Karwar |ಬೇಡ್ತಿ,ವರದಾ ನದಿ ತಿರುವು ಯೋಜನೆ, ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಮಾಡುವುದಾಗಿ -ಡಿಕೆ ಶಿವಕುಮಾರ್ ಪುನರುಚ್ಛಾರ

Karwar: Deputy CM DK Shivakumar reiterates Bedthi–Varada river linking and Sharavathi Pump Storage Project.
Deputy Chief Minister DK Shivakumar addressing media in Karwar about Bedthi–Varada river linking, Sharavathi pump storage project and coastal tourism policy. Deputy Chief Minister DK Shivakumar addressing media in Karwar about Bedthi–Varada river linking, Sharavathi pump storage project and coastal tourism policy.
DK shivkumar

Karwar |ಬೇಡ್ತಿ,ವರದಾ ನದಿ ತಿರುವು ಯೋಜನೆ, ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಮಾಡುವುದಾಗಿ -ಡಿಕೆ ಶಿವಕುಮಾರ್ ಪುನರುಚ್ಛಾರ.

ಕಾರವಾರ  :- ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ದಿ ಮಾಡಲು ನಮ್ಮ ಸರ್ಕಾರ ತಿರ್ಮಾನಿಸಿದ್ದು ಕಾರವಾರ (karwar) ,ಉಡುಪಿ ಮಂಗಳೂರು ಪ್ರದೇಶದ ಟೂರಿಸಮ್ ಅಭಿವೃದ್ಧಿಗೆ ಹೊಸ ಟೂರಿಸಮ್ ಪಾಲಿಸಿ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಕಾರವಾರದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

Karwar|ಕಾರವಾರದಲ್ಲಿ ಸಬ್ ಮೆರಿನ್ ನಲ್ಲಿ ಪ್ರಯಾಣ ಬೆಳಸಿದ ರಾಷ್ಟ್ರಪತಿ ಮುರ್ಮು.

Advertisement

ಮಾಧ್ಯಮಗಳ ಜೊತೆ ಮಾತನಾಡಿದ ಅವರುಹೊಸ ಪ್ರವಾಸೋದ್ಯಮ ನೀತಿ ರೂಪಿಸಲು ಸರ್ಕಾರ ನಿರ್ಧರಿಸಿದೆ ಪಬ್ಲಿಕ್ ಪ್ರೈವೇಟ್ ಪಾಟ್ನರ್ ರ್ಶೀಪ್ ನಲ್ಲಿ ಪ್ರವಾಸೋಧ್ಯಮ ಅಭಿವೃದ್ದಿಗೆ ಆದ್ಯತೆ ನೀಡಲಾಗುತ್ತಿದೆ.

ಗೋವಾ, ಮುಂಬೈ, ಸೌದಿ ಮತ್ತು ವಿದೇಶದ ಕಡೆ ನಮ್ಮ ಯುವಕರು ಪ್ರಯಾಣಿಸುತ್ತಿದ್ದಾರೆ,ಯುವಕರ ಶಕ್ತಿ ಮತ್ತು ನೈಸರ್ಗೀಕ ಸಂಪತ್ತು ಬಳಸಲು ನಿರ್ಧರಿಸಿದ್ದೇವೆ.ಜನವರಿ 10 ರಂದು ಕರಾವಳಿ ಮಲೆನಾಡು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ಕರೆದಿದ್ದೇನೆ,ದೇಶ ವಿದೇಶದ ಪ್ರಮುಖ ಬಂಡವಾಳ ಹೂಡಿಕೆದಾರರಿಗೆ ಅಹ್ವಾನಿಸಿದ್ದೇವೆ

ಅವರ ಸಲಹೆ ಮತ್ತು ಮಾರ್ಗದರ್ಶನವವನ್ನ ಪರಿಗಣಿಸಲಾಗುವುದು,ನಾನು ಜಿಲ್ಲಾ ಮಂತ್ರಿಗಳು ಹಾಗೂ ಪ್ರವಾಸೋಧ್ಯಮ ಇಲಾಖೆ ಸಚಿವರು ಈ ಸಭೆಯಲ್ಲಿ ಭಾಗಿಯಾಗಲಿದ್ದೇವೆ ಎಂದರು.

