Haliyala| ಅಪ್ರಾಪ್ತ ಬಾಲಕಿಗೆ ಕಿರುಕುಳ ಕನ್ನಡ ಸಂಘಟನೆ ಅಧ್ಯಕ್ಷ ವಿರುದ್ಧ ಪ್ರಕರಣ.
ವರದಿ:- ವಸಂತ್
Haliyala news :-ಹಳಿಯಾಳ(haliyala) ತಾಲೂಕಿನ ತತ್ವಣಗಿ ಗ್ರಾಮದ ಕೃಷ್ಣ ಮಾರುತಿ ಹುಲಸ್ವಾರ ಎಂಬಾತನ ವಿರುದ್ಧ ಅಪ್ರಾಪ್ತ ಶಾಲಾ ವಿದ್ಯಾರ್ಥಿನಿಯರನ್ನು ಹಿಂಬಾಲಿಸಿ ಕಿರಿಕಿರಿ ಮಾಡಿದ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ ಆರೋಪದಡಿ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Haliyala | ಪರೀಕ್ಷಾ ಕೇಂದ್ರದಲ್ಲೇ ಮಗನಿಗೆ ಕಾಪಿ ಹೊಡೆಸಿದ ಶಿಕ್ಷಕ .
ಆರೋಪಿ ಕೃಷ್ಣಾ ವಿಶ್ವ ಕನ್ನಡಿಗರ ರಕ್ಷಣಾ ವೇದಿಕೆ (ಸಿಂಹ ಘರ್ಜನೆ) ಸಂಸ್ಥಾಪಕ ರಾಜ್ಯಾಧ್ಯಕ್ಷನೆಂದು ಹಲವಾರು ವಿಡಿಯೋಗಳನ್ನು ಫೇಸಬುಕ್ ನಲ್ಲಿ ಹಂಚಿಕೊಂಡಿದ್ದು ಅಲ್ಲದೇ ಇತನ ಮೇಲೆ ಈಗಾಗಲೇ ಹಳಿಯಾಳ ಠಾಣೆಯಲ್ಲಿ ವಂಚನೆ, ಸುಲಿಗೆ, ಬ್ಲಾಕ್ ಮೇಲಿಂಗ್ ಪ್ರಕರಣ ದಾಖಲಾಗಿದೆ.
Haliyala Mid-Day Meal Scam|ಹಳಿಯಾಳ ಶಾಲೆಗೆ ಕಳಪೆ ಆಹಾರ ಪೂರೈಕೆ |ಸಿಡಿದೆದ್ದ ಪೋಷಕರು
ಇನ್ನೂ ಸಧ್ಯ ಹಳಿಯಾಳ ಠಾಣೆಯಲ್ಲಿ ದೌರ್ಜನ್ಯಕ್ಕೊಳಗಾದ ಬಾಲಕಿಯೊರ್ವಳ ತಂದೆ ಪರಶುರಾಮ ಮೂಲಿಮನಿ ಅವರು ನೀಡಿದ ದೂರಿನಲ್ಲಿ ತನ್ನ ಮಗಳು ಮತ್ತು ಆಕೆಯ ಸ್ನೇಹಿತೆಯರು ಊಟಕ್ಕಾಗಿ ಹಳಿಯಾಳದ (haliyala) ಗಾರ್ಡನ್ ಒಂದಕ್ಕೆ ತೆರಳುತ್ತಿದ್ದ ವೇಳೆ, ಆರೋಪಿತ ಕೃಷ್ಣ ಮಾರುತಿ ಹುಲಸ್ವಾರ ಅವರನ್ನು ಹಿಂಬಾಲಿಸಿ ವಿಡಿಯೋ ಮಾಡಿ ಕಿರಿಕಿರಿ ಮಾಡಿದ್ದಾನೆ.
Dandeli | ನಗರಕ್ಕೆ ಬಂದ ಮೊಸಳೆ ಯುವಕರಿಂದ ಮೊಸಳೆ ರಕ್ಷಣೆ-ವಿಡಿಯೋ ನೋಡಿ
ವಿಷಯ ತಿಳಿದು ನಮ್ಮ ಪಕ್ಕದ ಮನೆಯವರಾದ ಪ್ರವೀಣ ಭಜಂತ್ರಿ ಅವರು ಆರೋಪಿತನಿಗೆ ದೂರವಾಣಿ ಮೂಲಕ ವಿಚಾರಿಸಿದಾಗ, ಆತ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಹಳಿಯಾಳ ಪೋಲಿಸರು ತನಿಖೆ ಕೈಗೊಂಡಿದ್ದಾರೆ.







