Karwar|ಕಾಳಿ ನದಿಯ ಕಾಳಿ ದೇವಿ ಜಾತ್ರೆ| ನಿಂಬೆಹಣ್ಣಿನ ಹರಕೆ ಏನಿದು ವಿಶೇಷ

Karwar news 01 January 2026 :-ಭಾರತೀಯರಾದ ನಾವು ನದಿಗಳನ್ನು ದೇವರಸ್ಥಾನದಲ್ಲಿ ಇಟ್ಟು ಪೂಜೆ ಗೈಯುತ್ತೇವೆ. ಜೀವನದಿ ಕಾವೇರಿಗೆ ಪ್ರತಿವರ್ಷ ತೀರ್ಥ ಉದ್ಭವವಾದ ದಿನ ಪೂಜೆ ನಡೆಸಿದರೇ , ರಾಜ್ಯಕ್ಕೆ ಬೆಳಕು ನೀಡಿ ,ಲಕ್ಷಾಂತರ ಜನರ ಜೀವ ನದಿಯಾದ ಕಾಳಿ ನದಿಗೆ ಕರಾವಳಿಗರು ಪ್ರತಿ ವರ್ಷ ಜನವರಿ ತಿಂಗಳಲ್ಲಿ ಪೂಜೆ ಸಲ್ಲಿಸಿ ಸಂವೃದ್ಧಿಯ ಪ್ರಾರ್ಥನೆ ಸಲ್ಲಿಸುತ್ತಾರೆ.

ಕಾರವಾರನಗರದ(karwar) ಕಾಳಿ ನದಿ ನಡುಗಡ್ಡೆಯಲ್ಲಿ ಗುರುವಾರ ಕಾಳಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ.
ನಗರದ ಕೊಡಿಭಾಗದಿಂದ ಎರಡು ಕಿಲೋಮೀಟರ್ ದೂರದ ವಿಶಾಲ ದ್ವೀಪದಲ್ಲಿರುವ ಕಾಳಿ ದೇವಿಯನ್ನು ಅನಾದಿಕಾಲದಿಂದಲೂ ಪೂಜಿಸಲಾಗುತ್ತಿದೆ.
ಪ್ರತಿ ವರ್ಷದಂತೆ ಈ ಬಾರಿಯು ಮೂರು ದಿನಗಳ ಜಾತ್ರೆಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ದೇವಿಯ ದರ್ಶನ ಪಡೆಯಲು ನಂದನಗದ್ದಾದ ಸಂತೋಷಿ ಮಾತಾ ದೇವಸ್ಥಾನ ಬಳಿಯ ಕಾಳಿನದಿಯ ದಡದಿಂದ ದೋಣಿಯ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ವಿಶಿಷ್ಠ ಅನುಭವ ಪಡೆಯುವುದಕ್ಕಾಗಿಯೇ ಸಾಕಷ್ಟು ಜನರು ಜಿಲ್ಲೆಯಿಂದ ಮಾತ್ರವಲ್ಲದೆ ಗೋವಾ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯದಿಂದಲೂ ಅನೇಕ ಭಕ್ತರು ದೇವಿಯ ದರ್ಶನ ಪಡೆಯಲು ಆಗಮಿಸಿದ್ದ ನೂರಾರು ಭಕ್ತರು ದೋಣಿಗಳ ಮೂಲಕ ತೆರಳಿ ಕಾಳಿಕಾ ಮಾತೆಯ ದರ್ಶನ ಪಡೆದರು.
Karwar| ಡಿ28 ಕಾರವಾರದ ಈ ಭಾಗದಲ್ಲಿ ಒಂದು ದಿನ ಮೀನುಗಾರಿಕೆ ನಿಷೇಧ|ಕಾರಣ ಇಲ್ಲಿದೆ.
ಜಾತ್ರೆಯ ಮೊದಲ ದಿನವಾದ ಹೋಮ ಹವನ ಸೇರಿದಂತೆ ವಿಶೇಷ ಪೂಜೆ ಸಲ್ಲಿಸಲಾಯಿತು. ಗುರುವಾರ ಭಕ್ತರು ದೀಪ ಹಚ್ಚುವ ಹಾಗೂ ದೇವಿಗೆ ಲಿಂಬೆ ಹಣ್ಣಿನ ಹಾರ ನೀಡುವ ಮೂಲಕ ಇಷ್ಟಾರ್ಥಗಳನ್ನು ಪ್ರಾರ್ಥಿಸಿಕೊಂಡರು.
ನಿಂಬೆ ಹಣ್ಣಿನ ವಿಶೇಷ

ಈ ದೇವಿಗೆ ಇಷ್ಟಾರ್ಥ ಸಿದ್ದಿಗಾಗಿ ನಿಂಬೆಹಣ್ಣನ್ನು ನೀಡಲಾಗುತ್ತದೆ. ನಿಂಬೆಹಣ್ಣಿನ ಹಾರ ಮಾಡಿ ದೇವಿಗೆ ಅರ್ಪಣೆ ಮಾಡುವುದು ಇಲ್ಲಿನ ವಿಶೇಷ.
ಹರಕೆ ಕಟ್ಟಿಕೊಳ್ಳುವವರು ನಿಂಬೆಹಣ್ಣಿನ ಹಾರ ಹಾಕುವ ಹರಕೆ ಕಟ್ಟಿಕೊಳ್ಳುತ್ತಾರೆ.ಈಮೂಲಕ ಪ್ರಾರ್ಥನೆ ಸಲ್ಲಿಸುವ ಭಕ್ತರು ,ಇಷ್ಟಾರ್ಥ ನೆರವೇರಿದ ನಂತರ ಕಾಳಿ ದೇವಿಗೆ ನಿಂಬೆ ಹಣ್ಣಿನ ಹಾರವನ್ನು ಹರಕೆ ರೂಪದಲ್ಲಿ ಸಲ್ಲಿಕೆ ಮಾಡುತ್ತಾರೆ.







