Darwad | ಫಲಿಸದ ಪೊಲೀಸ್ ಆಗುವ ಕನಸು ಪದವಿದರೆ ಆತ್ಮಹತ್ಯೆ.
ವರದಿ- ಸಂಜಯ್ .
Darwad news (17december 2025):-ಬಿ.ಕಾಂ ಓದಿದ್ದ 25 ವರ್ಷದ ಯುವತಿ ತಾನು ಪೊಲೀಸ್ ಆಗಬೇಕು ಎಂಬ ಕನಸು ಹೊತ್ತು ಕಳೆದ ನಾಲ್ಕು ವರ್ಷದಿಂದ ನಿರಂತರ ಶ್ರಮ ಪಟ್ಟರೂ ಪೊಲೀಸ್ ಆಗುವ ಕನಸು ಈಡೇರದಿದ್ದಾಗ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಇಂದು ಆಕೆಯ ಶವ ಧಾರವಾಡದ (Darwad)ರೈಲ್ವೆ ನಿಲ್ದಾಣದ ಹಳಿಯ ಮೇಲೆ ಪತ್ತೆಯಾಗಿದೆ.
Karwar|ಸರ್ಕಾರ ಖಜಾನೆ ಖಾಲಿ ಅಂತೆ! ಕಾರವಾರದಲ್ಲಿ PWD ಹೆಸರಲ್ಲಿ ಭಿಕ್ಷೆ ಬೇಡಿದ ಆಟೋ ಚಾಲಕರು
ಹೌದು ಬಳ್ಳಾರಿ ಜಿಲ್ಲೆಯ ಕಗ್ಗಲ್ ಗ್ರಾಮದ ಪಲ್ಲವಿ ಕಗ್ಗಲ್ ಸಾವು ಕಂಡ ಯುವತಿಯಾಗಿದ್ದಾಳೆ.
ಬಿಕಾಂ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಓದಲು ಧಾರವಾಡಕ್ಕೆ ಬಂದಿದ್ದ ಯುವತಿ 2021 ರಲ್ಲಿ ಧಾರವಾಡದಲ್ಲಿ ಓದುತ್ತಿದ್ದರು.
Kumta| ನಿಯಮ ಮೀರಿ ಸಾಲ ವಸೂಲಿಗೆ ಇಳಿದ ಬ್ಯಾಂಕ್ ಗೆ ಪಾಠ ಕಲಿಸಿದ ಖ್ಯಾತ ವಕೀಲ ಪ್ರಶಾಂತ್ ನಾಯ್ಕ ಬೆಟಕುಳಿ.
2024 ರ ಪೊಲೀಸ್ ಪೇದೆಗೆ ದೈಹಿಕ ಪರೀಕ್ಷೆಯಲ್ಲಿ ಪಾಸಾಗಿದ್ದ ಈಕೆ ಲಿಖಿತ ಪರೀಕ್ಷೆಯಲ್ಲಿ ಪಾಸಾಗಿರಲಿಲ್ಲ.ಮತ್ತೆ ನೇಮಕಾತಿ ಪರೀಕ್ಷೆಗೆ ಸಜ್ಜಾಗುತ್ತಿದ್ದ ಈಕೆ
ಕಳೆದ ನಾಲ್ಕು ವರ್ಷಗಳಿಂದ ಪೊಲೀಸ್ ಇಲಾಖೆಯ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ಓದುತ್ತಿದ್ದರು.
NAREGA| ಕೂಲಿ ಕೆಲಸದ ಹಣದಲ್ಲಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗೆ 7 ಚಿನ್ನದ ಪದಕ
ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯ ವ್ಯಕ್ತಪಡಿಸಲಾಗಿದ್ದು , ನಗರದ ಶಿವಗಿರಿ ರೈಲ್ವೆ ಹಳಿಯ ಬಳಿ ಈಕೆಯ ಶವ ದೊರೆತಿದೆ.ಘಟನೆ ಸಂಬಂಧ ರೈಲ್ವೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಶವವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.







