Ankola|ಗಂಗಾವಳಿ ಸೇತುವೆ ಮೇಲಿಲ್ಲ ಸರ್ಕಾರಿ ಬಸ್ ಸಂಚಾರದ ಭಾಗ್ಯ!
Ankola news :- ಎತ್ತಿಗೆ ಜ್ವರ ಬಂದರೇ ಎಮ್ಮೆಗೆ ಬರೆ ಎಳೆದರು ಎಂಬ ಗಾದೆಮಾತೊಂದಿದೆ.ಅದಕ್ಕೆ ಪೂರಕ ಎನ್ನುವಂತೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ (ankola)ತಾಲೂಕಿನ ವ್ಯಾಪ್ತಿಗೆ ಬರುವ ಗೋಕರ್ಣಕ್ಕೆ ಸಂಪರ್ಕಿಸುವ ಗಂಗಾವಳಿ ನದಿ ಗೆ ಕಟ್ಟಿರುವ ಮಂಜುಗುಣಿ-ಗಂಗಾವಳಿ ಸೇತುವೆ ಏಳೂವರೆ ವರ್ಷದ ನಂತರ ಅನೇಕ ಅಡ್ಡಿ ಆತಂಕ ಎದುರಿಸಿ ಕೊನೆಗೂ ಪೂರ್ಣಗೊಂಡಿದೆ.
ಆದರೇ ಈ ಪೂರ್ಣಗೊಂಡ ಸೇತುವೆಮೇಲೆ ಸಂಚರಿಸಲು ಎಲ್ಲಾ ವಾಹನಗಳಿಗೆ ಅವಕಾಶ ನೀಡಲಾಗಿದೆ.ಆದರೇ ಸರ್ಕಾರಿ ಬಸ್ ಗೆ ಮಾತ್ರ ಈ ಸೇತುವೆ ಮೇಲೆ ತೆರಳಲು ನಿರ್ಬಂಧವಿದೆ.
ಹೌದು ವಾಯುವ್ಯ ರಸ್ತೆ ಸಾರಿಗೆ ವಾಹನಗಳಿಗೆ ಈ ಭಾಗದಲ್ಲಿ ಸಂಚರಿಸಲು ಅನುಮತಿ ನೀಡಿಲ್ಲ. ಇದು ಏಕೆ ಎಂಬ ಪ್ರಶ್ನೆಗೆ ಅಧಿಕಾರಿಗಳ ಬಳಿ ಸೂಕ್ತ ಉತ್ತರವೇ ಇಲ್ಲ. ಸೇತುವೆ ಉದ್ಘಾಟನೆ ಆದ ನಂತರ ಬಿಡಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
Ankola |ಪುರೋಹಿತನನ್ನು ಮದುವೆಯಾಗಲು ಒಪ್ಪದ ಯುವತಿ|ಆತ್ಮಹತ್ಯೆಗೆ ಶರಣಾದ ಪವನ್
ಇನ್ನು ಈ ಸೇತುವೆಯನ್ನ ಕಳೆದ ತಿಂಗಳು ಅಂದರೆ ಕಳೆದ ವರ್ಷ ಡಿಸೆಂಬರ್ ನಲ್ಲಿ ಮುಖ್ಯಮಂತ್ರಿಗಳೇ ಉದ್ಘಾಟನೆ ಮಾಡಬೇಕಿತ್ತು.ಆದರೇ ಅದು ಆಗಲಿಲ್ಲ.ಹೀಗಾಗಿ ಉದ್ಘಾಟನೆ ಕಾಣದಿದ್ದಕ್ಕೆ ಈವರೆಗೂ ಸರ್ಕಾರಿ ಬಸ್ ಗಳ ಸಂಚಾರ ಪ್ರಾರಂಭ ಮಾಡಲಿಲ್ಲ.
ವಿದ್ಯಾರ್ಥಿಗಳು ಹಾಗೂ ಜನರಿಗೆ ಸಂಕಷ್ಟ
ಇನ್ನು ಜನರ ಉಪಯೋಗಕ್ಕೆ ಎಂದು2018 ರಲ್ಲಿ 28.71 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾರ್ಯ ಪ್ರಾರಂಭಿಸಿ
ಏಳೂವರೆ ವರ್ಷದ ನಂತರ ಅಂಕೋಲದಿಂದ ಗೋಕರ್ಣಕ್ಕೆ ಸಂಪರ್ಕಿಸುವ ಗಂಗಾವಳಿ-ಮಂಜುಗುಣಿ ಸಂಪರ್ಕಿಸುವ ಸೇತುವೆಯನ್ನು ಪೂರ್ಣ ಗೊಳಿಸಲಾಯಿತು.
