Bigg Boss Kannada Season 12:ಗಿಲ್ಲಿಗೆ ಎಷ್ಟು ಬಹುಮಾನ? ಯಾರಿಗೆ ಎಷ್ಟು ಹಣ ಸಿಕ್ಕಿದೆ?
Bigg Boss Kannada Season 12:-ಬಿಗ್ ಬಾಸ್ ಕನ್ನಡ ಸೀಸನ್ 12ರ ವಿಜೇತ ಯಾರು? ಗೆದ್ದವರಿಗೆ ಎಷ್ಟು ಬಹುಮಾನ ಸಿಕ್ಕಿದೆ? ಇತರ ಸ್ಪರ್ಧಿಗಳಿಗೆ ಎಷ್ಟು ಹಣ ನೀಡಲಾಗಿದೆ? ಎಂಬ ಪ್ರಶ್ನೆಗಳು ವೀಕ್ಷಕರಲ್ಲಿ ದೊಡ್ಡ ಮಟ್ಟದ ಕುತೂಹಲ ಮೂಡಿಸಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಸ್ಪಷ್ಟ ಉತ್ತರ.
ಗಿಲ್ಲಿಗೆ ಎಷ್ಟು ಬಹುಮಾನ ಸಿಕ್ಕಿದೆ?

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ಗೆಲುವು ಸಾಧಿಸಿದ್ದು, ಬಹುಮಾನವಾಗಿ 50 ಲಕ್ಷ ರೂ. ನಗದು ಪಡೆದುಕೊಂಡಿದ್ದಾರೆ.
ಇದರ ಜೊತೆಗೆ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು, ನಟ ಕಿಚ್ಚ ಸುದೀಪ್ ಅವರಿಂದ ವೈಯಕ್ತಿಕವಾಗಿ 10 ಲಕ್ಷ ರೂ. ಘೋಷಣೆ ಮಾಡಿದ್ದು,ಇವೆಲ್ಲವೂ ಗಿಲ್ಲಿಗೆ ಲಭಿಸಿರುವ ಹೆಚ್ಚುವರಿ ಗೌರವಗಳಾಗಿವೆ.
ಪ್ರೈಸ್ ಮನಿಗೆ ಟ್ಯಾಕ್ಸ್ ಕಟ್ ಆಗುತ್ತಾ?
ಹೌದು. ಮನರಂಜನಾ ಕ್ಷೇತ್ರದಲ್ಲಿ ದೊರಕುವ ಬಹುಮಾನ ಹಣಕ್ಕೆ ಸರ್ಕಾರದಿಂದ ಶೇ.30 ರಷ್ಟು ತೆರಿಗೆ (TDS) ವಿಧಿಸಲಾಗುತ್ತದೆ.
ಅದರಂತೆ ₹50 ಲಕ್ಷದಲ್ಲಿ ತೆರಿಗೆ ಕಟ್ ಆದ ನಂತರ ಗಿಲ್ಲಿಗೆ ಕೈಗೆ ಬರುವ ಮೊತ್ತ ಸುಮಾರು ₹35 ಲಕ್ಷ.
Bigg boss kannada|ಕಳೆದ ವಾರದ TRP ರೇಟ್ ಎಷ್ಟು..? ಜನರ ಬೆಂಬಲ ಹೇಗಿದೆ ಗೊತ್ತಾ?
ಕಿಚ್ಚ ಸುದೀಪ್ ಘೋಷಿಸಿದ ₹10 ಲಕ್ಷಕ್ಕೂ ತೆರಿಗೆ ಅನ್ವಯವಾಗಲಿದೆ.ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ.
ರನ್ನರ್ ಅಪ್ ರಕ್ಷಿತಾ ಶೆಟ್ಟಿಗೆ ಎಷ್ಟು ಹಣ?
ಕರಾವಳಿಯ ಪ್ರತಿಭಾವಂತ ಸ್ಪರ್ಧಿ ರಕ್ಷಿತಾ ಶೆಟ್ಟಿ ಈ ಬಾರಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಇವರಿಗೆ ಒಟ್ಟು ಬಹುಮಾನ: ₹25 ಲಕ್ಷ.ತೆರಿಗೆ ಕಡಿತದ ಬಳಿಕಸಿಗುವ ಮೊತ್ತ ಸುಮಾರು ₹17.50 ಲಕ್ಷ.
3ನೇ ಮತ್ತು 4ನೇ ರನ್ನರ್ ಅಪ್ಗಳಿಗೆ ಏನು ಸಿಕ್ಕಿದೆ?

3ನೇ ರನ್ನರ್ ಅಪ್ ಕಾವ್ಯ ಶೈವ ಬಹುಮಾನಮೊತ್ತ ₹10 ಲಕ್ಷ.ಗಿಲ್ಲಿಯ ಆಪ್ತ ಸ್ನೇಹಿತೆಯಾಗಿದ್ದ ಕಾವ್ಯ ಶೈವ ಫೈನಲ್ ಹಂತದ ಸನಿಹದಲ್ಲೇ ಹೊರಬಂದರು.ಈ ಎಲಿಮಿನೇಷನ್ ರೌಂಡ್ ಅನ್ನು ಕ್ರೇಜಿಸ್ಟಾರ್ ರವಿಚಂದ್ರನ್ ನಡೆಸಿಕೊಟ್ಟರು.
4ನೇ ರನ್ನರ್ ಅಪ್ ರಘು ಗೆ ಇಬ್ಬರು ಪ್ರಾಯೋಜಕರಿಂದ ಒಟ್ಟು ₹3.50 ಲಕ್ಷ ಬಹುಮಾನ.
ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದ ರಘು ಕೊನೆಯ ಕ್ಷಣದಲ್ಲಿ ಮನೆಯಿಂದ ಹೊರಬಂದರು.
Biggbos| ಅಕ್ಕ, ಬಾವನ ಜೊತೆ ಗಲಾಟೆ – ಬಿಗ್ ಬಾಸ್ ರಂಜಿತ್ ಮೇಲೆ ದೂರು ದಾಖಲು
ಬಿಗ್ ಬಾಸ್ ಕನ್ನಡ ಸೀಸನ್ 12 ಕೇವಲ ಮನರಂಜನೆಯಷ್ಟೇ ಅಲ್ಲ, ದೊಡ್ಡ ಮೊತ್ತದ ಬಹುಮಾನಗಳ ಮೂಲಕವೂ ಗಮನ ಸೆಳೆದಿದೆ.ಗಿಲ್ಲಿಯ ಗೆಲುವು, ಇತರ ಸ್ಪರ್ಧಿಗಳ ಬಹುಮಾನ ವಿವರಗಳು ಮತ್ತು ತೆರಿಗೆ ಕಡಿತ all together ವೀಕ್ಷಕರ ಕುತೂಹಲಕ್ಕೆ ಉತ್ತರ ನೀಡಿವೆ.







