Karwar|ಸಂಚಾರ ನಿಯಮ ಕಾಪಾಡಲು ಇಲ್ಲಾ ಟ್ರಾಫಿಕ್ ಪೊಲೀಸ್ |ನಗರದಲ್ಲಿ ಬೇಕಾಬಿಟ್ಟಿ ವಾಹನ ನಿಲುಗಡೆಗಿಲ್ಲ ತಹಬಂದಿ
ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಕೇಂದ್ರ ಕಾರವಾರದಲ್ಲಿ (karwar)ಸಂಚಾರ ನಿಯಮ ಕಠಿಣ ಜಾರಿಗೆ ಮಾಡಲು ಕಾರವಾರದ ಸಂಚಾರಿ ಠಾಣೆಯಲ್ಲಿ ದೊಡ್ಡ ಮಟ್ಟದ ಸಿಬ್ಬಂದಿ ಕೊರತೆ ಕಾಣುತ್ತಿದ್ದು ಇದರ ಪ್ರತಿಫಲ ನಗರದಲ್ಲಿ ವಾಹನ ಸವಾರರು ಸಂಚಾರ ನಿಯಮ ಪಾಲಿಸದೇ ಬೇಕಾಬಿಟ್ಟಿ ಯಾಗಿ ನಡೆದುಕೊಳ್ಳುತಿದ್ದಾರೆ.
ಕಾರವಾರ ನಗರದಲ್ಲಿ ನಿಗದಿ ಮಾಡಿದ ವಾಹನ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನ ನಿಲ್ಲಿಸದ ಸವಾರರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗುತಿದ್ದು ಇದರಿಂದ ಸಂಚಾರ ಸಮಸ್ಯೆ ಜೊತೆ ಅಪಘಾತಗಳು ಸಹ ಆಗುತ್ತಿದೆ.

ಕೆಲವು ಸವಾರರು ನಡು ರಸ್ತೆಯಲ್ಲೇ ಬೈಕ್ ನಿಲ್ಲಿಸಿ ತಮ್ಮ ಕೆಲಸಕ್ಕೆ ಹೋದರೇ ಇನ್ನು ಕೆಲವು ವಾಹನ ಸವಾರರು ಕಾರು ನಿಲ್ಲಿಸುವ ಜಾಗದಲ್ಲಿ ಬೈಕ್ ನಿಲ್ಲಿಸಿದ್ರೆ,ಬೈಕ್ ನಿಲ್ಲಿಸುವ ಜಾಗದಲ್ಲಿ ಕಾರ್ ನನ್ನು ನಿಲ್ಲಿಸುತಿದ್ದಾರೆ. ಇನ್ನು ಹಲವು ಗೋವಾ ನೊಂದಣಿ ಮಳವಾಹನಗಳು ಕಾರವಾರದಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಇತರ ಸವಾರರಿಗೂ ತೊಂದರೆ ತರುತಿದ್ದಾರೆ.
ಏಕ ಮುಖ ಸಂಚಾರ ವಿರುವ ಜಾಗದಲ್ಲಿ ವಾಹನ ನುಗ್ಗಿಸುವುದು, ಮದ್ಯ ಸೇವಿಸಿ ವಾಹನ ಸಂಚಾರ ಮಾಡುವುದು ಸಾಮಾನ್ಯವಾಗಿದ್ರೆ ಕಾಲೇಜು ವಿದ್ಯಾರ್ಥಿಗಳು ಸಹ ಹೆಲ್ಮೆಟ್ ಧರಿಸದೇ ವೇಗವಾಗಿ ವಾಹನ ಚಲಾಯಿಸುವುದು ಸರ್ವೆ ಸಾಮಾನ್ಯವಾಗಿದೆ.

