Uttara kannada | ಲೋಕಾಯುಕ್ತ ದಾಳಿ – ಸಹಕಾರಿ ಬ್ಯಾಂಕ್ ಸಿಇಒ ಮನೆ, ಕಚೇರಿ,ಮಳಿಗೆ ಮೇಲೆ ಲೋಕಾಯುಕ್ತ ದಾಳಿ

Uttara kannada news :- ಆಧಾಯಕ್ಕಿಂತ ಅಧಿಕ ಆಸ್ತಿ ,ಹಣ ಹೊಂದಿರುವ ಆರೋಪದಡಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ(siddapur) ಹಾಗೂ ಹಳಿಯಾಳದಲ್ಲಿ (haliyala)ಸಹಕಾರಿ ಬ್ಯಾಂಕಿನ ಸಿಇಓ ಮನೆ,ಮಳಿಗೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
Siddapur| ಕಾಲು ಮುರಿದುಕೊಂಡ ಕಾಡುಕೋಟ| ರಕ್ಷಣೆ ಮಾಡಿದರೂ ಉಳಿಯಲಿಲ್ಲ ಜೀವ! ಏನಾಯ್ತು ಗೊತ್ತಾ?
ಸಿದ್ಧಾಪುರ ಕೋಲ್ ಸಿರ್ಸಿ ಗ್ರೂಪ್ ನ ಗ್ರಾಮ ಸೇವಾ ಸಹಕಾರಿ ಸಂಘ ನಿಯಮಿತದ ಸಿಇಒ ಮಾರುತಿ ಯಶವಂತ್ ಮಾಲ್ವಿ ವಿರುದ್ಧ ಅಕ್ರಮ ಆಸ್ತಿ ಹಾಗೂ ಹಣ ಹೊಂದಿದ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ.
ಬೆಳ್ಳಂಬೆಳಗ್ಗೆ ಕಾರವಾರ,ಉಡುಪಿ ,ಮಂಗಳೂರು ಲೋಕಾಯುಕ್ತ ಅಧಿಕಾರಿಗಳವಿವಿಧ ತಂಡಗಳಿಂದ ಏಕಕಾಲದಲ್ಲಿ ಶೋಧ ಕಾರ್ಯ ಆರಂಭವಾಗಿದ್ದು, ಸಿದ್ಧಾಪುರದಲ್ಲಿ ಎರಡು ಕಡೆ ಲೋಕಾಯುಕ್ತ ಸಿ.ಪಿ.ಐ ವಿನಾಯಕ್ ಬಿಲ್ಲವ ತಂಡದಿಂದ ಹಾಗೂ ಹಳಿಯಾಳದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಸಿದ್ದಾಪುರದಲ್ಲಿ ಎರಡು ಮನೆ ,ಹಳಿಯಾಳದಲ್ಲಿರುವ ಮನೆ, ಹಾಗು ಬಟ್ಟೆ ಅಂಗಡಿ ಸೇರಿ ಒಟ್ಟು ನಾಲ್ಕು ಕಡೆಗಳಲ್ಲಿ ಈ ದಾಳಿ ನಡೆದಿದೆ.
Haliyala| ಅಪ್ರಾಪ್ತ ಬಾಲಕಿಗೆ ಕಿರುಕುಳ ಕನ್ನಡ ಸಂಘಟನೆ ಅಧ್ಯಕ್ಷ ವಿರುದ್ಧ ಪ್ರಕರಣ.
ಪ್ರಸ್ತುತ ದಾಖಲೆಗಳ ಪರಿಶೀಲನೆ, ನಗದು ಹಾಗೂ ಆಸ್ತಿ ಸಂಬಂಧಿತ ವಿವರಗಳ ಸಂಗ್ರಹ ಕಾರ್ಯ ಮುಂದುವರಿದಿದ್ದು, ಶೋಧ ಪೂರ್ಣಗೊಂಡ ಬಳಿಕ ವಶಪಡಿಸಿಕೊಳ್ಳಲಾದ ದಾಖಲೆಗಳ ಆಧಾರದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.







