Yallapur|ರಂಜಿತಾ ಹತ್ಯೆ ಯಲ್ಲಾಪುರ ಬಂದ್ ಗೆ ಕರೆ| ಸಹೋದರಿ ನೀಡಿದ ದೂರಿನಲ್ಲಿ ಏನಿದೆ.
Yallapur news:- ಯಲ್ಲಾಪುರದಲ್ಲಿ (yallapur) ನಡೆದ ರಂಜಿತಾ ಹತ್ಯೆ ಸಾಕಷ್ಟು ದೊಡ್ಡ ವಿವಾಧವನ್ನು ಸೃಷ್ಟಿ ಮಾಡಿದ್ದು ಹತ್ಯೆ ಮಾಡಿದ ರಫಿಕ್ ನನ್ನು ತಕ್ಷಣ ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂಪರ ಕಾರ್ಯಕರ್ತರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಲ್ಲದೇ ,ಸ್ಥಳಕ್ಕೆ ಬಂದ ಎಸ್.ಪಿ ರವರನ್ನು ತರಾಟೆ ತೆಗೆದುಕೊಂಡರು.

Yallapur | ಹೆದ್ದಾರಿಯಲ್ಲಿ ಸಿಲೆಂಡರ್ ಸ್ಪೋಟ ಲಾರಿ ಬೆಂಕಿಗಾಹುತಿ
ಇನ್ನು ಭಾನುವಾರ ಹಿಂದೂಪರ ಸಂಘಟನೆ ಯಲ್ಲಾಪುರ ಬಂದ್ ಗೆ ಕರೆ ಕೊಟ್ಟಿದೆ.
ದೂರಿನಲ್ಲಿ ಏನಿದೆ?.

ಪಿರ್ಯಾಧಿ ಕು। ಅಕ್ಷತಾ ತಂದೆ ಮಲ್ಲಪ್ಪ ಬನಸೋಡೆ ಪ್ರಾಯ: 28 ವರ್ಷ, ವೃತ್ತಿ: ವಿದ್ಯಾರ್ಥಿನಿ, ಜಾತಿ: ಹಿಂದೂ ಹೊಲಿದ ಸಾ|| ಕಾಳಮ್ಮ ನಗರ, ಯಲ್ಲಾಪುರ ಇವರು ಠಾಣೆಗೆ ಹಾಜರಾಗಿ ಬರದುಕೊಟ್ಟ ದೂರಿನ ಸಾರಾಂಶ ಏನೆಂದರೆ, ನನ್ನ ಅಕ್ಕ ರಂಜಿತಾ ಅವರಿಗೆ ಕಳೆದ ಸುಮಾರು 1 2 ವರ್ಷಗಳ ಹಿಂದೆ ಸಚೀನ ಕಾಟೇರ ಸಾ|| ಸೋಲ್ಲಾಪುರ ಇವರೊಂದಿಗೆ ಮದುವೆ ಆಗಿದ್ದು ಅವಳಿಗೆ *** ಅಂತಾ 10 ವರ್ಷದ ಮಗನಿರುತ್ತಾರೆ. ಇವಳು ಗಂಡನ ಜೊತೆ ಹೊಂದಾಣಿಕೆ ಆಗದೇ ಇದ್ದುದರಿಂದ ಸುಮಾರು 4-5 ವರ್ಷಗಳಿಂದ ಇಲ್ಲಿಯೇ ನಮ್ಮೊಂದಿಗೆ ಇದ್ದು ಈಗ ಗಂಡ ಹೆಂಡತಿ ಡಿವೋರ್ಸ ಮಾಡಿಕೊಂಡಿದ್ದು, ರಾಮಪುರ ಸರ್ಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡು ಇರುತ್ತಾಳೆ.
Yallapur | ksrtc ಬಸ್ ಪಲ್ಟಿ |ವಿಡಿಯೋ ನೋಡಿ
ಅಕ್ಕ ರಂಜೀತಾ ಅಡುಗೆ ಕೆಲಸಕ್ಕೆ ಪ್ರತೀದಿನ ಬೆಳಗ್ಗೆ 9-00 ಗಂಟೆಗೆ ಹೋಗಿ ಮದ್ಯಾಹ್ನ 1-30 ಅಥವಾ 2-00 ಗಂಟೆಗೆ ಮರಳಿ ಮನೆಗೆ ಬರುತ್ತಿದ್ದಳು. ರಫೀಕ ಇಮಾಮ್ ಸಾಬ ಯಳ್ಳೂರ ವಯಾ: 30 ವರ್ಷ, ಸಾ|| ಕಾಳಮ್ಮ ನಗರ, ಯಲ್ಲಾಪುರ ಈತನು ನನ್ನ ಅಕ್ಕ ರಂಜೀತಾ ಇವಳ ಕ್ಲಾಸ್‌ಮೇಟ್ ಆಗಿದ್ದು ಆಗಾಗ ನಮ್ಮ ಮನೆಗೆ ಬಂದು ಹೋಗುತ್ತಿದ್ದನು.ಪೋನ್‌ನಲ್ಲಿ ಇಬ್ಬರು ಮಾತನಾಡುತ್ತಿದ್ದರು. ನಂತರ ಅಕ್ಕ ರಂಜತಾ ಅವಳಿಗೆ ಪ್ರೀತಿ ಮಾಡಿದ್ದ, ಮದುವೆ ಆಗೋಣಾ, ಮೀಟ್ ಆಗೋಕೆ ಬಾ ಅಂತಾ ಟಾರ್ಚರ ಮಾಡುತ್ತಿದ್ದ ವಿಷಯವನ್ನು ಅಕ್ಕ ನನಗೆ ಅಮ್ಮನಿಗೆ ಹೇಳಿದ್ದಳು.