ಆದರೇ ಇವುಗಳನ್ನ ತಹಬದಿಗೆ ತರಲು ಸಂಚಾರಿ ಪೊಲೀಸರಿಗೆ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ವಾಹನ ಸಂದಣಿ ಇರುವ ಹಲವು ಭಾಗದಲ್ಲಿ ಟ್ರಾಫಿಕ್ ಪೊಲೀಸರು ಇರುವುದೇ ಇಲ್ಲ. ಇನ್ನು ಕೆಲವು ಭಾಗದಲ್ಲಿ ಎಚ್ಚರಿಕಾ ಫಲಕಗಳು ಇಲ್ಲ. ಇನ್ನು ರಸ್ತೆ ಕಿರಿದಾಗಿದ್ದು ವಾಹನ ಸವಾರರು ರಸ್ತೆಯ ಎರಡು ಭಾಗದಲ್ಲೂ ಪಾರ್ಕಿಂಗ್ ಮಾಡುತ್ತಿರುವುದರಿಂದ ಆಗಾಗ ಟ್ರಾಫಿಕ್ ,ಸಣ್ಣಪುಟ್ಟ ಅಪಘಾತ ಸಂಭವಿಸುತ್ತಿದೆ.
ಟ್ರಾಫಿಕ್ ಠಾಣೆಯಲ್ಲಿ ಕಾಲಿ ಕಾಲಿ ಹುದ್ದೆ!
ಇನ್ನು ಟ್ರಾಫಿಕ್ ನಿಯಮ ಜಾರಿಗೆ ತರಬೇಕಾದ ಸಂಚಾರಿ ಠಾಣೆಯಲ್ಲಿ ದೊಡ್ಡ ಮಟ್ಟದ ಸಿಬ್ಬಂದಿ ಕೊರತೆಗಳಿವೆ.
ಕಾರವಾರ ನಗರ ಸಂಚಾರಿ ಠಾಣೆಯಲ್ಲಿ ಮಂಜೂರಿರುವ 27 ಪಿ.ಸಿ ಹುದ್ದೆಯಲ್ಲಿ ಕೇವಲ 13 ಜನ ಪಿ.ಸಿಗಳು ಕಾರ್ಯ ನಿರ್ವಹಿಸುತಿದ್ದು 14 ಪಿಸಿಗಳ ಹುದ್ದೆ ಕಾಲಿ ಉಳಿದಿದೆ.
Karwar|ಕಾರವಾರದ ಕಡಲ ತೀರದಲ್ಲಿ ತುಕ್ಕು ಹಿಡಿದ ಸ್ವರ್ಣಜಯಂತಿ ಎಕ್ಸ್ ಪ್ರಸ್ ರೈಲು
ಹೆಚ್.ಸಿ ಹುದ್ದೆಯಲ್ಲಿ ಮಂಜೂರಿರುವ ಹುದ್ದೆಯಲ್ಲಿ ಒಟ್ಟು 10 ಕ್ಕೆ 10 ಜನ ಹೆಚ್.ಸಿ ಸಿಬ್ಬಂದಿ ಇದ್ದಾರೆ.ಎ.ಎಸ್.ಐ ಹುದ್ದೆಯಲ್ಲಿ ಮಂಜೂರಿರುವ ನಾಲ್ಕು ಹುದ್ದೆಯಲ್ಲಿ ನಾಲ್ಕು ಜನರಿದ್ದಾರೆ. ಪಿ.ಎಸ್.ಐ ಹುದ್ದೆಯಲ್ಲಿ ಮಂಜೂರಿರುವ ಎರಡು ಹುದ್ದೆಗಳಲ್ಲಿ ಓರ್ವ ಪಿ.ಎಸ್.ಐ ಮಾತ್ರ ಕಾರ್ಯನಿರ್ವಹಿಸುತಿದ್ದಾರೆ.
