Siddapur| ಕಾಲು ಮುರಿದುಕೊಂಡ ಕಾಡುಕೋಟ| ರಕ್ಷಣೆ ಮಾಡಿದರೂ ಉಳಿಯಲಿಲ್ಲ ಜೀವ! ಏನಾಯ್ತು ಗೊತ್ತಾ?.
Siddapur news (21 december 2025) :- ಉತ್ತರ ಕನ್ನಡ ಜಿಲ್ಲೆಯ ಶಿರಸಿ ವಿಭಾಗದ ಸಿದ್ದಾಪುರ (siddapur) ವಲಯ ಗವಿನಗುಡ್ಡದ ಅಂಚಿನ ತೋಟದಲ್ಲಿ ಆಹಾರ ಅರಸಿ ಬಂದು ಸ್ಥಳೀಯರೊಬ್ಬರ ತೋಟದಲ್ಲಿ ಕಾಲು ಮುರಿದುಕೊಂಡು ನಿಂತಿದ್ದ ಕಾಡುಕೋಣ ರಕ್ಷಣೆ ಮಾಡಿದರೂ ಜೀವ ಉಳಿಸಲು ಅರಣ್ಯ ಇಲಾಖೆ ವಿಫಲವಾಗಿದೆ.

ಸಧ್ಯ ಮರಣಹೊಂದಿದ ಕಾಡುಕೋಣದ ಮರಣೋತ್ತರ ಪರೀಕ್ಷೆಯನ್ನು ಶಿವಮೊಗ್ಗ ಮೃಗಾಲಯದ ವೈದ್ಯ ತಂಡಮಾಡಿದ್ದು, ಸಾವಿನ ಅಂಶ ಬೆಳಕಿಗೆ ಬರಬೇಕಿದ್ದು ,ಮರಣೋತ್ತರ ಪರೀಕ್ಷೆಯ ವರದಿಗೆ ಕಾಯಲಾಗಿದೆ.
ಏನಾಗಿತ್ತು?
ಗವಿನಗುಡ್ಡದಂಚಿನಲ್ಲಿ ಮೇವು , ನೀರಿಗೆ ಅರಸಿ ಕಾಡಕೋಣ ಎತ್ತರದಿಂದ ನೆಗೆದು ಅದರ ಮುಂದಿನ ಬಲಗಾಲು ಮುರಿದುಕೊಂಡಿತ್ತು ಎಂದು ಸ್ಥಳೀಯರು ನಂಬಿದ್ದರು. ಘಟನೆ ಮಂಗಳವಾರ ಅರಣ್ಯ ಇಲಾಖೆ ಸಿಬ್ಬಂದಿ ಗಮನಕ್ಕೆ ಬಂದರೂ ಸಹ, ಸ್ವಲ್ಪ ಗುಣಮುಖವಾದರೂ ಕಾಡಿಗೆ ತೆರಳಬಹುದು ಎಂದು ಕಾದಿದ್ದರು.
ಮೊದಲು ಮಾಹಿತಿ ನೀಡಿದರೂ ತಡಮಾಡಿದ್ದ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
Siddapur|ಸಿದ್ದಾಪುರದಲ್ಲಿ ಕಾಲು ಮುರಿದು ಬಿದ್ದ ಕಾಡುಕೋಣ| Uttara Kannada
ನಿರ್ಲಕ್ಷ ಮಾಡಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಾವೇ ಚಿಕಿತ್ಸೆ ಕೊಡಿಸುತ್ತೇವೆ ಎಂದು ಹೇಳಿದ್ದರು. ಯಾವಾಗ ಒತ್ತಡ ಹೆಚ್ಚಾಯ್ತೋ ಅರಣ್ಯಾಧಿಕಾರಿಗಳು ಶಿವಮೊಗ್ಗ ಮೃಗಾಲಯದ ವೈದ್ಯರ ತಂಡವನ್ನು ಗುರುವಾರ ಸ್ಥಳಕ್ಕೆ ಕರೆಸಿ, ಅರಿವಳಿಕೆ ನೀಡಿ ಸ್ಥಳೀಯರ ಸಹಾಯದಿಂದ ಲಿಫ್ಟ್ ಮಾಡಿದ್ದರು.