Yallapur|ಅರಬೈಲ್ ಘಾಟ್‌ನಲ್ಲಿ ಹೊತ್ತಿ ಉರಿದಟ್ಯಾಂಕರ್ |ವಿಡಿಯೋ ನೋಡಿ
ನಾವು ಮಾತನಾಡಬೇಡ ಸರಿ ಇರು ಅಂತಾ ಬುದ್ದಿ ಮಾತು ಹೇಳಿದ್ದೇವು. ಅಲ್ಲದೇ ಈ ವಿಷಯವಾಗಿ ನಾನು ದೀಪಾವಳಿ ಹಬ್ಬದ ಸಮಯದಲ್ಲಿ ರಫೀಕನಿಗೆ ಬೈದಿರುತ್ತೇನೆ.
Yallapur|ಮನೆಕಳ್ಳತನ ಬಂಧಿತ ಆರೋಪಿಯಿಂದ 18 ಲಕ್ಷಕ್ಕೂ ಹೆಚ್ವು ಮೌಲ್ಯದ ವಸ್ತುಗಳು ವಶ.
ಆವಾಗಿನಿಂದ ರಫೀಕ ನಮ್ಮ ಮನೆಗೆ ಬರುವುದನ್ನು ಬಿಟ್ಟಿರುತ್ತಾನೆ. ಈಗ ಕಳೆದ ಕೆಲವು ದಿನಗಳಿಂದ ಅಕ್ಕ ರಫೀಕ ಈತನೊಂದಿಗೆ ಮಾತನಾಡುವುದನ್ನು ಬಿಟ್ಟ ಬಗ್ಗೆ ನನಗೆ ಹೇಳಿದ್ದಳು. ಹೀಗಿರುತ್ತಾ ಈ ದಿವಸ ದಿನಾಂಕ: 03.01.2028 ರಂದು ಮದ್ಯಾಹ್ನ 2-00 ಗಂಟೆಗೆ ನನ್ನ ಅಕ್ಕ ರಂಜೀತಾ ಶಾಲೆಯಿಂದ ಮನೆಗೆ ಬರುತ್ತಿದ್ದಾಗ ಆಪಾದಿತ ರಫೀಕ ಇಮಾಮ್ ಸಾಬ್ ಯಳ್ಳೂರ ವಯಾ: 30 ವರ್ಷ, ಸಾ|| ಕಾಳಮ್ಮ ನಗರ, ಯಲ್ಲಾಪುರ ಈತನು ನನ್ನ ಅಕ್ಕ ರಂಜಿತಾ ಇವಳಿಗೆ ಪ್ರೀತಿ ಮಾಡಿ, ಮದುವೆ ಆಗು, ಮೀಟ್ ಆಗೋಕೆ ಬಾ ಅಂತಾ ಟಾರ್ಚರ್ ಕೊಡುತ್ತಾ ಬಂದವನು ಅವಳು ನಿರಾಕರಿಸಿದ್ದರಿಂದ ದ್ವೇಷ ಇಟ್ಟುಕೊಂಡು ಆಶ್ರಯ ಕಾಲೋನಿಯ ನಮ್ಮ ಮನೆಯ ಹತ್ತಿರ ಅವಳಿಗೆ ಕೊಲೆ ಮಾಡುವ ಉದ್ದೇಶದಿಂದ ಅಡ್ಡಗಟ್ಟಿ ಯಾವುದೋ ಹರೀತವಾದ ಆಯುಧದಿಂದ ಕುತ್ತಿಗೆ ಕತ್ತರಿಸಿ ಗಂಭೀರ ಸ್ವರೂಪದ ಗಾಯ ನೋವು ಪಡಿಸಿದ್ದನ್ನು ನಾನು ನೋಡಿದ್ದು ಈತನ ಮೇಲೆ ಕಾನೂನು ಕ್ರಮ ಆಗಲು ವಿನಂತಿ ಇದೆ. ಎಂಬಿತ್ಯಾದಿ ದೂರಿನ ಸಾರಾಂಶ ನಮೂದಿರುತ್ತದೆ.