Karwar|ಕಾಳಿ ನದಿಯ ಕಾಳಿ ದೇವಿ ಜಾತ್ರೆ| ನಿಂಬೆಹಣ್ಣಿನ ಹರಕೆ ಏನಿದು ವಿಶೇಷ
ಇನ್ನು ಸಂಚಾರ ನಿಯಮವನ್ನು ಸಮರ್ಪಕವಾಗಿ ಇರಲು ನೋಡಿಕೊಳ್ಳುವ ಪಿ.ಸಿ ಹುದ್ದೆಗಳೇ ಕಾಲಿ ಇರುವುದರಿಂದ ತಪ್ಪು ಮಾಡುವವರಿಗೆ ಎಚ್ಚರಿಕೆ ಕೊಡಲು ಆಗದ ಪರಿಸ್ಥಿತಿ ಸಂಚಾರಿ ಠಾಣೆಯದ್ದು.
ಇನ್ನು ಇತ್ತೀಚಿನ ವರ್ಷದಲ್ಲಿ ಕಾರವಾರದ ಜನಸಂಖ್ಯೆ ನೌಕಾನೆಲೆ ಹಾಗೂ ಇತರ ಉದ್ಯಮಗಳು ಬಂದ ಕಾರಣ ಹೆಚ್ಚಾಗಿದೆ. ಜೊತೆಗೆ ರಸ್ತೆ ಸಂಚಾರ ಕೂಡ ಹಿಂದಿಗಿಂತ ದುಪ್ಪಟ್ಟಾಗಿದೆ. ಇನ್ನು ಕಮ್ಮಿ ಸಂಖ್ಯೆಯಲ್ಲಿ ಇರುವ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಹೆಚ್ಚಿನ ಒತ್ತಡ ಕೆಲಸಗಳು ಹೆಚ್ಚಾಗಿವೆ. ಹೀಗಿರುವಾಗ ಪ್ರಾದೇಶಿಕ ಸಾರಿಗೆ ಇಲಾಖೆ ಆರ್.ಟಿ.ಓ (RTO) ಅಂಕಿ ಅಂಶಗಳ ಪ್ರಕಾರ ಹೋದರೇ ಕಾರವಾರದಲ್ಲಿ ದ್ವಿಚಕ್ರ ವಾಹನಗಳು 62614 ಇದ್ದು ,ನಾಲ್ಕು ಚಕ್ರದ ವಾಹನ(ಕಾರು,ಚೀಪ್ ,ಓಮ್ಮಿ,ಬಸ್ಸು,ಟ್ರಾಕ್ಟರ್ ,ಟೆಲ್ಲರ್ಸ)5953 ,ಸರಕು ವಾಹನಗಳು 2897 ,ಟ್ಯಾಕ್ಸಿಗಳು 996, ಟ್ಯಾಕ್ಸಿ ಕ್ಯಾಬ್ 287,
ಇತರೆ ಕ್ಯಾಬ್ 15, ಮೂರು ಚಕ್ರದ ವಾಹನ(ಆಟೋ) 1923, ನಾಲ್ಕರಿಂದ ಆರು ಆಸನದ ವಾಹನಗಳು 25 ,ಕಂಪನಿಗಳಿಗೆ ಕ್ರಯದಲ್ಲಿ ಬಿಟ್ಟ ಹಾಗೂ ಇತರೆ ಬಳಕೆ ಬಸ್ಸುಗಳು 127 , ನಿರ್ಮಾಣ ಸಾಮಗ್ರಿ ಸಾರಿಗೆ ವಾಹನಗಳು 149 ವಿದ್ಯಾ ಸಂಸ್ಥೆಯ ವಾಹನ 10, ಇತರೆ ಬಳಕೆ ಬಸ್ಸುಗಳು 14 ಇವೆ. ಇವು ಆರ್.ಟಿ.ಓ ಇಲಾಖೆಯ 2024 ರ ನೊಂದಣಿ ಅಂಕಿಅಂಶಗಳಾಗಿವೆ.ಇದನ್ನು ಹೊರತುಪಡಿಸಿ ಇತರೆ ಭಾಗದಲ್ಲಿ ನೊಂದಣಿ , ಗೋವಾ ನೊಂದಣಿ ವಾಹನಗಳು ಹೆಚ್ಚಿನದ್ದು ಇವೆ.
