Gokarna| ಗೋಕರ್ಣದ ವಿಘ್ನ ನಿವಾರಕನಿಂದ ಡಿಕೆ ಗೆ ಸಿಕ್ತು ಬಲಭಾಗದಲ್ಲಿ ಪ್ರಸಾದ|ವಿಡಿಯೋ ನೋಡಿ.
ಗೋಕರ್ಣ ಗಣಪತಿ ದೇವಾಲಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಿಶೇಷ ಪೂಜೆ; ಬಲಭಾಗದಲ್ಲಿ ಪ್ರಸಾದ ವಿಡಿಯೋ ಇಲ್ಲಿದೆ:-
Gokarna news (20 december 2025):-ಗೋಕರ್ಣದ(gokarna) ಪ್ರಸಿದ್ಧ ಮಹಾಬಲೇಶ್ವರ ಗಣಪತಿ ದೇವಾಲಯದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದ ಗರ್ಭಗುಡಿಯಲ್ಲಿ ಡಿಕೆ ಶಿವಕುಮಾರ್(Dk .shivkumar) ಅವರು ಏಕಾಗ್ರತೆಯಿಂದ ಪೂಜೆ ನೆರವೇರಿಸಿದ್ದು, ಪೂಜೆಯ ವೇಳೆ ಅವರಿಗೆ ಬಲಭಾಗದಲ್ಲಿ ಪ್ರಸಾದ ದೊರೆತಿದೆ. ಈ ಘಟನೆ ಭಕ್ತರಲ್ಲಿ ವಿಶೇಷ ನಂಬಿಕೆ ಹಾಗೂ ಚರ್ಚೆಗೆ ಕಾರಣವಾಗಿದೆ.
Gokarna | ಬೆಂಕಿ ಅವಘಡ ಲಕ್ಷಾಂತರ ಮೌಲ್ಯದ ನಾಟ ಸಂಪೂರ್ಣ ನಾಶ.
ಪೂಜಾ ಕೈಂಕರ್ಯಗಳನ್ನು ದೇವಾಲಯದ ಅರ್ಚಕರು ಶಾಸ್ತ್ರೋಕ್ತವಾಗಿ ನೆರವೇರಿಸಿದರು. ಭಕ್ತಿಪೂರ್ಣ ವಾತಾವರಣದಲ್ಲಿ ನಡೆದ ಈ ಪೂಜೆಯಲ್ಲಿ ಡಿಕೆಶಿ ಗಣಪತಿ ದೇವರ ಆಶೀರ್ವಾದ ಬೇಡಿದರು.
ಗೋಕರ್ಣದ ಗಣಪತಿ ದೇವಾಲಯವು ನಂಬಿಕೆ ಹಾಗೂ ಐತಿಹಾಸಿಕ ಮಹತ್ವ ಹೊಂದಿರುವ ಕ್ಷೇತ್ರವಾಗಿದ್ದು, ರಾಜ್ಯದ ಪ್ರಮುಖ ನಾಯಕರು ಆಗಾಗ ಭೇಟಿ ನೀಡುವ ಪವಿತ್ರ ಸ್ಥಳವಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಅವರ ಈ ಭೇಟಿ ಧಾರ್ಮಿಕ ಹಾಗೂ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.
Gokarna| ಸಿಲೆಂಡರ್ ಸ್ಪೋಟ ಮನೆ ಸಂಪೂರ್ಣ ನಾಶ.
ಇನ್ನು ಪೂಜೆ ಸಲ್ಲಿಸಿ ಪ್ರಾರ್ಥನೆ ವೇಳೆ ಅವರಿಗೆ ಬಲಭಾಗದಲ್ಲಿ ಪ್ರಸಾದವಾಗಿದ್ದು ಅವರಿಗೆ ವದಗಿದ ವಿಘ್ನ ನಿವಾರಣೆ ಆಗುತ್ತೆ ಎನ್ನುವ ನಂಬಿಕ ಅಭಿಮಾನಿಗಳದ್ದು.ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
