Karwar| JDS ನಾಯಕಿ ಚೈತ್ರಾ ಪುತ್ರನ ವಿರುದ್ಧ ಅತ್ಯಾಚಾರದ ದೂರು|ಪ್ರತಿಭಟನೆ ಎಚ್ಚರಿಕೆ.
Karwar news :- ಕಾರವಾರದ (karwar) ಜೆಡಿಎಸ್ ಮುಖಂಡೆ,ಮಾಜಿ ಜಿಲ್ಲಾಪಂಚಾಯತ್ ಸದಸ್ಯೆ ಚೈತ್ರಾ ಕೋಠಾರಕರ್ ಪುತ್ರನ ಕಿರುಕಳಕ್ಕೆ ಯುವತಿ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ಟಿಸ್ಟ್ ಸಿಕ್ಕಿದ್ದು ಮೃತಳ ತಾಯಿ ಅತ್ಯಾಚಾರ ಹಾಗೂ ದೈಹಿಕ ಕಿರುಕುಳದ ಆರೋಪ ಮಾಡಿ ಮರು ದೂರು ನೀಡಿದರೇ ,ಆಕೆಯ ಸಹೋದರ ದೂರು ನೀಡದಂತೆ ತನಗೆ ಜೀವ ಬೆದರಿಕೆ ಬಂದ ಆರೋಪ ಮಾಡಿದ್ದಾರೆ.

ಜನವರಿ 9 ರಂದು ಕದ್ರಾದ ಕೆಪಿಸಿ ಕಾಲೋನಿಯಲ್ಲಿ ರಿಶೇಲ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿದ್ದಳು.ಈ ಕುರಿತು ಜನವರಿ 10 ರಂದು ಮೃತಳ ತಂದೆ ಕ್ರಿಸ್ತೋದ ಡಿಸೋಜಾ ಜೆಡಿಎಸ್ ಮುಖಂಡೆ ಚೈತ್ರಾ ಕೋಠಾರಕರ್ ಪುತ್ರ ಚಿರಾಗ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ದೂರು ನೀಡಿದ್ದರು.
Karwar|ಯುವತಿ ಆತ್ಮಹತ್ಯೆ ಪ್ರಕರಣ |ಜೆಡಿಎಸ್ ಚೈತ್ರಾ ಕೊಠಾರಕರ್ ಪುತ್ರ ಚಿರಾಗ್ ನಾಪತ್ತೆ.
ಆದರೇ ಇದೀಗ ಮೃತಳ ತಾಯಿ ರೀನಾ ಮರು ದೂರ ನೀಡುದ್ದು ಅತ್ಯಾಚಾರ ಮಾಡಿ ದೈಹಿಕ ಕಿರುಕುಳ ನೀಡಲಾಗಿದೆ.ಆಕೆಯ ದೇಹದಲ್ಲಿ ಕಚ್ಚಿದ ಗಾಯಗಳಿವೆ ,ಆಕೆ ಆತನಿಗೆ ವಿಡಿಯೋ ಕಾಲ್ ಮಾಡಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಎಸ್.ಪಿ ಗೆ ದೂರು ನೀಡಿದ್ದಾರೆ.
ಇದಲದಲದೇ ಸಿ.ಎಂ ಹಾಗೂ ಗೃಹ ಸಚಿವರಿಗೂ ಪತ್ರ ಬರೆದಿದ್ದಾರೆ.
ಯುವಕರಿಂದ ದಮ್ಕಿ ಆರೋಪ

ಇನ್ನು ದೂರು ನೀಡದಂತೆ ಮೃತ ರಿಶೇಲ್ ಸಹೋದರ ಕ್ರಿಶಿಲ್ ಡಿಸೋಜಾಗೆ ಜೀವ ಬೆದರಿಕೆ ನೀಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಸಂತೋಷ್ ಎಂಬಾತ ಕಾರವಾರದ ಕ್ರಿಮ್ಸ್ ಆಸ್ಪತ್ರೆಯಲ್ಲಿ ಸಹೋದರಿಯ ಶವಕ್ಕಾಗಿ ಕಾದು ನಿಂತಾಗ ಬಂದು ದಮ್ಕಿ ಹಾಕಿದ್ದಾರೆ ದೂರು ನೀಡದರೆ ಹೊಡೆಯುವುದಾಗಿ ಬೆದರಿಕೆ ಹಾಕಿ ಹೋಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.
Karwar| JDS ಮುಖಂಡೆ ಚೈತ್ರಾ ಕೊಠಾರಕರ್ ಪುತ್ರನಿಂದ ಯುವತಿಗೆ ಕಿರುಕುಳ ,ಯುವತಿ ಆತ್ಮಹತ್ಯೆ!
ಇನ್ನು ದೂರು ನೀಡಿ ಆರು ದಿನವಾದರೂ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿಲ್ಲ, ಮೃತ ರಿಶೇಲ್ ಮೊಬೈಲ್ ಪಡೆಯಲಾಗಿದೆ ,ಅದನ್ನ ಎಫ್.ಎಸ್.ಎಲ್ ಗೆ ಕಳುಹಿಸದೇ ನಿರ್ಲಕ್ಷ ಮಾಡಲಾಗಿದೆ ಎಂದು ಮೃತೆಯ ಸಹೋದರ ಆರೋಪ ಮಾಡಿದ್ದಾರೆ.
Karwar| ಭಾರವಾದ ಶಾಲಾ ಬ್ಯಾಗ್ ಹೊತ್ತ ವಿದ್ಯಾರ್ಥಿ ಕೈ ಮುರಿತ
ಒಂದುವೇಳೆ ಆತನನ್ನು ಬಂಧಿಸದಿದ್ರೆ ಠಾಣೆ ಎದುರು ಗ್ರಾಮಸ್ತರೊಂದಿಗೆ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದು ಇದೀಗ ಯುವತಿಯ ಸಾವು ಮೊತ್ತೊಂದು ಮುಖದೆಡೆ ವಾಲಿದೆ.