ಗೋವಾ ನೊಂದಣಿ ವಾಹನದ್ದೇ ದರ್ಬಾರ್!
ಕಾರವಾರ ನಗರದಲ್ಲಿ ಗೋವಾ ನೊಂದಣಿ ವಾಹನಗಳದ್ದು ಸಿಂಹಪಾಲಿದೆ. ಬೈಕ್ ,ಕಾರುಗಳು ಹೆಚ್ಚಿನವು ಗೋವಾ ನೊಂದಣಿ ಹೊಂದಿದವು ಕೂಡ ಇದೆ. ಇನ್ನು ಬಾಡಿಗೆ ವಾಹನಗಳು ಸಹ ( rent cars) ಸಹ ಇದ್ದು ಕರ್ನಾಟಕದ ತೆರಿಗೆ ವಂಚಿಸುತ್ತಿವೆ.
Karwar|ಕಾಳಿ ನದಿಯ ಕಾಳಿ ದೇವಿ ಜಾತ್ರೆ| ನಿಂಬೆಹಣ್ಣಿನ ಹರಕೆ ಏನಿದು ವಿಶೇಷ
ಇವುಗಳ ಬಗ್ಗೆ ಆರ್.ಟಿ.ಓ ಅಧಿಕಾರಿಗಳು ನೋಡಿ ದಂಡ ಹಾಕಬೇಕು .ಆದರೇ ಸ್ಥಳೀಯ ಇಚ್ಚಾಶಕ್ತಿಗಳ ಮುಂದೆ ಆರ್.ಟಿ.ಓ ಅಧಿಕಾರಿಗಳು ಸಹ ದಂಡ ,ತೆರಿಗೆ ವಸೂಲಿ ಮಾಡುವ ಕೆಲಸ ಮಾಡುತ್ತಿಲ್ಲ.
ಸಂಚಾರಿ ಪೊಲೀಸರಿಗೆ ಗೋವಾ ವಾಹನಗಳದ್ದೇ ತಲೆನೋವು.
ಇನ್ನು ಗೋವಾ ನೊಂದಣಿ ಕಾರುಗಳು,ಬೈಕ್ ಗಳು ಸಂಚಾರ ನಿಯಮ ಪಾಲಿಸದೇ ಕ್ಯಾಮರಾದಲ್ಲಿ ಟ್ರಾಕ್ ಆದಾಗ ಇವುಗಳ ದಂಡ ವಸೂಲಿ ಸಹ ಕಷ್ಟಕರವಾಗಿದೆ. ಇನ್ನು ಅಪಘಾತ ಮಾಡಿ ಹೋದರೇ ಗೋವಾ ವಾಹನಗಳನ್ನು ಟ್ರಾಕ್ ಮಾಡಲು ಸಾಧ್ಯವಾಗುತ್ತಿಲ್ಲ. ಕಾರಣ ಗೋವಾದಲ್ಲಿ ನೊಂದಣಿಯಾಗುವ ಕಾರವಾರದಲ್ಲಿ ವಾಸವಿರುವ ವಾಹನ ಮಾಲೀಕರು ಗೋವಾದ ನಕಲಿ ದಾಖಲೆ ನೀಡಿ ರಿಜಿಸ್ಟರ್ ಮಾಡಿರುತ್ತಾರೆ. ದಾಖಲೆ ನೀಡಿದ ವಿಳಾಸದಲ್ಲಿ ವಾಹನ ಮಾಲೀಕರು ಇರುವುದೇ ಇಲ್ಲ. ಹೀಗಿರುವ ಪರಿಸ್ಥಿತಿಯಲ್ಲಿ ಸಂಚಾರಿ ಠಾಣೆ ಪೊಲೀಸರು ತಮ್ಮ ಕರ್ತವ್ಯ ನಿರ್ವಹಣೆ ಮಾಡಲು ಕಷ್ಟ ಪಡಬೇಕಾಗಿದೆ.







