Bhatkal News:- ಹೆಲ್ಕೆಟ್ ರಹಿತ ದಂಡದ ಮೊತ್ತ ಪೊಲೀಸ್ ಇಲಾಖೆಯ ಖಾತೆಯ ಬದಲು ಚಿನ್ನದ ವ್ಯಾಪಾರಿಯ ( gold Merchant) ಖಾತೆಗೆ (Bank Acount)ವರ್ಗಾವಣೆಯಾಗುತ್ತಿರುವ ಅಂಶ ಪತ್ರಕರ್ತರ reality check ಮೂಲಕ ಬೆಳಕಿಗೆ ಬಂದಿದೆ.
ಭಟ್ಕಳ ವರದಿಗಾರರು ನಡೆಸಿದ ‘ ‘ರಿಯಾಲಿಟಿ ಚೆಕ್ ಕಾರ್ಯಾಚರಣೆಯಲ್ಲಿ ಇಂಥದ್ದೊಂದು ಘಟನೆ ಇದೀಗ ಬೆಳಕಿಗೆ ಬಂದಿದೆ.
ಈ ಬಗ್ಗೆ ರಿಯಾಲಿಟಿ ಚೆಕ್ ಮಾಡಲು ಭಟ್ಕಳದ ಮೂರು ಜನ ವರದಿಗಾರರು ಹೆಲ್ಮೆಟ್ ಧರಿಸದೇ
ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಇಲ್ಲಿನ ನಗರ ಠಾಣೆಯ ರಸ್ತೆಯ ಎದುರಿನಲ್ಲಿ ತೆರಳುತ್ತಿದ್ದ ವೇಳೆ ಇಬ್ಬರು ಪೋಲೀಸ್ ಸಿಬ್ಬಂದಿಗಳು ದ್ವಿಚಕ್ರ ವಾಹನ ನಿಲ್ಲಿಸುವಂತೆ ರಿಯಾಲಿಟಿ ಚೆಕ್ ಮಾಡುತ್ತಿದ್ದ.
ಒಬ್ಬ ವರದಿಗಾರನ್ನು ಪಿಎಸೈ ಯಲ್ಲಪ್ಪ ಅವರ ಬಳಿ ತೆರಳುವಂತೆ ಹೇಳಿದ್ದು ನಗರ ಠಾಣೆ ಆವರಣದಲ್ಲಿ ನಿಂತಿದ್ದ ಪಿಎಸ್ಐ ಯಲ್ಲಪ್ಪ ಅವರ ಬಳಿ ಹೋದಾಗ ದಂಡ 500 ರೂ ಕಟ್ಟುವಂತೆ ಸೂಚಿಸಿದರು. ಆದರೆ ನಗದು ಹಣದ ಬದಲಿಗೆ ಆನ್ ಲೈನ್ ಸ್ಕ್ಯಾನರ್ ಮೂಲಕ ಹಣವನ್ನು ಪಾವತಿಸುವುದಾಗಿ ಅವರಲ್ಲಿ ತಿಳಿಸಿದ್ದಾರೆ.
ಮೊಬೈಲ್ ಸಂಖ್ಯೆಗೆ ಹಣ ವರ್ಗಾವಣೆ :
ಅದೇ ರೀತಿ ವರದಿಗಾರರ ಮುಂದೆಯೇ ನಾಲ್ಕೈದು ಮಂದಿ ವಾಹನ ಸವಾರರಿಗೆ ಅದೇ ನಂಬರಗೆ ಹಣ ವರ್ಗಾಯಿಸಲು ಸೂಚಿಸಿದರು. ಅಲ್ಲಿದ್ದವರೆಲ್ಲ ಅದೇ ನಂಬರಿಗೆ ದಂಡದ ಹಣವನ್ನು ವರ್ಗಾಯಿಸಿದ್ದಾರೆ.
Reality check -ಚಿನ್ನದ ವ್ಯಾಪಾರಿಯ ಖಾತೆಗೆ ಹಣ
ಹಣ ವರ್ಗಾಯಿಸುವಾಗ ಖಾತೆದಾರರ ಹೆಸರಿನಲ್ಲಿ ಭಟ್ಕಳದ ಚಿರಪರಿಚಿತ ಚಿನ್ನದ ವ್ಯಾಪಾರಿಯ ಹೆಸರಿಗೆ ತೋರಿಸಿದೆ. ದಂಡದ ಹಣವನ್ನು ಸರ್ಕಾರ ದಿಂದ ನೀಡಿದ QR Code ನಲ್ಲಿ ಹಾಕಿಸಬೇಕು ಇಲ್ಲವೇ ಕಾರ್ಡ ಬಳಸಿ ಪಡೆಯಬೇಕು ಅದೂ ಸಾಧ್ಯವಾಗದಿದ್ದರೇ ನಗದು ರೂಪದಲ್ಲಿ ಹಣ ಪಡೆದು ರಶೀದಿ ನೀಡಬೇಕು.ಬೇರೆಯವರ ಖಾತೆಗೆ ಹಣ ವರ್ಗಾಯಿಸುವಂತಿಲ್ಲ ಹೀಗಿದ್ದರೂ ಭಟ್ಕಳದ PSI ದಂಡದ ಹಣ ಬೇರೆಯವರ ಖಾತೆಗೆ ವರ್ಗಾಯಿಸಿ ರಶೀದಿ ನೀಡಿದ್ದಾರೆ.
