Kumta|ಸೀಬರ್ಡ ಬಸ್ಸ್ ದುರಂತ ಕುಮಟಾದ ವಿಜಯ್ ಸೇಫ್ |ಮೇಘರಾಜ್ ನಾಪತ್ತೆ

Kumta news:-Kumta-bound passenger Vijay Bhandari is reported safe after the Seabird bus accident near Gorlattu in Chitradurga, while fellow passenger Megharaj remains untraceable
AddText 12 25 02.09.57 AddText 12 25 02.09.57

Kumta|ಸೀಬರ್ಡ ಬಸ್ಸ್ ದುರಂತ ಕುಮಟಾದ ವಿಜಯ್ ಸೇಫ್ |ಮೇಘರಾಜ್ ನಾಪತ್ತೆ

 

Kumta news:-ಚಿತ್ರದುರ್ಗ ಜಿಲ್ಲೆಯ ಗೊರ್ಲತ್ತು ಕ್ರಾಸ್ ಬಳಿ ನಡೆದ ಸೀಬರ್ಡ್ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಯಾಣಿಕರ ಕುರಿತು ಗೊಂದಲ ಮುಂದುವರಿದಿದೆ.

Advertisement

Bhatkal|ಸಂಪರ್ಕಕ್ಕೆ ಸಿಗದ ಶಿರಾಲಿಯ ರಶ್ಮಿ | ಕುಟುಂಬದಲ್ಲೂ ದಂದ್ವ!ಏನಂದ್ರು ಕುಟುಂಬದವರು?

ಕುಮಟಾ ಇಳಿಯಲು ಬಸ್‌ನಲ್ಲಿ 9U ಸೀಟ್‌ನಲ್ಲಿ ಪ್ರಯಾಣಿಸುತ್ತಿದ್ದ ವಿಜಯ್ ಭಂಡಾರಿ ಸುರಕ್ಷಿತವಾಗಿರುವುದು ಖಚಿತವಾಗಿದೆ. ಅಪಘಾತದ ಬಳಿಕ ವಿಜಯ್ ಬೇರೆ ವ್ಯಕ್ತಿಯ ಮೊಬೈಲ್ ನಂಬರ್‌ನಿಂದ ತಮ್ಮ ಗೆಳೆಯರಿಗೆ ಕರೆ ಮಾಡಿ, ತಾವು ಸಂಪೂರ್ಣವಾಗಿ ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾನೆ.

Seaberd bus fire chitradurga
ಬಸ್ ನ ಬೆಂಕಿ ನಂದಿಸುತ್ತಿರುವುದು

ಅಲ್ಲದೇ, ತಾವು ಬೇರೆ ವಾಹನದಲ್ಲಿ ಊರಿಗೆ ಮರಳುತ್ತಿರುವುದಾಗಿ ಕೂಡ ಮಾಹಿತಿ ನೀಡಿದ್ದಾರೆ. ವಿಜಯ್ ಭಂಡಾರಿಯ ಸುರಕ್ಷಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗೆಳೆಯರು ನಿಟ್ಟುಸಿರು ಬಿಟ್ಟಿದ್ದಾರೆ.

Kumta| ಬೇರೊಬ್ಬಳ ಸ್ನೇಹ ,ಮಗನಿಗೆ ಕೂಡಿಹಾಕಿ ಚಿತ್ರಹಿಂಸೆ ನೀಡಿದ ಪಾಪಿ ತಂದೆ

ಆದರೆ, ಇದೇ ಬಸ್‌ನಲ್ಲಿ ಕುಮಟಾ ಇಳಿಯಲು ಡ್ರೈವರ್ ಹಿಂಭಾಗದ 1U ಸೀಟ್‌ನಲ್ಲಿ ಪ್ರಯಾಣಿಸುತ್ತಿದ್ದ ಮೇಘರಾಜ್ ಅವರ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಅಪಘಾತದ ಬಳಿಕ ಮೇಘರಾಜ್ ಸಂಪರ್ಕಕ್ಕೆ ಸಿಗದೇ ಇದ್ದು, ಕುಟುಂಬದಲ್ಲಿ ಆತಂಕ ಮುಂದುವರಿದಿದೆ.

Kumta| ನಿಯಮ ಮೀರಿ ಸಾಲ ವಸೂಲಿಗೆ ಇಳಿದ ಬ್ಯಾಂಕ್ ಗೆ ಪಾಠ ಕಲಿಸಿದ ಖ್ಯಾತ ವಕೀಲ ಪ್ರಶಾಂತ್ ನಾಯ್ಕ ಬೆಟಕುಳಿ.

ಪೊಲೀಸರನ್ನು ಕುಟುಂಬಸ್ಥರು ಇನ್ನೂ ಅಧಿಕೃತವಾಗಿ ಸಂಪರ್ಕಿಸದ ಕಾರಣ, ಕುಮಟಾ ಪೊಲೀಸ್ ಠಾಣೆಯಲ್ಲೂ ಮೇಘರಾಜ್ ಕುರಿತು ಯಾವುದೇ ದೃಢ ಮಾಹಿತಿ ಲಭ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಸೀಬರ್ಡ್ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಣಿಕರ ಗುರುತು, ಸ್ಥಿತಿಗತಿ ಹಾಗೂ ಪತ್ತೆ ಕಾರ್ಯ ಇನ್ನೂ ಮುಂದುವರಿದಿದ್ದು, ಸ್ಪಷ್ಟ ಮಾಹಿತಿ ಹೊರಬರಬೇಕಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement