Karwar|ಕಾರವಾರದ ಕಡಲ ತೀರದಲ್ಲಿ ತುಕ್ಕು ಹಿಡಿದ ಸ್ವರ್ಣಜಯಂತಿ ಎಕ್ಸ್ ಪ್ರಸ್ ರೈಲು.
ಕಾರವಾರ:- ಪ್ರವಾಸೋಧ್ಯಮ ಅಭಿವೃದ್ಧಿ ದೃಷ್ಟಿಯಲ್ಲಿ ಕಾರವಾರದ (karwar) ರವೀಂದ್ರನಾಥ ಕಡಲ ತೀರದಲ್ಲಿ 1999 ರಲ್ಲಿ ಪ್ರಾರಂಭವಾಗಿದ್ದ ಸ್ವರ್ಣಜಯಂತಿ ಎಕ್ಸ್ ಪ್ರಸ್ ಹೆಸರಿನ ಪುಟಾಣಿ ರೈಲು ಮೂಲೆಗುಂಪಾಗಿ ದಶಕಗಳೇ ಕಳೆದಿದ್ದು ಕಡಲ ತೀರದ ಶಡ್ ಒಂದರಲ್ಲಿ ತುಕ್ಕು ಹಿಡಿಯುತ್ತಿದ್ದು ಲಕ್ಷಾಂತರ ಮೌಲ್ಯದ ವಸ್ತುಗಳು ಉಪಯೋಗಕ್ಕೆ ಬಾರದಂತೆ ಪೊಲಾಗಿ ಬಿದ್ದಿದೆ.
ಏನಿದರ ವಿಶೇಷ.
ಕಾರವಾರದ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿ ದೃಷ್ಟಿಯಲ್ಲಿ ಕೋಟಿಗಟ್ಟಲೇ ಹಣ ವ್ಯಯಿಸಿ ಸ್ವರ್ಣ ಜಯಂತಿ ಎಕ್ಸ್ಪ್ರೆಸ್ ಹೆಸರಿನಲ್ಲಿ ಪುಟಾಣಿ ರೈಲನ್ನು ತರಲಾಗಿತ್ತು.
ಕಡಲ ತೀರದಲ್ಲಿ ಹಳಿಗಳನ್ನು ಅಳವಡಿಸಿ ಮಕ್ಕಳಿಗೋಸ್ಕರವೇ ಈ ರೈಲನ್ನು ಓಡಿಸಲಾಗುತಿತ್ತು. 1999 ರಿಂದ 2006 ರ ಅವಧಿಯಲ್ಲಿ ಇದು ಓಡಾಟ ನಡೆಸುತಿದ್ದು ಜಿಲ್ಲೆಯ ಪ್ರಮುಖ ಆಕರ್ಷಣೆ ಕೂಡ ಆಗಿತ್ತು.

ಈ ರೈಲನ್ನು ನೋಡಲು ಇಲ್ಲಿನ ಕಡಲ ತೀರದಲ್ಲಿ ರೈಲಿನಲ್ಲಿ ಸಂಚರಿಸಲು ಹೊರರಾಜ್ಯದಿಂದಲೂ ಕೂಡ ಬಂದ ಪ್ರವಾಸಿಗರು ರೈಲನ್ನು ಏರಿ ಕಡಲ ತಂಪು ಗಾಳಿಯ ಅನುಭವದ ಜೊತೆ ಕಡಲ ಸೌಂದರ್ಯ ಸವೆಯುತಿದ್ದರು.
ಸರಿಸುಮಾರು ಐದಾರು ವರ್ಷಗಳ ಕಾಲ ಚಿಣ್ಣರಿಗೆ ಮೋಜು ನೀಡಿದ್ದ ಪುಟಾಣಿ ರೈಲು, ಕಡಲ ತೀರದ ಸಮೀಪ ಇದ್ದ ಕಾರಣ ರೈಲಿನ ಟ್ರಾಕ್ ಕಡಲ್ಕೊರೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗುತಿತ್ತು.ಕೆಲವು ಸಮಯ ಸರಿಪಡಿಸುವ ಕಾರ್ಯ ನಡೆದರೂ ಹಣದ ಕೊರತೆ ,ಪ್ರವಾಸೋಧ್ಯಮದ ನಿರ್ಲಕ್ಷಪುನಃ ಅನುಷ್ಠಾನ ಮಾಡದೇ ಹಾಗೇ ಕಡಲ ತೀರದಲ್ಲಿ ಶೆಡ್ ನಿರ್ಮಿಸಿ ರೈಲ್ವೆ ಎಂಜಿನ್, ಬಿಡಿಭಾಗ ಇಡಲಾಗಿತ್ತು.

