಕೆಲಸ. ಮುಂದಿನ ತನಿಖೆಯಲ್ಲಾದರೂ ಸತ್ಯ ಹೊರಬರಲಿ ತಪ್ಪು ಮಾಡಿದವರು ತಿದ್ದಿಕೊಳ್ಳಲಿ ಎಂಬುದೇ ನಮ್ಮ ಆಶಯ.

-ಟೀಮ್ ಕನ್ನಡವಾಣಿ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement