Karwar | ಕಾರವಾರದ ತಹಶೀಲ್ದಾರ್ ಕಚೇರಿಗೂ ಬಂತು ಇ-ಮೇಲ್ ಬಾಂಬ್ ಬೆದರಿಗೆ
ವರದಿ- ಸಾಗರ್.
Karwar news( 16December 2025) :- ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಹಶಿಲ್ದಾರ್ ಕಚೇರಿಗೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ ಇದೀಗ ಕಾರವಾರ (karwar) ತಹಶಿಲ್ದಾರ್ ಕಚೇರಿಗೂ ಇದೇ ಮಾದರಿಯಲ್ಲಿ ಹುಸಿ ಬಾಂಬ್ ಬೆದರಿಕೆ ಹಾಕಲಾದ ಇಮೇಲ್ ಸಂದೇಶ ಕಳುಹಿಸಲಾಗಿದೆ.
Karwar: ಹಡಗಿನಲ್ಲಿ ಕಾರವಾರಕ್ಕೆ ಬಂದ ಪಾಕಿಸ್ತಾನಿ ಪ್ರಜೆ !
ಭಟ್ಕಳ ತಹಶಿಲ್ದಾರ್ ಕಚೇರಿಗೆ ಗೆ ಕಳುಹಿಸಿದ್ದ ಸಂದೇಶವನ್ನೇ ಯತಾವತ್ತಾಗಿ ಕಾರವಾರದ ತಹಶೀಲ್ದಾರ್ ಕಚೇರಿಗೆ ರವಾನೆ ಮಾಡಲಾಗಿದೆ.
Karwar| ಕಾರವಾರ ಜೈಲಿನಲ್ಲಿ ಮತ್ತೆ ಸಿಕ್ತು ಮೊಬೈಲ್ ಹಲವು ವಸ್ತುಗಳು| ದೂರು ದಾಖಲಿಸಿದ ಜೈಲು ಅಧಿಕಾರಿ.
ಇದೊಂದು ಹುಸಿ ಬಾಂಬ್ ಬೆದರಿಕೆ ಎಂಬುದು ಮೇಲುನೋಟಕ್ಕೆ ತಿಳಿಯುತ್ತದೆ. ಆದರೂ ಈ ವಿಷಯವನ್ನು ತಹಶಿಲ್ದಾರ್ ನರೋನಾ ರವರು ಕಾರವಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಯಾವುದೋ ಮಾನಸಿಕ ಕಾಯಿಲೆ ಇರುವ ವ್ಯಕ್ತಿ ಇ-ಮೇಲ್ ಮಾಡಿರುವ ಸಾಧ್ಯತೆಗಳಿದ್ದು ಈ ಬಗ್ಗೆ ಪೊಲೀಸ್ ಇಲಾಖೆ ತನಿಖೆ ಕೈಗೊಂಡಿದೆ.

ಇನ್ನು ಭಟ್ಕಳ,ಕಾರವಾರ (karwar)ತಹಶಿಲ್ದಾರ್ ಕಚೇರಿಗಲ್ಲದೇ ಉತ್ತರ ಕನ್ನಡ ಜಿಲ್ಲೆಯ ಬೇರೆ ಯಾವ ಕಚೇರಿಗಳಿಗೆ ಇ-ಮೇಲ್ ಬೆದರಿಕೆ ಬಂದಿರಬಹುದು ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ.
ಒಟ್ಟಿನಲ್ಲಿ ಒಂದೇ ದಿನ ಎರಡು ಇಮೇಲ್ ಬೆದರಿಕೆ ಸಂದೇಶ ಬಂದಿದೆ. ಇನ್ನು ಈ ಹಿಂದೆ ಭಟ್ಕಳ ಶಹರ ಠಾಣೆಗೂ ಎರಡು ಬಾಂಬ್ ಬೆದರಿಕೆ ಇಮೇಲ್ ಬಂದಿದ್ದು ಇಬ್ಬರನ್ನು ಬಂಧನ ಮಾಡಲಾಗಿತ್ತು.

ಆದರೇ ಮತ್ತೆ ಮತ್ತೆ ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಕಚೇರಿಯನ್ನೇ ಟಾರ್ಗೆಟ್ ಮಾಡುತ್ತಿರುವು ಏಕೆ ಎಂಬ ಪ್ರಶ್ನೆ ಏಳುವಂತೆ ಮಾಡಿದೆ.
ಇಮೇಲ್ ನಲ್ಲಿ ಏನಿದೆ?.
ಪ್ರಶಾಂತ್ ಕಿಶೋರ್ ಹಾಗೂ ಸುನೀಲ್ ಕನುಗೋಲು ಮುಂತಾದವರ ಸೂಚನೆಯಂತೆ ಡಿಎಂಕೆ ಸರಕಾರ 2001ರಲ್ಲಿ ಮಾಧ್ಯಮವನ್ನು ಬುಡಮೇಲು ಮಾಡಲು ಯತ್ನಿಸಿತ್ತು,
ಇದು ಹತೋಟಿ ತಪ್ಪಿದಾಗ ರಾಧಾಕೃಷ್ಣನ್ ಐಪಿಎಸ್ ಹಾಗೂ ಜಾಫರ್ ಸೇಟ್ ಮೂಲಕ ಗೆಲಿಲಿಯೋ ಆ್ಯಪ್ ಮೂಲಕ ಕನ್ನಡದವರ ಮೇಲೆ ಗೂಡಾಚಾರಿಕೆ ಮಾಡಿದ್ದರು.ಡಿಎಂಕೆ ಉದಯನಿಧಿಯ ಉದ್ದೇಶ ಹಣಗಳಿಸುವುದಕ್ಕಿಂತ ಹೆಚ್ಚಿನದ್ದೇ ಇದೆ ಎಂದು ಮೇಸೇಜ್ ಮಾಡಲಾಗಿದೆ.
ಅಲ್ಲದೇ, ಹಲವು ಅನಾಥಾಶ್ರಮಗಳ ಹೆಣ್ಣುಮಕ್ಕಳನ್ನು ಲೈಂಗಿಕ ಉದ್ದೇಶಕ್ಕೆ ಬಳಸಲಾಗುತ್ತಿದೆ.
ಡಿಎಂಕೆ ನಾಯಕತ್ವಕ್ಕೆ ಈ ಬಗ್ಗೆ ಮಾಹಿತಿಯಿದ್ದು, ಹೆಣ್ಣುಮಕ್ಕಳನ್ನು ಮಾನಸಿಕ ಖಿನ್ನತೆಗೆ ಒಳಪಡಿಸಿ ಬಳಸಲಾಗುತ್ತಿದೆ ಎಂದು ಈ ಮೇಲ್‌ನಲ್ಲಿ ಸಂದೇಶ ಬರೆಯಲಾಗಿದೆ.