ಹೀಗಾಗಿ ಈ ಹಣ ಸರ್ಕಾರದ ಖಾತೆಗೆ ಹೋಗುತ್ತದೆಯೋ ಅಥವಾ ಯಾರ ಜೇಬಿಗೆ ಸೇರುತ್ತದೆಯೋ ಎಂಬ ಪ್ರಶ್ನೆ ಎದ್ದಿದೆ. ಇದಲ್ಲದೇ ರಶೀದಿ ನೀಡಿರುವುದು ಸಹ ಸಾಕಷ್ಟು ಪ್ರಶ್ನೆ ಏಳುವಂತೆ ಮಾಡಿದೆ.
ಈ ಬಗ್ಗೆ ರಿಯಾಲಿಟಿ ಚಕ್ ಗೆ ಹೋಗಿದ್ದ ಪತ್ರಕರ್ತರು ಸ್ವತಃ PSI ಯಲ್ಲಪ್ಪ ಅವರ ಗಮನಕ್ಕೆ ತಂದಾಗ, ಹಾರಿಕೆಯ ಉತ್ತರ ನೀಡಿ ಸಮಜಾಯಿಷಿ ನೀಡಲು ಮುಂದಾದರು. ಮಾಧ್ಯಮದವರೆಂದು ಮೊದಲೇ ಹೇಳಿದ್ದರೆ ನಿಮ್ಮನ್ನು ಬಿಡುತ್ತಿದ್ದೇವು ಎಂದು ಹೇಳಿದ್ದಾರೆ! ಹಾಗಿದ್ದರೇ ಮಾಧ್ಯಮಗಳಿಗೆ ಒಂದು ಕಾನೂನು ಜನಸಾಮಾನ್ಯರಿಗೆ ಒಂದು ಕಾನೂನು ಇದೆಯಾ ಅಥವಾ ಬೀಸೋ ದೊಣ್ಣೆ ತಪ್ಪಿಸಿಕೊಳ್ಳುವುದೇ? ಏನಾದರೂ ಆಗಲಿ ಚಿನ್ನದ ಅಂಗಡಿಯ ಮಾಲೀಕನಿಗೆ ಹಣ ವರ್ಗಾವಣೆ ಮಾಡಲು ಪಿ.ಎಸ್.ಐ ಯಲ್ಲಪ್ಪ ಯಾಕೆ ಹೇಳಿದರು? ಚಿನ್ನದ ಅಂಗಡಿ ಮಾಲೀಕನಿಗೂ ಪಿ.ಎಸ್.ಐ ಯಲ್ಲಪ್ಪಗೂ ಏನು ಸಂಬಂಧ? ಒಂದುವೇಳೆ QR code ಸಮಸ್ಯೆ ಇದ್ದರೇ ಹಣ ಪಡೆದು ರಶೀದಿ ನೀಡಬಹುದು. ಇಲ್ಲವೇ ಕೋರ್ಟ ನಲ್ಲಿ ಕಟ್ಟಲು ಸಹ ಅವಕಾಶಗಳಿವೆ. ಇನ್ನು ಈ ರಶೀದಿಯೇ ಸುಳ್ಳಾ ಎಂಬ ಪ್ರಶ್ನೆ ಏಳುತ್ತದೆ. ಏನೇ ಆದರೂ ಈ ಘಟನೆ ಬಗ್ಗೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮಾಹಿತಿ ಪಡೆದು ವಿಷಯ ಬಹಿರಂಗ ಮಾಡಬೇಕಿದೆ.
ರಸೀದಿಯಲ್ಲಿ ನಗದು ಪಾವತಿ !
ಪೋಲಿಸರು ಹೆಲ್ಮೆಟ್ ಧರಿಸದೇ ಇದ್ದ ಹಿನ್ನೆಲೆ ದಂಡ ಹಾಕಿದ ರಸೀದಿಯಲ್ಲಿ ನಗದು ಎಂದು ನಮೂದಿಸಿದ್ದಾರೆ. ಆದ್ರೆ ಭಟ್ಕಳ ವರಗಾರರಿಂದ ದಂಡದ ಹಣವನ್ನು ಸ್ವೀಕರಿಸಿದ್ದು ಆನ್ ಲೈನ್ ಮೂಲಕ. ಇದರಲ್ಲೇನೋ ಮೋಸದಾಟವಿದೆಯೇ? ತನಿಖೆಯಿಂದಲೇ ಗೊತ್ತಾಗಬೇಕಿದೆ.