ಈ ರೀತಿ ದೂರು ನೀಡಲಾಗಿದ್ದು ತನಿಖೆ ನಂತರ ಪ್ರಕರಣ ಏನು ಎಂಬುದು ಗೊತ್ತಾಗಬೇಕಿದೆ.

ಶ್ರೀರಾಮಸೇನೆ ಮುಖ್ಯಸ್ತ ಪ್ರಮೋದ್ ಮುತಾಲಿಕ್ ,ಸಂಸದ ಕಾಗೇರಿ ಖಂಡನೆ.

ಯಲ್ಲಾಪುರದಲ್ಲಿ ರಂಜಿತಾ ಎಂಬ ಮಹಿಳೆಯನ್ನು ರಫೀಜ್ ಕೊಲೆ ಮಾಡಿದ ಪ್ರಕರಣ ಸಂಬಂದ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹಾಗೂ ಸಂಸದ ಕಾಗೇರಿ ಖಂಡನೆ ವ್ಯಕ್ತಪಡಿಸಿದ್ದಾರೆ.
ರಂಜಿತಾ ಅನ್ನೋ ಹಿಂದೂ ಮಹಿಳೆಯನ್ನು ರಫೀಕ್ ಅನ್ನೋ ಮುಸ್ಲಿಂ ಹತ್ಯೆ ಮಾಡಿದ್ದಾನೆ
ಮುಸ್ಲಿಂ ಅಂದಾಕ್ಷಣ ಪೊಲೀಸರು ಹಿಂದೇಟು ಹಾಕೋ ಕೆಲಸ, ಮಾನಸಿಕತೆ ಕಾಂಗ್ರೆಸ್ ಸರಕಾರವಿದ್ದಾಗ ಮಾಡಬಾರದು.
Uttara kannada | ಲೋಕಾಯುಕ್ತ ದಾಳಿ – ಸಹಕಾರಿ ಬ್ಯಾಂಕ್ ಸಿಇಒ ಮನೆ, ಕಚೇರಿ,ಮಳಿಗೆ ಮೇಲೆ ಲೋಕಾಯುಕ್ತ ದಾಳಿ
ನ್ಯಾಯ, ಕಾನೂನಿನ ಪರಿಪಾಲನೆಯನ್ನು ಪೊಲೀಸ್ ಇಲಾಖೆ ಮಾಡಬೇಕು,ನೂರಾರು ಸಂಖ್ಯೆಯಲ್ಲಿ ಸೇರಿದ ಕಾರ್ಯಕರ್ತರನ್ನು ಬೇರೆ ಬೇರೆ ರೀತಿಯಲ್ಲಿ ಡೈವರ್ಟ್ ಮಾಡೋ ಪ್ರಯತ್ನ ನಡೆಯುತ್ತಿದೆ ಎಂದು ಮುತಾಲಿಕ್ ಆರೋಪ ಮಾಡಿದ್ದಾರೆ.
ರಂಜಿತಾ ಸಾವಿಗೆ ಶ್ರದ್ಧಾಂಜಲಿ ಅರ್ಪಿಸಿ ಆಕೆಯ ಕುಟುಂಬಕ್ಕೆ ಸಮಾಧಾನ ಹೇಳುತ್ತೇನೆ,ಆರೋಪಿ ರಫೀಕ್‌ನನ್ನು ಬಂಧಿಸೋವರೆಗೆ ರಂಜಿತಾಳ ಅಂತ್ಯಕ್ರಿಯೆ ಮಾಡಬಾರದು,ಪೊಲೀಸ್ ಇಲಾಖೆ, ಕಾಂಗ್ರೆಸಿನವರು ಮುಸ್ಲಿಮರನ್ನು ರಕ್ಷಿಸುವ ಪ್ರವೃತ್ತಿ ನಿಲ್ಲಿಸಬೇಕು ಎಂದ ಅವರುಆರೋಪಿ ರಫೀಕ್‌ನನ್ನು ಮರ್ಡರ್ ಪ್ರಕರಣದಲ್ಲಿ ಒದ್ದು ಒಳಗೆ ಹಾಕಿ ಹೊರಗೆ ಬರದಂತೆ ನೋಡಿಕೊಳ್ಳಬೇಕು,ನಾಳೆ ಅಥವಾ ನಾಡಿದ್ದು ಯಲ್ಲಾಪುರಕ್ಕೆ ಭೇಟಿ ನೀಡುವುದಾಗಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಇನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜನ ಸಂಯಮದಿಂದ ಇರುವಂತೆ ಮನವಿ ಮಾಡಿದ್ದಾರೆ.