ಹೀಗೆ ಇಟ್ಟ ರೈಲಿನ ಇಂಜಿನ್ ಹಾಗೂ ಬೋಗಿಗಳು ದಶಕಗಳ ಕಾಲ ಶಡ್ ನಲ್ಲಿಯೇ ಉಳಿದು ಇದೀಗ ತುಕ್ಕು ಹಿಡಿಯುತ್ತಿದೆ. ಶಡ್ ನಲ್ಲಿ ಬೋಗಿಗಳು ಇದೀಗ ಹಾಳಾಗಿದೆ. ಇದರ ಕೆಲವು ಭಾಗಗಳು ಮಾಯವಾದರೇ ಇಂಜಿನ್ ಮಾತ್ರ ಗತಕಾಲದ ವೈಭವ ನೆನಪಿಸುತ್ತಾ ಹಾಗೆಯೇ ಉಳಿದಿದೆ.
Karwar|ಬೇಡ್ತಿ-ವರದಾ ನದಿ ಜೋಡಣೆ- ಯೋಜನೆ ಅನುಷ್ಟಾನಕ್ಕೆ ಶಿವರಾಮ್ ಹೆಬ್ಬಾರ್ ಕಾರಣ|ಸಚಿವ ಮಂಕಾಳು ವೈದ್ಯ ಏನಂದ್ರು?
2017 ರಲ್ಲಿ ಅಂದಿನ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಹಾಗೂ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ನ ಪುನಃ ಈ ಪುಟಾಣಿ ರೈಲಿಗೆ ಮರು ಜೀವ ನೀಡಲು ಮುಂದಾಗಿದ್ದರು. ಇಲ್ಲಿನ ಲಂಡನ್ ಬ್ರಿಜ್ನಿಂದ ದಿವೇಕರ ಕಾಲೇಜಿನ ವರೆಗೆ ಅಂದಾಜು 2 ಕಿಮೀ ಉದ್ದ ಕಡಲ ತೀರದ ಪಕ್ಕದ ಸಮೀಪ ಟ್ರಾಕ್ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಕಾರ್ಯಕ್ಕಾಗಿ 2 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿತ್ತು. ಪ್ರಾರಂಭಿಕ ಹಂತದಲ್ಲಿ 10 ಜನರು ಕುಳಿತುಕೊಳ್ಳಬಹುದಾದ 3 ರಿಂದ 4 ಬೋಗಿ ವ್ಯವಸ್ಥೆ ಮಾಡುವ ಉದ್ದೇಶವಿತ್ತು. ಆದರೆ ಕಾಲಾನಂತರ ಈ ಪುಟಾಣಿ ರೈಲಿನ ಯೋಜನೆ ಮರು ಅನುಷ್ಠಾನ ಪ್ರಸ್ತಾವನೆ ಕಡತಗಳಲ್ಲಿಯೇ ಉಳಿದಿತ್ತು.

ಇದಾದ ನಂತರ ಈ ರೈಲನ್ನು ಜನರ ದರ್ಸನಕ್ಕೆ ತರುವ ಪ್ರಯತ್ನ ಮಾಡಲಾಗಿತ್ತಾದರೂ ಅದು ಸಾಧ್ಯವೇ ಆಗಿಲ್ಲ. ಇನ್ನು ರೈಲನ್ನು ಇಟ್ಟ ಜಾಗದಲ್ಲಿ ಯುದ್ಧ ವಿಮಾನ ವಸ್ತು ಸಂಗ್ರಹಾಲಯ ವನ್ನು ಇದೀಗ ನಿರ್ಮಾಣ ಮಾಡಲಾಗಿದೆ. ಜೊತೆಗೆ ಪಕ್ಕದಲ್ಲೇ ವಾರ್ ಶಿಪ್ ಸಹ ಇದ್ದು ಪ್ರತಿ ದಿನ ನೂರಾರು ಪ್ರವಾಸಿಗರು ಈ ಸಂಗ್ರಹಾಲಯಕ್ಕೆ ಬಂದು ಭೇಟಿನೀಡಿ ಹೋಗುತಿದ್ದಾರೆ.
Kumta news|11 ವಿವಿಧ ಪ್ರಕರಣ-ಬ್ಯಾಂಕ್ ಗೆ ಕನ್ನ ಹಾಕಿದ ಅಂತರ್ ಜಿಲ್ಲಾ ಕಳ್ಳನ ಬಂಧನ.
ಇದರಿಂದ ಜಿಲ್ಲಾಡಳಿತದ ಆದಾಯ ಹೆಚ್ಚಾಗಿದೆ. ಹೀಗಿರುವಾಗ ಇದೇ ಸಂಗ್ರಹಾಲಯದ ಆವರಣದ ಶಡ್ ನಲ್ಲಿ ಇರುವ ಈ ರೈಲಿಗೆ ಕಾಯಕಲ್ಪವಿಲ್ಲದೇ ಪಾಳು ಬಿದ್ದಿದೆ.
ಜಿಲ್ಲಾಡಳಿತ ಕೊನೆ ಪಕ್ಷ ಈ ರೈಲನ್ನು ಓಡಿಸಲಾಗದಿದ್ದರೂ ಕೊನೆ ಪಕ್ಷ ಇದರ ನಿರ್ವಹಣೆ ಮಾಡಿ ಜನರ ದರ್ಶನಕ್ಕೆ ಇಟ್ಟಲ್ಲಿ ಐತಿಹಾಸಿಕ ನೆನಪು ಮರುಕಳಿಸುವಂತೆ ಮಾಡುವ ಈ ರೈಲು ಆದಾಯವನ್ನು ಸಹ ತರುತ್ತದೆ.
ಆದರೇ ಶಡ್ ನ ಒಳಗೆ ಪಾಳು ಬಿದ್ದಿದ್ದು ಬೋಗಿಗಳ ಕೆಲವು ವಸ್ತುಗಳು ಹಾಳಾದರೇ ಇನ್ನು ಕೆಲವು ವಸ್ತುಗಳು ಮಾಯವಾಗಿದೆ.
Ankola|ದೇಶದ ಗಡಿಕಾಯುತ್ತಿವೆ ಅಂಕೋಲದ 40 ಶ್ವಾನಗಳು|ಇದು ಸರ್ಕಾರಿಅಧಿಕಾರಿಯ ಯಶೋಗಾಥೆ
ಹೀಗಾಗಿ ಜನರ ಆಕರ್ಷಣೆ ಕೇಂದ್ರವಾಗಿರುವ ಈ ರೈಲನ್ನು ಕೊನೆ ಪಕ್ಷ ಜನರ ವೀಕ್ಷಣೆಗೆ ತೆರೆದುಕೊಳ್ಳಬೇಕು ಎಂಬುದು ಕಾರವಾರಿಗರ ಆಶಯ.