ಇನ್ನು ಕರಾವಳಿ ಪ್ರವಾಸೋದ್ಯಮ ಕ್ಕೆ ಹೊಸ ನೀತಿ ರೂಪಿಸುವ ಜವಬ್ದಾರಿ ನಾನೇ ಹೊತ್ತಿದ್ದೇನೆ,ಕಾರವಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 210 ಕೋಟಿ ರೂಪಾಯಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ,ಮೂರು ಏಕರೆಗಿಂತ ಕಡಿಮೆ ಅರಣ್ಯ ಪ್ರದೇಶ ಒತ್ತುವರಿ ಮಾಡಿದ ಬಡವರಿಗೆ ಒಕ್ಕಲು ಎಬ್ಬಿಸುವುದಿಲ್ಲ,ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾತನಾಡಿದ್ದೇನೆ,ಅರಣ್ಯ ಅತಿಕ್ರಮಣ ಮಾಡಿದ ಬಡವರ ರಕ್ಷಣೆಗೆ ನಮ್ಮ ಸರ್ಕಾರ ಬದ್ದವಾಗಿದೆ ಎಂದರು.

Deputy Chief Minister DK Shivakumar addressing media in Karwar about Bedthi–Varada river linking, Sharavathi pump storage project and coastal tourism policy.
DK shivkumar

ವರದಾ ಬೇಡ್ತಿ ನದಿ ಜೋಡಣೆ ಕುರಿತು ಮಾತನಾಡಿದ ಅವರು ಕೆಲವರು ಎಲ್ಲದಕ್ಕೂ ವಿರೋಧ ಮಾಡ್ತಾರೆ ಎನೂ ಮಾಡಲು ಆಗುವುದಿಲ್ಲ,ರಸ್ತೆ ಅಗಲಿಕರಣ ಮಾಡಲು ಜನ ವಿರೋಧ ಮಾಡ್ತಾರೆ,ಕಾರ್ಖಾನೆ ತಂದ್ರು ವಿರೋಧ ಮಾಡ್ತಾರೆ,ಸೇತುವೆ  ಮಾಡಿದ್ರು ವಿರೋಧ ಮಾಡ್ತಾರೆ ಎಂದರು.

Karnataka| ಭೂಕುಸಿತ ಭೀತಿ 163 ಅಪಾಯ ಪ್ರದೇಶ ಗುರುತು,ಅನಾಹುತ ತಡೆಗೆ 66 ಕೋಟಿ ಬಿಡುಗಡೆ

ಇನ್ನು ಶರಾವತಿ ಪಂಪ ಸ್ಟೋರೆಜ್ ಯೋಜನೆಗೆ ಸ್ಥಳೀಯರ ವಿರೋಧದ ಬಗ್ಗೆ ಮಾತನಾಡಿದ ಅವರು ಸ್ವಿಜರ್ಲ್ಯಾಂಡ್ ಗೆ ಹೋಗಿ ಇದರ ಬಗ್ಗೆ ಅಧ್ಯಯನ ಮಾಡಿದ್ದೇನೆ,ಸುಮಾರು 100 ರಿಂದ 200 ಹೆಕ್ಟರ್ ಅರಣ್ಯ ದಲ್ಲಿ ಈ ಯೋಜನೆ ಮಾಡಲಾಗುತ್ತದೆ,ವಿರೋಧ ಮಾಡುವ ರೀತಿಯಲ್ಲಿ ಯಾವುದೇ ಸಮಸ್ಯೆ ಆಗಲ್ಲ,ಎಲ್ಲದಕ್ಕೂ ವಿರೋಧ ಮಾಡಿದ್ರೆ ಅಭಿವೃದ್ದಿ ಮಾಡುವುದಿಲ್ಲ ಎಂದು ಶರಾವತಿ ಪಂಪ್ ಸ್ಟೋರೇಜ್ ಯೋಜನೆ ಯನ್ನು ಸಮರ್ಥಿಸಿಕೊಂಡರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement