Kumta news|11 ವಿವಿಧ ಪ್ರಕರಣ-ಬ್ಯಾಂಕ್ ಗೆ ಕನ್ನ ಹಾಕಿದ ಅಂತರ್ ಜಿಲ್ಲಾ ಕಳ್ಳನ ಬಂಧನ.
ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta)ಪಟ್ಟಣದ ಸಹಕಾರಿ ಸಂಘವೊಂದರ ಬೀಗ ಮುರಿದು ಕಳ್ಳತನ ಮಾಡಿದ್ದಲ್ಲದೇ, ಸಾಕ್ಷ್ಯ ನಾಶಪಡಿಸಲು ಸಿಸಿಟಿವಿ ಡಿವಿಆರ್ನ್ನೇ (DVR) ಹೊತ್ತೊಯ್ದಿದ್ದ ಕುಖ್ಯಾತ ಅಂತರ ಜಿಲ್ಲಾ ಕಳ್ಳನೊಬ್ಬನನ್ನು ಪ್ರಕರಣ ದಾಖಲಾದ 24 ಗಂಟೆಯಲ್ಲೇ ಕುಮಟಾ ಪೊಲೀಸರು ಬಂಧಿಸಿದ್ದಾರೆ.
ದಾಂಡೇಲಿ ಮೂಲದ ಮುಜಾಫರ್ ಮಹಮ್ಮದ ಸಾಬ ಶೇಖ್ (27) ಬಂಧಿತ ಆರೋಪಿ. ಈತ ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.
Kumta|ದೊಣ್ಣೆ ರಂಪಾಟ-ಕುಮಟಾದ ಪುಡಿರೌಡಿ ಮಹೇಶನಿಗೆ 12 ದಿನ ನ್ಯಾಯಾಂಗ ಬಂಧನ
ಜ. 26 ರಂದು ಮಧ್ಯರಾತ್ರಿ ಕುಮಟಾದ ಹೊಸ ಬಸ್ ನಿಲ್ದಾಣದ ಸಮೀಪವಿರುವ ಸುಲಭ ಸೌಹಾರ್ದ ಸಹಕಾರಿ ಸಂಘ ಕ್ಕೆ ನುಗ್ಗಿದ್ದ ಕಳ್ಳರು, ಕೆಡಿಸಿಸಿ ಹಾಗೂ ಹೆಚ್ಡಿಎಫ್ಸಿ ಬ್ಯಾಂಕ್ ಚೆಕ್ಗಳು ಮತ್ತು 40 ಸಾವಿರ ರೂ. ಮೌಲ್ಯದ ಸ್ಕೂಟರ್ ಕದ್ದಿದ್ದರು. ಪೊಲೀಸರಿಗೆ ಸಿಗಬಾರದೆಂದು ಸೊಸೈಟಿಯಲ್ಲಿದ್ದ ಸಿಸಿಟಿವಿ ಡಿವಿಆರ್ ಅನ್ನು ಸಹ ಕದ್ದೊಯ್ದಿದ್ದರು. ಈ ಬಗ್ಗೆ ಸಂಘದ ಅಧ್ಯಕ್ಷರಾದ ದಿವಾಕರ ನಾಯ್ಕ ಅವರು ಜ. 29 ರಂದು ದೂರು ನೀಡಿದ್ದರು.
Kumta|ಸೀಬರ್ಡ ಬಸ್ಸ್ ದುರಂತ ಕುಮಟಾದ ವಿಜಯ್ ಸೇಫ್ |ಮೇಘರಾಜ್ ನಾಪತ್ತೆ
ದೂರು ದಾಖಲಾಗುತ್ತಿದ್ದಂತೆ ಎಚ್ಚೆತ್ತ ಸಿಪಿಐ ಯೋಗೇಶ ಕೆ.ಎಂ. ಅವರ ಮಾರ್ಗದರ್ಶನದಲ್ಲಿ, ಪಿಎಸ್ಐ ಸಾವಿತ್ರಿ ನಾಯ್ಕ ನೇತೃತ್ವದ ವಿಶೇಷ ತಂಡವು ಕ್ಷಿಪ್ರ ಕಾರ್ಯಾಚರಣೆ ನಡೆಸಿದೆ. ಆರೋಪಿಯ ಜಾಡು ಹಿಡಿದು, ಆತನನ್ನು ಬಂಧಿಸುವಲ್ಲಿ ಹಾಗೂ ಕದ್ದ ಸ್ಕೂಟರ್ ಮತ್ತು ಚೆಕ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಮುಜಾಫರ್ ಸಾಮಾನ್ಯ ಕಳ್ಳನಲ್ಲ. ಈತ ಹಳಿಯಾಳ, ದಾಂಡೇಲಿ, ಕುಮಟಾ ಹಾಗೂ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರೋಬ್ಬರಿ 11 ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿದೆ.
ಎಸ್ಪಿ ದೀಪನ್ ಎಂ.ಎನ್, ಹೆಚ್ಚುವರಿ ಎಸ್ಪಿಯವರಾದ ಕೃಷ್ಣಮೂರ್ತಿ, ಜಗದೀಶ ನಾಯ್ಕ ಹಾಗೂ ಭಟ್ಕಳ ಡಿವೈಎಸ್ಪಿ ಮಹೇಶ ಎಂ.ಕೆ ಅವರು ಪ್ರಕರಣ ಬೇಧಿಸಿದ ಕುಮಟಾ ಪೊಲೀಸರ ತಂಡವನ್ನು ಅಭಿನಂದಿಸಿದ್ದಾರೆ.
ಪಿಎಸ್ಐ ಸಾವಿತ್ರಿ ನಾಯ್ಕ ಅವರೊಂದಿಗೆ ಸಿಬ್ಬಂದಿಗಳಾದ ಗಣೇಶ ಜಿ. ನಾಯ್ಕ, ದಯಾನಂದ ನಾಯ್ಕ, ಕಿರಣ ನಾಯ್ಕ ಹಾಗೂ ಪ್ರದೀಪ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.







