Gokarna|ಸಮುದ್ರಕ್ಕಿಳಿದು ಅಲೆಗೆ ಸಿಲುಕಿದ ಮೂರು ಜನ ಪ್ರವಾಸಿಗರ ರಕ್ಷಣೆ

Gokarna:-ಗೋಕರ್ಣ ಮೇನ್ ಬೀಚ್‌ನಲ್ಲಿ ಸಮುದ್ರ ಅಲೆಗೆ ಸಿಲುಕಿದ್ದ ಚಿತ್ರದುರ್ಗದ ಮೂವರು ಪ್ರವಾಸಿಗರನ್ನು ಲೈಫ್ ಗಾರ್ಡ್ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ರಕ್ಷಣೆ ಮಾಡಿದ್ದಾರೆ
AddText 01 26 02.48.43 AddText 01 26 02.48.43

Gokarna|ಸಮುದ್ರಕ್ಕಿಳಿದು ಅಲೆಗೆ ಸಿಲುಕಿದ ಮೂರು ಜನ ಪ್ರವಾಸಿಗರ ರಕ್ಷಣೆ

Gokarna/ಕಾರವಾರ :- ಸಮುದ್ರದಲ್ಲಿ ಮುಳುಗುತಿದ್ದ ಮೂರುಜನ ಪ್ರವಾಸಿಗರನ್ನು ಲೈಫ್ ಗಾರ್ಡ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta) ತಾಲೂಕಿನ ಗೋಕರ್ಣದ (gokarna)ಮೇನ್ ಬೀಚ್ ನಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆಯ  ಮನು (23), ಶಿವು (36), ಕಿರಣ್ (26) ರಕ್ಷಣೆಗೆ ಒಳಗಾದ ಪ್ರವಾಸಿಗರು.ಚಿತ್ರದುರ್ಗದಿಂದ ಗೋಕರ್ಣಕ್ಕೆ 21 ಜನ ಪ್ರವಾಸಕ್ಕೆ ಬಂದಿದ್ದರು.

gokarna-main-beach-lifeguard-rescue.
gokarna-main-beach-lifeguard-rescue.jpg

ಲೈಪ್ ಗಾರ್ಡ ಎಚ್ಚರಿಕೆ ನಡುವೆಯೇ ಸಮುದ್ರಕ್ಕಿಳಿದಿದ್ದ ಆರುಜನ ಪ್ರವಾಸಿಗರಲ್ಲಿಅಲೆಗಳ ಅಬ್ಬರಕ್ಕೆ ಮೂರುಜನ ಕೊಚ್ಚಿಹೋಗಿದ್ದರು. ಇದನ್ನು ಗಮನಿಸಿದ ಲೈಫ್ ಗಾರ್ಡಗಳಾದ  ಲೋಕೇಶ ಹರಿಕಂತ್ರ, ಶಿವಪ್ರಸಾದ್ ಅಂಬಿಗ, ರೋಷನ್ ಖಾರ್ವಿ,ಮೋಹನ ಅಂಬಿಗ ಎಂಬುವವರು ಮೂರು ಜನರ ರಕ್ಷಣೆ ಮಾಡಿದ್ದು,ಇವರಿಗೆ ಬೀಚ್ ಸೂಪರ್ವೈಸರ್ ರವಿ ನಾಯ್ಕ್, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಗೋಕರ್ಣ ಮೇನ್ ಬೀಚ್ ವಾಟರ್ ಸ್ಪೋರ್ಟ್ಸ್ ಸಿಬ್ಬಂದಿ  ದೀಪಕ್ ಗೌಡ  ಸಹಾಯ ಮಾಡಿದ್ದು ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

Gokarna| ಗೋಕರ್ಣದ ವಿಘ್ನ ನಿವಾರಕನಿಂದ ಡಿಕೆ ಗೆ ಸಿಕ್ತು ಬಲಭಾಗದಲ್ಲಿ ಪ್ರಸಾದ|ವಿಡಿಯೋ ನೋಡಿ

ಸಾಲು ಸಾಲು ರಜೆ ಹಿನ್ನಲೆಯಲ್ಲಿ ಪ್ರವಾಸಿಗ ದಂಡು ಉತ್ತರ ಕನ್ನಡ ಜಿಲ್ಲೆಯತ್ತ ಹರಿದು ಬರುತ್ತಿದೆ.ಕಡಲ ತೀರದಲ್ಲಿ ಮೋಜು ಮಸ್ತಿ ಮಾಡುವ ಪ್ರವಾಸಿಗರು ಸಮುದ್ರ ಭಾಗದಲ್ಲಿ ಲೈಫ್ ಗಾರ್ಡಗಳ ಎಚ್ಚರಿಕೆಯನ್ನು ಹಾಗೂ ಸೂಚನಾ ಫಲಕವನ್ನು ಕಡೆಗಣಿಸಿ ಸಮುದ್ರಕ್ಕಿಳಿದು ತೊಂದರೆಗೆ ಸಿಲುಕುತಿದ್ದಾರೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement