Bigg boss kannada|ಕಳೆದ ವಾರದ TRP ರೇಟ್ ಎಷ್ಟು..? ಜನರ ಬೆಂಬಲ ಹೇಗಿದೆ ಗೊತ್ತಾ?
ಬೆಂಗಳೂರು(october 12):- ಬಿಗ್ ಬಾಸ್ ರಿಯಾಲಿಟಿ ಶೋ (bigg boss) ಶುರುವಾದಾಗಿನಿಂದ ವಿವಾದಗಳ ಮೂಲಕವೇ ಸದ್ದು ಮಾಡಿದ್ದ ಈ ಈ ಶೋ ಇದೀಗ ಗ್ರ್ಯಾಂಡ್ ಓಪನಿಂಗ್ ಆಗುವ ಜೊತೆ ಮತ್ತೆ ವಿವಾದಕ್ಕೆ ಸಿಲುಕಿತ್ತು.
ಹೀಗಾಗಿ ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ಗೆ ರೇಟಿಂಗ್ ಎಷ್ಟು ಬಂದಿದೆ ಎಂಬ ಕುತೂಹಲ ಸಹಜ. ಕಳೆದ ವಾರ ಟಿಆರ್ಪಿ ರೇಟ್ (TRP) ಎಷ್ಟು ಬಂದಿದೆ ಅನ್ನೋದ್ರ ವಿವರ ಇಲ್ಲಿದೆ.
ಈ ಬಾರಿ ಹೆಚ್ಚು ವೀಕ್ಷಣೆಗೊಂಡ ಧಾರಾವಾಹಿ ಅಮೃತಧಾರೆ.ಮೊದಲ ಸ್ಥಾನದಲ್ಲಿ ಅಮೃತಧಾರೆ 9, ಎರಡನೇ ಸ್ಥಾನದಲ್ಲಿ ಅಣ್ಣಯ್ಯ 8.9, ಮೂರನೇ ಸ್ಥಾನದಲ್ಲಿ ಕರ್ಣ 8.7, ನಾಲ್ಕನೇ ಸ್ಥಾನದಲ್ಲಿ ಲಕ್ಷ್ಮೀ ನಿವಾಸ 7.5, ಐದನೇ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು 6, ಆರನೇ ಸ್ಥಾನದಲ್ಲಿ ನಿನ್ನ ಜೊತೆ ನನ್ನ ಕಥೆ 5.9, ಏಳನೇ ಸ್ಥಾನದಲ್ಲಿ ನಾ ನಿನ್ನ ಬಿಡಲಾರೆ 5.5, ಎಂಟನೇ ಸ್ಥಾನದಲ್ಲಿ ಶ್ರೀ ರಾಘವೇಂದ್ರ ಮಹಾತ್ಮೆ ಹಾಗೂ ನಂದಗೋಕುಲ ಹಂಚ್ಕೊಂಡಿದ್ದು 5.4, ಒಂಬತ್ತನೇ ಸ್ಥಾನದಲ್ಲಿ ಬ್ರಹ್ಮಗಂಟು 5.2, ಹತ್ತನೇ ಸ್ಥಾನದಲ್ಲಿ ಭಾರ್ಗವಿ LL.B 4.9 ರೇಟಿಂಗ್ ಪಡೆದುಕೊಂಡಿದೆ.

ಬಿಗ್ಬಾಸ್ ಗ್ರ್ಯಾಂಡ್ ಓಪನಿಂಗ್ ನಗರ ಪ್ರದೇಶದಲ್ಲಿ 11.3 ಟಿಆರ್ಪಿ ಹಾಗೂ ರೂರಲ್ ಪ್ರದೇಶದಲ್ಲಿ 12.4 ಟಿಆರ್ಪಿ ಪಡೆದುಕೊಂಡಿದ್ದು, ಪ್ರತಿ ದಿನದ ಸಂಚಿಕೆ 6.56 ಟಿಆರ್ಪಿ ಹಾಗೂ ವಾರಂತ್ಯದಲ್ಲಿ 8.2 ರೇಟಿಂಗ್ ಪಡೆದುಕೊಂಡಿದೆ. ಮಹಾನಟಿ 5.3, ನಾವು ನಮ್ಮವರು 3.1 ಹಾಗೂ ಕ್ವಾಟ್ಲೇ ಕಿಚನ್ ಗ್ರ್ಯಾಂಡ್ ಫಿನಾಲೆ 2.7 ಟಿಆರ್ಪಿ ಪಡೆದುಕೊಂಡಿವೆ.







