Karwar|ರಸ್ತೆ ಸರಿಪಡಿಸಲು ಚೊಂಬು ಹಿಡಿದು ಭಿಕ್ಷೆ ಬೇಡಿ PWD ಇಲಾಖೆಗೆ ಕೊಟ್ಟ ಆಟೋ ಚಾಲಕರು.
Karwar news (16 december 2025 ):-ಹೊಂಡ ಗುಂಡಿ ತುಂಬಿದ ರಸ್ತೆ. ವಾಹನಗಳು ಸಂಚಾರ ಮಾಡುವುದೇ ಕಷ್ಟ. ಹೀಗಾಗಿ ರಸ್ತೆ ಸರಿಪಡಿಸಿ ಎಂದರೇ ಸರ್ಕಾರ ಖಜಾನೆ ಕಾಲಿ ಎಂದು ಉತ್ತರ ನೀಡುತಿದ್ದ PWD ಇಲಾಖೆ ಅಧಿಕಾರಿಗಳಿಗೆ ಕಾರವಾರದ (karwar)ಆಟೋ ಚಾಲಕರು PWD ಹೆಸರಿನಲ್ಲಿ ಚಂಬು ಹಿಡಿದು ಮಡಿ ಉಟ್ಟು ರಸ್ತೆಯಲ್ಲಿ ಭಿಕ್ಷೆ ಬೇಡಿ ಆ ಹಣವನ್ನು pwd ಇಲಾಖೆಗೆ ನೀಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದಾರೆ.

ಕಾರವಾರ ನಗರದಿಂದ ಹಬ್ಬುವಾಡ ಮೂಲಕ ರೈಲ್ವೆ ನಿಲ್ದಾಣದ ಮೂಲಕ ಬೆಳಗಾವಿಯ ವರೆಗೂ ಸಂಪರ್ಕಿಸುವ ರಾಜ್ಯ ಹೆದ್ದಾರಿ ಹದಗೆಟ್ಟು ಹೋಗಿದೆ.
Karwar | ಕಾರವಾರದ ತಹಶೀಲ್ದಾರ್ ಕಚೇರಿಗೂ ಬಂತು ಇ-ಮೇಲ್ ಬಾಂಬ್ ಬೆದರಿಗೆ
ಕಾರವಾರ (karwar )ನಗರದಿಂದ ರೈಲ್ವೆ ನಿಲ್ದಾಣದ ವರೆಗೂ ಹೊಂಡ ಗಳೇ ರಾಜ್ಯಭಾರ ಮಾಡುತಿದ್ದು ಕೆಲವು ತಿಂಗಳ ಹಿಂದೆ ಅಪಘಾತದಲ್ಲಿ ಸಾವು ಸಹ ಸಂಭವಿಸಿತ್ತು. ಇನ್ನು ಚಿಕ್ಕ ಪುಟ್ಟ ಅಪಘಾತಗಳಿಗೆ ಕಡಿಮೆ ಇಲ್ಲ.
ಹೀಗಾಗಿ ಸ್ಥಳೀಯ ಆಟೋ ಚಾಲಕರ ಸಂಘ ರಸ್ತೆ ಸರಿಪಡಿಸುವಂತೆ ಹಲವು ಬಾರಿ ಪ್ರತಿಭಟನೆ ಮಾಡಿತ್ತು.
ಆದರೇ pwd ಇಲಾಖೆ ಮಾತ್ರ ಅನುದಾನದ ಕೊರತೆ ನೆಪವೊಡ್ಡಿ ಹೊಂಡ ಮುಚ್ಚುವ ಕಾರ್ಯ ಸಹ ಮಾಡದೇ ನಿರ್ಲಕ್ಷ ಮಾಡಿತ್ತು.

ಹೀಗಾಗಿ ಇಂದು ಕಾರವಾರ ನಗರದ ಆಟೋ ಚಾಲಕರ ಸಂಘ ಸಾಮಾಜಿಕ ಹೋರಾಟಗಾರ ರಾಘುನಾಯ್ಕ ರವರ ನೇತ್ರತ್ವದಲ್ಲಿ PWD ಇಲಾಖೆ ಹೆಸರಲ್ಲಿ ನಗರದ ಹಬ್ಬುವಾಡ ರಸ್ತೆಯಲ್ಲಿ ಜನರಿಂದ ಭಿಕ್ಷೆ ಬೇಡಿ ರಸ್ತೆ ಸರಿಪಡಿಸಲು ಹಣ ಸಂಗ್ರಹಿಸಲಾಯಿತು.
ಈ ಹಣವನ್ನು ಪಿ.ಡಬ್ಲು ಇಲಾಖೆ ಕಚೇರಿಗೆ ನೀಡುವ ಮೂಲಕ ರಸ್ತೆ ಸರಿಪಡಿಸುವಂತೆ ಆಗ್ರಹಿಸಲಾಯಿತು.
ಇನ್ನು ಭಿಕ್ಷೆ ಹಣವನ್ನು PWD ಇಲಾಖೆಯವರು ಸ್ವೀಕರಿಸಿದ್ದು ,ಈ ಹಣದಲ್ಲಿಯಾದರೂ ರಸ್ತೆ ಹೊಂಡ ಮುಚ್ಚುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.
ನಾಲ್ಕು ಗುಂಡಿ ಮುಚ್ಚಿದ PWD ಇಲಾಖೆ!
ಇನ್ನು ಭಿಕ್ಷೆ ಬೇಡಿದ ಹಣ pwd ಇಲಾಖೆ ಪಡೆದುಕೊಂಡಿದೆ. ಅದನ್ನು ಹೊಂಡ ಮುಚ್ಚಲು ಬಳಸುತ್ತಾರೆಯೇ ಎಂಬುದಕ್ಕಿಂತ ಪ್ರತಿಭಟನೆ ಮಾಡಿದ್ದರಿಂದ ಹಬ್ಬುವಾಡದಲ್ಲಿ ಕೆಲವು ಹೊಂಡವನ್ನ ಇಲಾಖೆ ಮುಚ್ಚಿದೆ.ಆದರೇ ಇನ್ನೂ ಹಲವು ಹೊಂಡಗಳಿದ್ದು , ಭಿಕ್ಷೆ ಬೇಡಿದ ಹಣ ಎರಡು ಹೊಂಡಕ್ಕೆ ಕಾಲಿಯಾಯ್ತು ಮತ್ತೆ ತನ್ನಿ ಎಂದು ಅಧಿಕಾರಿಗಳು ಹೇಳದಿದ್ದರೇ ಅದೇ ಪುಣ್ಯ ಎನ್ನುತಿದ್ದಾರೆ ಸ್ಥಳೀಯರು.


