Karwar|ಕಾರವಾರದಲ್ಲಿ ಸಬ್ ಮೆರಿನ್ ನಲ್ಲಿ ಪ್ರಯಾಣ ಬೆಳಸಿದ ರಾಷ್ಟ್ರಪತಿ ಮುರ್ಮು.
Karwar news (28December 2025 ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ಇದೇ ಮೊದಲಬಾರಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ(karwar) ಕದಂಬ ನೌಕಾನೆಲೆಗೆ ಆಗಮಿಸಿ ಅರಬ್ಬಿ ಸಮುದ್ರದಲ್ಲಿ ಐ. ಎನ್. ಎಸ್. ವಾಗ್ಶೀರ್ ಸಬ್ ಮೇರಿನ್ ನಲ್ಲಿ ಪ್ರಯಾಣಿಸಿದರು.

ಈ ಮೂಲಕ ಸಬ್ ಮೇರಿನ್ ನಲ್ಲಿ ಪ್ರಯಾಣಿಸಿದ 2 ನೇ ರಾಷ್ಟಪತಿ ಎಂಬ ದಾಖಲೆ ಬರೆದರು. ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಬರಮಾಡಿಕೊಂಡರು.
Karwar| ಡಿ28 ಕಾರವಾರದ ಈ ಭಾಗದಲ್ಲಿ ಒಂದು ದಿನ ಮೀನುಗಾರಿಕೆ ನಿಷೇಧ|ಕಾರಣ ಇಲ್ಲಿದೆ.
ಏಷ್ಯದ ಅತೀ ದೊಡ್ಡ ನೌಕಾ ನೆಲೆ ಆಗಿರುವ ಕಾರವಾರದ ಕದಂಬ ನೌಕಾನೆಲೆ ಫೇಸ್ -2 ಕಾಮಗಾರಿ ಸಹ ಮುಖ್ಯಾಯವಾಗಿದ್ದು ಯುದ್ದ ಹಡಗುಗಳು, ಸಬ್ ಮೆರಿನ್ ಗಳ ನಿಲ್ದಾಣ ರತಾಣವಾಗಿದ್ದು , ರಿಪೇರಿ ಯಾರ್ಡ ಸಹ ಇದೇ ಭಾಗದಲ್ಲಿ ನಿರ್ಮಾಣವಾಗುತ್ತಿದೆ. ಇದೀಗ ರಾಷ್ಟ್ರಪತಿ ಮುರ್ಮು ಭೇಟಿ ನೀಡಿ ಸಬ್ ಮೆರಿನ್ ನಲ್ಲಿ ಒಂದು ತಾಸುಗಳ ಐತಿಹಾಸಿಕ ಪ್ರಯಾಣ ನಡೆಸಿದರು.
Karwar|ಸಿಲೆಂಡರ್ ಸ್ಪೋಟ-ಲಕ್ಷಾಂತರ ರುಪಾಯಿ ಹಾನಿ
ಈ ಸಂದರ್ಭದಲ್ಲಿ ರಿಯಲ್ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಟಿ, ಚೀಫ್ ಆಫ್ ನೇವಲ್ ಸ್ಟಾಪ್ ಮತ್ತು ರಿಯರ್ ಅಡ್ಮಿರಲ್ ವಿಕ್ರಂ ಮೆನನ್ ,ಪ್ಲಾಬ್ ಆಫೀಸರ್ ಕರ್ನಾಟಕ ನೇವಲ್ ಏರಿಯ ಅಧಿಕಾರಿಗಳ ಸಾಥ್ ನೀಡಿದರು.