ಈ ಭಾಗದ ಊರಿನವರು ಬಹಳಾ ಖುಷಿಯಲ್ಲಿ ಇದ್ದರು ಆದರೇ ಎಲ್ಲಿ ಅಂಕೋಲದಿಂದ ಗಂಗಾವಳಿ ಮೂಲಕ ಗೋಕರ್ಣಕ್ಕೆ ಸಂಚರಿಸಬೇಕಾದ ಬಸ್ ಸಂಚರಿಸದೇ ಸೇತುವೆ ವರೆಗೆ ಬಂದು ಜನರನ್ನು ಬಿಟ್ಟು ಮರಳಲು ಶರುವಾಯಿತೋ ಜನ ಇದೀಗ ಹಿಡಿ ಶಾಪ ಹಾಕುತಿದ್ದಾರೆ.
Ankola|ಬ್ಯಾಂಕ್ ನ ಶೌಚಾಲಯದ ಗೋಡೆ ಕೊರೆದು ದರೋಡೆಗೆ ವಿಫಲ ಯತ್ನ.
ಪ್ರತಿ ದಿನ ಅಂಕೋಲ ಭಾಗಕ್ಕೆ ನೂರಾರು ವಿದ್ಯಾರ್ಥಿಗಳು , ಗ್ರಾಮದ ಜನರು ತೆರಳುತ್ತಾರೆ. ಬಸ್ ಸೇತುವೆ ಬಳಿಗೆ ಮಾತ್ರ ಬರುತ್ತಿರುವುದರಿಂದ ಎರಡೂ ಭಾಗದ ಗ್ರಾಮದ ಜನ ಪ್ರತಿದಿನ ಸೇತುವೆಮೇಲೆ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ನಡೆದೇ ಹೋಗಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ. ಇನ್ನು ಮನವಿ ಮಾಡಿ ಸುಸ್ತಾಗಿರುವ ಜನ ಸೇತುವೆ ಇರದಿದ್ದರೇ ಹಿಂದಿನಂತೆ ಲಾಂಚ್ ನಲ್ಲೇ ತೆರಳಬಹುದಿತ್ತು ,ಆದರೇ ಸೇತುವೆ ಆಗಿದೆ ಆದರೂ ನಮ್ಮ ಸಮಸ್ಯೆ ಬಗೆಹರಿಯಲಿಲ್ಲ ಎಂದು ನೋವಿನ ನುಡಿಯನ್ನಾಡುತ್ತಾರೆ.

ಹಲವು ದಶಕದಿಂದ ಗಂಗಾವಳಿ-ಮಂಜುಗುಣಿಯ ಜನರು ಸೇತುವೆ ನಿರ್ಮಾಣಕ್ಕಾಗಿ ಹೋರಾಟ ಮಾಡಿದರು.ಇದೀಗ ಏಳೂವರೆ ವರ್ಷದ ನಂತರ ಸೇತುವೆ ನಿರ್ಮಾಣ ಕಂಡಿದೆ.ಆದರೇ ಸೇತುವೆ ಉದ್ಘಾಟನೆ ಕಾಣಲಿಲ್ಲ ಎಂದು ಇದೀಗ ಈ ಊರಿಗೆ ಸೇತುವೆ ಮೇಲೆ ಸರ್ಕಾರಿ ಬಸ್ ತೆರಳಲು ನಿರ್ಬಂಧ ವಿಧಿಸಿ ಜನರು ,ವಿದ್ಯಾರ್ಥಿಗಳು ಪ್ರತಿ ದಿನ ನರಕ ಕಾಣುವಂತಾಗಿದ್ದು ಯಾವಾಗ ಸರ್ಕಾರಿ ಬಸ್ ನ ಸಂಚಾರ ಭಾಗ್ಯ ದೊರೆಯುತ್ತದೆಯೋ ಎಂದು ಕಾದು ನೋಡುಚಂತಾಗಿದೆ.