ವೈದ್ಯರ ತಂಡ ಕಾಡುಕೋಣವನ್ನೇನೋ ಪ್ರಜ್ಞೆತಪ್ಪಿಸಿ ಶಿವಮೊಗ್ಗ ತೆಗೆದುಕೊಂಡು ಹೋಗಿದೆ ಆದರೆ ಅದು ಮೃಗಾಲಯ ಸೇರುವುದರೊಳಗೆ ಮೃತಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಕಾಡುಕೋಣ(ಕಾಟಿ) ಮೃತಪಟ್ಟ ಬಗ್ಗೆ ಇಲಾಖೆ ಸಿಬ್ಬಂದಿ ಅಧಿಕೃತವಾಗಿ ಹೇಳದಿದ್ದರೂ ಸಹ, ಮರಣೋತ್ತರ ಪರೀಕ್ಷೆಗೆ ಎದಿರು ನೋಡುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ವರದಿ ಕೈ ಸೇರಲಿದೆ.
Siddapur: ಎಂಟು ಜನರಿಗೆ ಅಂಗದಾನ ಮಾಡಿ ಉಸಿರು ಬಿಟ್ಟ ಸಿದ್ದಾಪುರದ ಆಟೋ ಚಾಲಕ
ರಾಜ್ಯದಲ್ಲಿ ಕಾಟಿ ಸೆರೆಗೆ ತಜ್ಞರ ತಂಡ ಇಲ್ಲ. ಸೂಕ್ತ ಸಲಕರಣೆಗಳಿಲ್ಲ. ಅರಣ್ಯ ಸಚಿವ ಈಶ್ವರ ಬಿ ಖಂಡ್ರೆಯವರಿಗೆ ಈ ಬಗ್ಗೆ ಗಮನಹರಿಸಲು ಪರಿಸರಾಸಕ್ತರು ಹಲವು ಸಲ ಮನವಿ ಮಾಡಿದರೂ ಏನೂ ಪ್ರಯೋಜನವಿಲ್ಲ.
ಕಾಟಿ ಹಿಡಿಯಲು ಇಲ್ಲ ತಜ್ಞರು!

ಕಾಡುಕೋಣಗಳನ್ನು ಹಿಡಿಯಲು ಅಷ್ಟು ಸುಲಭವಿಲ್ಲ, ಅರವಳಿಕೆ ಡೋಸ್ ಹೆಚ್ಚಾದರೂ ಸಾಯುತ್ತದೆ.ಮದ್ದು ನೀಡುವಾಗ ಹೆದರಿದರೂ ಅದಕ್ಕೆ ಹೃದಯಾಘಾತವಾಗುತ್ತದೆ.
ಇಲಾಖೆಯ ಹಿರಿಯ ಅಧಿಕಾರಿಗಳು ಮಧ್ಯ ಪ್ರದೇಶ ಪ್ರವಾಸ ಮಾಡಿ, ಇವುಗಳ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆದು ಸುಮ್ಮನೆ ಕುಳಿತಿದ್ದಾರೆಯೇ ವಿನಃ ಅನುಷ್ಠಾನವಿಲ್ಲ. ಸಾಮಾನ್ಯವಾಗಿ ಕಾಟಿಗಳನ್ನು ಸೆರೆಹಿಡಿಯುವಾಗ ಅವುಗಳ ದೇಹದ ಮೇಲೆ ಆಗುವ ಪರಿಣಾಮಗಳು ಇಂತಹ ಅವಘಡಕ್ಕೆ ಕಾರಣವಾಗುತ್ತವೆ.
ಸಾಕು ಪ್ರಾಣಿಯಂತೆ ಕಂಡರೂ ಸೆರೆ ವೇಳೆ ಹೃದಯಾಘಾತದಿಂದ ಮೃತಪಡುವ ಪ್ರಮಾಣ ಹಚ್ಚಿರುತ್ತೆ. ಈ ಪ್ರಕರಣವೂ ಸಹ ಭಿನ್ನವಾಗಿಲ್ಲ.
Siddapura |ಆಹಾರಕ್ಕಾಗಿ ಮೂರು ಬಾರಿ ಮನೆಗೆ ಬಂದ ಕರಿ ಚಿರತೆ! Video ನೋಡಿ
ಗವಿನಗುಡ್ಡದಲ್ಲಿ ಸೆರೆಯಾದ ಕಾಟಿ ಪರಸ್ಪರ ಇನ್ನೊಂದು ಕೋಣದ ಜತೆಯ ಕಾದಾಟದಲ್ಲಿ ಬಿದ್ದು ಕಾಲು ಮುರಿದುಕೊಂಡಿರಬಹುದು. ಕಾದಾಟದಲ್ಲೇ ಘಾಸಿಯಾಗಿದ್ದ ಕೋಣಕ್ಕೆ ಜನರೂ ಸಹ ಸುತ್ತುವರಿದು ಅದು ಕಕ್ಕಾಬಿಕ್ಕಿಯಾಗುವಂತೆ ಮಾಡಿರುವ ಸಾಧ್ಯತೆ ಇದೆ. ಎರಡು ದಿನದ ನಂತರ ಪುನಃ ಸೆರೆ ಕಾರ್ಯಾಚಾರಣೆ ಆಘಾತದಿಂದ ಮೃತಪಟ್ಟಿರಬಹುದು ಎನ್ನಲಾಗಿದೆ.
ಈ ಬಗ್ಗೆ ಮರಣೋತ್ತರ ಪರೀಕ್ಷಾ ವರದಿ ಬರಬೇಕಿದ್ದು ಹೇಗೆ ಸಾವು ಕಂಡಿತು ಎಂಬ ಬಗ್ಗೆ ತಿಳಿದು ಬರಬೇಕಿದೆ.







